ಇತ್ತೀಚಿನ ಸುದ್ದಿ
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದಿಂದ ಉಪನ್ಯಾಸಕ ಸತೀಶ್ ಪಿ. ಅವರಿಗೆ ಬೀಳ್ಕೊಡುಗೆ
03/07/2022, 22:35
ಚಿತ್ರ /ವರದಿ :ಅನುಷ್ ಪಂಡಿತ್ ಮಂಗಳೂರು
ಮಂಗಳೂರು(reporterkarnataka.com):ನಗರದ ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ಉಪನ್ಯಾಸಕ ಸತೀಶ್ ಪಿ. ಅವರಿಗೆ ಬೀಳ್ಕೊಡುಗೆ ಸಮಾರಂಭ ಕಾಲೇಜಿನ ಸಭಾಂಗಣದಲ್ಲಿ ಜರುಗಿತು.
ಕಾಲೇಜಿನ ಪ್ರಾಂಶುಪಾಲ ಡಾ.ಸುಪ್ರಿಯಾನ್ ಮೊಂತೆರೋ ಮಾತನಾಡಿ, ಕಾಲೇಜಿಗೆ ಅನೇಕ ಕೊಡುಗೆ ಸತೀಶ್ ಪಿ. ನೀಡಿದ್ದಾರೆ. ಶಾಲಾ ಕಟ್ಟಡ ರಿಪೇರಿ ಕಾರ್ಯಕ್ರಮದಲ್ಲಿ ಮುತುವರ್ಜಿ ವಹಿಸಿದ್ದಾರೆ ಎಂದರು.
ಶಿಕ್ಷಕಿ ಪ್ಲೇವಿ ಮಾತನಾಡಿ, ಅವರು ಎಲ್ಲರಿಗೂ ಪ್ರಿಯವಾಗಿರುವ ಉತ್ತಮ ಶಿಕ್ಷಕ, ಜೀವನದ ಎಲ್ಲಾ ವಿಭಾಗಗಳಲ್ಲಿಯು ಸಕ್ಸಸ್ ಪಡೆದಿದ್ದಾರೆ ಎಂದು ನುಡಿದರು.
ಸತೀಶ್ ಪಿ. ಮಾತನಾಡಿ, ಬಡತನದಲ್ಲೇ ಬೆಳೆದರೂ ತಂದೆ ತಾಯಿ ಶಿಕ್ಷಣಕ್ಕೆ ಯಾವತ್ತು ಅಡ್ಡಿಪಡಿಸಲಿಲ್ಲ. ನಾನು ಶಿಕ್ಷಕ ನಾಗುತ್ತೇನೆ ಎಂದು ಅಂದು ಕೊಂಡಿರಲಿಲ್ಲ. ಕಲಿಬೇಕೆಂಬ ಛಲ ಇದ್ದರೆ ಬಡತನ ಅಡ್ಡಿಯಾಗುವುದಿಲ್ಲ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಸತೀಶ್ ಪಿ. ದಂಪತಿಯನ್ನು ಸನ್ಮಾನಿಸಲಾಯಿತು.
ಉಪನ್ಯಾಸಕರುಗಳಾದ ಫಿಲೋಮಿನಾ ಲೋಬೊ, ಡಾ. ಶಿವಪ್ರಕಾಶ್, ಅಸುಂಡಿ, ದಿವಾಕರ್ ಶೆಟ್ಟಿ, ಚಂದ್ರಕಲಾ, ಆಶಾ, ಪ್ರಸನ್ನ, ಪ್ರಕಾಶ್ ಹಾಗೂ ಪುತ್ರ ನಾಗಭೂಷಣ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ತಮ್ಮ ಅನಿಸಿಕೆಯನ್ನು ಬೀಳ್ಕೊಡುಗೆ ಸಮಾರಂಭದಲ್ಲಿ ಹಂಚಿಕೊಂಡರು.