ಇತ್ತೀಚಿನ ಸುದ್ದಿ
ಕೇರಳದ ಕಣ್ಣೂರಿನಲ್ಲಿ ಕಚ್ಚಾ ಬಾಂಬ್ ಸ್ಫೋಟ: ಅಸ್ಸಾಂ ಮೂಲದ ತಂದೆ – ಮಗ ದಾರುಣ ಸಾವು
08/07/2022, 21:44
ಸಾಂದರ್ಭಿಕ ಚಿತ್ರ
ತಿರುವನಂತಪುರ(reporterkarnataka.com): ಕಚ್ಚಾ ಬಾಂಬ್ ಸ್ಫೋಟಗೊಂಡು ತಂದೆ, ಮಗ ಸಾವನ್ನಪ್ಪಿರುವ ಭೀಕರ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ.
ಅಸ್ಸಾಂ ಮೂಲದ ಫೈಝಲ್ ಖಾನ್ (45) ಪುತ್ರ ಶಾಹೀದುಲ್ (22) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಇವರು ಕಣ್ಣೂರಿನಲ್ಲಿ ಗುಜರಿ ಮಾರಾಟದ ಕೆಲಸ ಮಾಡಿಕೊಂಡಿದ್ದು, ಗುಜರಿ ಸಂಗ್ರಹದ ವೇಳೆ ಸಿಕ್ಕಿದ್ದ ಸ್ಟೀಲ್ ಡಬ್ಬವೊಂದನ್ನು ಮನೆಗೆ ತಂದಿದ್ದರು. ಅದನ್ನು ತೆರೆದಾಗ ಭೀಕರ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಫೋಟದ ತೀವ್ರತೆಗೆ ಮನೆಯ ಛಾವಣಿ ಛಿದ್ರಗೊಂಡಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ಆರಂಭಗೊಂಡಿದೆ.