ಇತ್ತೀಚಿನ ಸುದ್ದಿ
ಕೆನರಾ ಕಾಲೇಜಿನ ರೋವರ್ಸ್ ಹಾಗೂ ರೇಂಜರ್ಸ್ ಘಟಕದಿಂದ ತಣ್ಣೀರುಬಾವಿ ಕಡಲ ತೀರದಲ್ಲಿ ಸ್ವಚ್ಛತಾ ಕಾರ್ಯಕ್ರಮ
27/06/2022, 14:15
ಮಂಗಳೂರು(reporterkarnataka.com):ಕೆನರಾ ಕಾಲೇಜಿನ ರೋವರ್ಸ್ ಹಾಗೂ ರೇಂಜರ್ಸ್ ಘಟಕದ ವತಿಯಿಂದ ತಣ್ಣೀರುಬಾವಿ ಕಡಲ ತೀರದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಉತ್ಸಾಹಭರಿತ ವಿಧ್ಯಾರ್ಥಿಗಳು ಸುತ್ತಮುತ್ತಲಿನ ಪರಿಸರವನ್ನು,ಸ್ವಚ್ಛಗೊಳಿಸಿದರು.
ರೋವರ್ಸ್ ಸ್ಕೌಟ್ ನಾಯಕ ಕಾರ್ತಿಕ್ ಕಾಮತ್ ಹಾಗೂ ರೇಂಜರ್ಸ್ ನಾಯಕಿ ಧನಶ್ರೀ ಕುಲಕರ್ಣಿ ಉಪಸ್ಥಿತರಿದ್ದು, ಅಗತ್ಯ ಕ್ರಮಗಳನ್ನು ಕೈಗೊಂಡು ವಿದ್ಯಾರ್ಥಿಗಳೊಂದಿಗೆ ಸ್ವಚ್ಛತೆಯಲ್ಲಿ ಭಾಗವಹಿಸಿದರು.