1:57 AM Thursday28 - November 2024
ಬ್ರೇಕಿಂಗ್ ನ್ಯೂಸ್
ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ, ಗರ್ಭಿಣಿಯರ ಸಾವು: ತನಿಖೆಗೆ ಅಗ್ರಹಿಸಿ ಜನವಾದಿ ಮಹಿಳಾ ಸಂಘಟನೆ… ಲಂಡನ್ ವಾಲ್ವ್ಸ್ 2024 ರಲ್ಲಿ ಮಿಂಚಿದ ಭಾರತ: ಹೃದಯ ಕವಾಟ ಆವಿಷ್ಕಾರ ‘ಮೈವಾಲ್… ಹುಣಸಗಿ: ವಿದ್ಯಾರ್ಥಿಗಳಿಂದ ಕೆಎಸ್ಸಾರ್ಟಿಸಿ ಬಸ್ ತಡೆದು ಪ್ರತಿಭಟನೆ; ಸಾರ್ವಜನಿಕರ ಸಾಥ್ ಅಡಿಕೆ ಬೆಳೆಗಾರರ ಸಮಸ್ಯೆ: ಕರಾವಳಿ ಸಂಸದರಿಂದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್… ಡಿ.8ರಂದು ಉರ್ವ ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬ: ಬಿಷಪ್ ಡಾ. ಪೀಟರ್… ಕರ್ತವ್ಯಲೋಪ: ಚಿಕ್ಕಮಗಳೂರು ನಗರ ಠಾಣೆ ಇನ್ಸ್ ಪೆಕ್ಟರ್ ರೇಣುಕಾ ಪ್ರಸಾದ್ ಅಮಾನತು ರಾಜ್ಯ ಸರಕಾರದ ಜನಪರ ಕೆಲಸಕ್ಕೆ ಮತದಾರರ ಜೈ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್… ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ…

ಇತ್ತೀಚಿನ ಸುದ್ದಿ

ಕೂಡ್ಲಿಗಿ: ಬೀದಿ ನಾಯಿಗಳ ಹಾವಳಿ, ಪಟ್ಟಣ ಪಂಚಾಯಿತಿ ಆಡಳಿತ ನಿರ್ಲಕ್ಷ್ಯ; ನಾಗರಿಕರ ಆಕ್ರೋಶ

26/06/2022, 16:57

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ವಿಜಯನಗರ  ಜಿಲ್ಲೆ ಕೂಡ್ಲಿಗಿ ಪಟ್ಟಣದ 3ನೇ ವಾರ್ಡ್ ನಲ್ಲಿ, ಬಾಲಕನ ಮೇಲೆ ಬೀದಿನಾಯಿ ದಾಳಿಯಿಂದಾಗಿ ಬಾಲಕ ಎಮುನಪ್ಪ ತೀವ್ರ ಗಾಯಗೊಂಡಿರುವ ಹೃದಯ ವಿದ್ರಾವಕ ಘಟನೆ ಜರುಗಿದೆ. 


ನಾಯಿಗಳು ಒಟ್ಟಗೇ ದಾಳಿ ಮಾಡಿದ್ದು, ಹಂದಿಯಂತೆ ಬಾಲಕನನ್ನು ಹಿಡಿದೆಳೆದಾಡಿವೆ. ಅದೃಷ್ಟ  ಅರುಣ ಎಂಬುವರು ಬಾಲಕನನ್ನು ನಾಯಿಗಳಿಂದ ಕಾಪಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬಾಲಕರ ಪೋಷಕರು ಹಾಗೂ ನಾಗರೀಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ, ಬಯಲು ಅರ್ಕಸಾಲಿ ಪಕ್ಕೀಪ್ಪರವರ ಮಗ ಎಮುನಪ್ಪ  ಬಾಲಕ ಬೀದಿ ನಾಯಿಗಳ ದಾಳಿ ತೀವ್ರ ಗಾಯಗೊಂಡಿದ್ದಾನೆ. ಇದು ಕೇವಲ 2ನೇ ವಾರ್ಡಿನ ಸಮಸ್ಯೆ ಮಾತ್ರವಲ್ಲ, ಬೀದಿ ನಾಯಿಗಳ ಹಾವಳಿ ಪಟ್ಟಣದ ಗಲ್ಲಿ ಗಲ್ಲಿ ಗಳಲ್ಲಿದ್ದು, ನಾಗರೀಕರು ತಮ್ಮ ದೂರುಗಳನ್ನು ಸಾಕಷ್ಟು ಬಾರಿ  ಪಟ್ಟಣ ಪಂಚಾಯ್ತಿ ಗೆ ನೀಡಿದ್ದು. ನಿರ್ಲಕ್ಷ್ಯಕ್ಕೆ  ಸಂಬಂದಿಸಿದಂತೆ ನಾಗರೀಕರು ತೀವ್ರ ಆಕ್ರೋಶ ವ್ಯೆಕ್ತಪಡಿಸಿದ್ದಾರೆ. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಹಾಗೂ ಪ್ರಮಖ ವೃತ್ತ ಗಳಲ್ಲಿ, ಪ್ರತಿ ಗಲ್ಲಿಗಳಲ್ಲಿ ಹತ್ತಾರು ನಾಯಿಗಳಿದ್ದು ಸಂಚಾರಕ್ಕೆ ತೀವ್ರ ಅಡತಡೆ ಯಾಗುತ್ತಿದೆ. ಕೆಲ ಗಲ್ಲಿಗಳಲ್ಲಿ ಬೀದಿ ನಾಯಿಗಳ ಹಾವಳಿ  ಮಿತಿ ಮೀರಿದ್ದು, ಮಕ್ಕಳ ಮೇಲೆ ದಾಳಿ ಮಾಡಿರುವ ಘಟನೆಗಳು ಸಾಕಷ್ಟು ಬಾರಿ ಜರುಗಿದ್ದು ತಡವಾಗಿ ಬೆಳಕಿಗೆ ಬಂದಿವೆ. ಸಂಬಂಧಿಸಿದಂತೆ ನಾಗರೀಕರು ಕೆಲ ಪಪಂ ಜನಪ್ರತಿನಿಧಿಗಳಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ, ತಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ. ಬೀದಿ ನಾಯಿಗಳ ಮಿತಿ ಮೀರಿದ ಹಾವಳಿಯಿಂದಾಗಿ ನಾಗರೀಕರು ತೀವ್ರ ಆತಂಕ ದಿಂದ ಜೀವಿಸುವಂತಾಗಿದೆ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಫೀರೋಜ್ ಖಾನ್ ನಿರ್ಲಕ್ಷ್ಯ ಮನೋಭಾವ ತೋರುತ್ತಿದ್ದಾರೆ, ಇದು ಪಪಂ ಅಮಾನವೀಯ ನಡೆಯಾಗಿದೆ ಎಂದು ಕಠೋರವಾಗಿ ಖಂಡಿಸಿದ್ದಾರೆ.ಇದು ಹೀಗೆ ಮುಂದುವರೆದಲ್ಲಿ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಲಾಗುವುದು, ಹಾಗೂ ನ್ಯಾಯಾಲಯದಲ್ಲಿ ನಾಗರೀಕ ಹಿತಾಸಕ್ತಿ ಖಾಸಗೀ ದೂರು ದಾಖಲಿಸಲಾಗುವುದೆಂದು ಕೆಲ ಸಂಘಟನೆಗಳ ಹೋರಾಟಗಾರರು ಎಚ್ಚರಿಸಿದ್ದಾರೆ.ಈ ಸಂದರ್ಭದಲ್ಲಿ ಸಿಐಟಿಯು ಮುಖಂಡ ಗುನ್ನಳ್ಳಿ ರಾಘವೇಂದ್ರ, ವಾಲ್ಮೀಕಿ ಮುಖಂಡರಾದ ಕಡ್ಡಿ ಮಂಜುನಾಥ, ಬಾಣದ ಶಿವಶಂಕರ,ಈಶಪ್ಪ,ಮಂಜುನಾಥ, ನಾಗರಾಜ, ಕುರುಬರ ಕೊಟ್ರಮ್ಮ,ವೀರಣ್ಣ, ವಂದೇ ಮಾತರಂ ಜಾಗೃತಿ ವೇದಿಕೆ ಜೂಗುಲರ ಸೊಲ್ಲೇಶ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. 

ಇತ್ತೀಚಿನ ಸುದ್ದಿ

ಜಾಹೀರಾತು