9:00 PM Thursday28 - November 2024
ಬ್ರೇಕಿಂಗ್ ನ್ಯೂಸ್
ಹುಣಸಗಿ: ವಿದ್ಯಾರ್ಥಿಗಳಿಂದ ಕೆಎಸ್ಸಾರ್ಟಿಸಿ ಬಸ್ ತಡೆದು ಪ್ರತಿಭಟನೆ; ಸಾರ್ವಜನಿಕರ ಸಾಥ್ ಅಡಿಕೆ ಬೆಳೆಗಾರರ ಸಮಸ್ಯೆ: ಕರಾವಳಿ ಸಂಸದರಿಂದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್… ಡಿ.8ರಂದು ಉರ್ವ ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬ: ಬಿಷಪ್ ಡಾ. ಪೀಟರ್… ಕರ್ತವ್ಯಲೋಪ: ಚಿಕ್ಕಮಗಳೂರು ನಗರ ಠಾಣೆ ಇನ್ಸ್ ಪೆಕ್ಟರ್ ರೇಣುಕಾ ಪ್ರಸಾದ್ ಅಮಾನತು ರಾಜ್ಯ ಸರಕಾರದ ಜನಪರ ಕೆಲಸಕ್ಕೆ ಮತದಾರರ ಜೈ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್… ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ

ಇತ್ತೀಚಿನ ಸುದ್ದಿ

ವಾಮಂಜೂರು ಮಂಗಳಾಜ್ಯೋತಿ ಸಮಗ್ರ ಶಾಲೆಯಲ್ಲಿ ಪರಿಸರ ಸಂರಕ್ಷಣೆ ಮಾಹಿತಿ ಕಾರ್ಯಕ್ರಮ

25/06/2022, 19:19

ಮಂಗಳೂರು(reporterkarnataka.com): ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಸಂಯೋಜನೆಯಲ್ಲಿ ಪರಿಸರ ಮಾಹಿತಿ ಕಾರ್ಯಕ್ರಮ ಶುಕ್ರವಾರ ಬೆಳಗ್ಗೆ ವಾಮಂಜೂರು ಮಂಗಳಾಜ್ಯೋತಿ ಸಮಗ್ರ ಶಾಲೆಯಲ್ಲಿ ಜರಗಿತು. 


ಕಾವೂರು ವಲಯ ಮೇಲ್ವಿಚಾರಕಿ ಪ್ರೇಮಲತಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.

ಅವರು ಮಾತನಾಡಿದ ಹಿಂದಿನ ಮಕ್ಕಳೇ ಮುಂದಿನ ಜನಾಂಗ. ಪರಿಸರ ಸಂರಕ್ಷಣೆ ನಮ್ಮ ಕರ್ತವ್ಯ. ಮನೆಗೊಂದು ಗಿಡ ನೆಡುವ ಮೂಲಕ ಸ್ವಚ್ಛ ಪರಿಸರ ಸ್ವಾಸ್ತ್ಯ ಸಮಾಜ ನಾವೆಲ್ಲರೂ ಸೇರಿ ನಿರ್ಮಾಣ ಮಾಡುವ ಎಂದು ಕರೆ ನೀಡಿದರು.

ಶಾಲಾ ಮುಖ್ಯೋಪಾಧ್ಯಾಯ ರಮೇಶ್ ಮಾತನಾಡಿ    ಪರಿಸರ ಸಂರಕ್ಷಣೆಯು ಒಂದು ಉತ್ತಮ ಕಾರ್ಯಕ್ರಮವಾಗಿದ್ದು ಪರಿಸರ ಸಂರಕ್ಷಣೆಯು ನಾಗರಿಕ ಸಮಾಜದ ಕರ್ತವ್ಯವಾಗಿದೆ ಎಂದರು.  ಪಕ್ಕದ ಡಂಪಿಂಗ್ ಯಾರ್ಡ್ ಸೇರಿ ಕೈಗಾರಿಕೆಗಳಿಂದ ಹಾಗೂ ವಾಹನಗಳ ಮಾಲಿನ್ಯದಿಂದ ಉಸಿರಾಟದ ತೊಂದರೆ ಅಲ್ಲದೆ ಅನೇಕ ರೋಗ ರುಜಿನಗಳಿಗೆ ಕಾರಣವಾಗಿದೆ. ಹಾಗಾಗಿ ಪರಿಸರ ಸಂರಕ್ಷಣೆ ನಮ್ಮ ಹೊಣೆ ಎಂದರು. ಅಲ್ಲದೆ ಪ್ಲಾಸ್ಟಿಕ್ ಬಳಕೆ ನಿಷೇದ ಮಾಡುವುದು ಬಹಳ ಅನಿವಾರ್ಯವಾಗಿದೆ ಯಾಕೆಂದರೆ ಪ್ಲಾಸ್ಟಿಕ್ ನೂರಾರು ವರ್ಷ ಭೂಮಿಯಲ್ಲಿ ಕರಗದೆ ಭೂಮಿಯ ಪಲವತ್ತತೆಯನ್ನು ಕಡಿಮೆಗೊಳಿಸುವುದು ಅಲ್ಲದೆ ಪ್ಲಾಸ್ಟಿಕ್ ಪರಿಸರಕ್ಕೆ ಬಹಳಷ್ಟು ಹಾನಿಯನ್ನು ಉಂಟು ಮಾಡುತ್ತದೆ ಎಂದರು.

ಶಾಲಾ ಶಿಕ್ಷಕಿ ಕುಮಾರಿ ಜ್ಯೋತಿ ಪರಿಸರ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡಿದದರು.ಮಾವು ಹಲಸು ಹೆಬ್ಬಲಸು ಮುಂತಾದ ಹಣ್ಣುಗಳನ್ನು ನೀಡುವ ಮರಗಳಿಂದಾಗಿ ಪರಿಸರದ ಇತರ ಜೀವರಾಶಿಗಳಿಗೂ ಒಳಿತಾಗುತ್ತದೆ. ಅಲ್ಲದೆ ಔಷದಿಯ ಗುಣಗಳಿರುವ ಗಿಡಗಳಿಂದಾಗಿ ಮಾನವ ಸಂಕುಲಕ್ಕೆ ಬಹಳಷ್ಟು ಅನುಕೂಲವಾಗಿದೆ. ಹಾಗಾಗಿ ಮನೆಯ ಪರಿಸರದಲ್ಲಿ, ರಸ್ತೆಯ ಇಕ್ಕೆಲಗಳಲ್ಲಿ ಅಲ್ಲದೆ ಗುಡ್ಡಗಾಡು ಪ್ರದೇಶಗಳಲ್ಲಿ ಹಣ್ಣು ಹಂಪಲು ನೀಡುವ ಮರವಲ್ಲದೆ  ಔಷದೀಯ ಗುಣವಿರುವ ಗಿಡಗಳನ್ನು ನೆಡುವುದು ನಾಗರಿಕ ಸಮಾಜದ ಜವಾಬ್ದಾರಿಯಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೋಹನ್ ಪಚ್ಚನಾಡಿ ಮಾತನಾಡಿ ಮಾನವರು ಉಸಿರಾಡುವ ಸ್ವಚ್ಛ ಗಾಳಿಯನ್ನು ಹಣ ಕೊಟ್ಟು ಖರೀದಿಸುವಂತಹ ಪ್ರಮೇಯವು ನಮ್ಮ ದೇಶದ ರಾಜಧಾನಿಯಲ್ಲೇ ಇದ್ದು ಇದು ಮುಂದೆ ನಮ್ಮ ದಕ್ಷಿಣಕನ್ನಡಕ್ಕೂ ಇಂತಹ ಪರಿಸ್ಥಿತಿ ಬರಬಹುದು. ಯಾಕೆಂದರೆ ನಮ್ಮ ದಕ್ಷಿಣ ಕನ್ನಡದಲ್ಲಿ  ಈಗಾಗಲೇ ಬಹಳಷ್ಟು ಬೃಹತ್ ಕೈಗಾರಿಕೆಗಳು  ಇದ್ದು, ಇನ್ನೂ ಅನೇಕ ಬೃಹತ್ ಕೈಗಾರಿಕೆಗಳು ಮುಂದೆ ಅನುಷ್ಠಾನಗೊಳ್ಳಲಿದೆ. ಅಲ್ಲದೆ ರಸ್ತೆ ಅಗಲೀಕರಣದ ನೆಪದಲ್ಲಿ ಸಾವಿರಾರು ಮರಗಳು ಧರೆಗೆ ಉರುಳಿವೆ. ಇನ್ನೂ ಅನೇಕ ರಸ್ತೆಗಳು ಅಗಲೀಕರಣಗೊಳ್ಳುವ ಪ್ರಕ್ರಿಯೆಯಲ್ಲಿವೆ. ಅಲ್ಲದೆ ಗುಡ್ಡಗಾಡುಗಳನ್ನು ಕಡಿದು ನಗರ ನಿರ್ಮಾಣ ಮಾಡುವ ಭರದಲ್ಲಿ ಕಾಡು ಪ್ರಾಣಿಗಳು ನಿರ್ವಸಿತರಾಗಿ ನಗರವನ್ನು ಪ್ರವೇಶಿಸುವುದನ್ನು ದಿನನಿತ್ಯ ಕಾಣುತ್ತಿದ್ದೇವೆ.ಪಚ್ಚನಾಡಿಗೆ ಡಂಪಿಂಗ್ ಯಾರ್ಡ್ ಒಂದು ಶಾಪವಾಗಿದ್ದು, ನೊಣ ನುಸಿಗಳಿಂದ ಪರಿಸರದ ಸ್ವಾಸ್ತ್ಯವು ಹಾಳಾಗಿದ್ದು ಅಲ್ಲದೆ ದುರ್ನಾತ ಬೀರುವ ಅನಿಲದಿಂದಾಗಿ ಪರಿಸರಕ್ಕೆ ಹಾನಿಯಾಗುತ್ತಿದ್ದು, ಈ ವಠಾರದಲ್ಲಿ ಅನೇಕ ಶಾಲೆಗಳಿರುವುದನ್ನು ಗಮನಿಸಿದ ಈ ಹಿಂದಿನ ಜಿಲ್ಲಾಧಿಕಾರಿ ಭರತ್ ಲಾಲ್ ಮೀನರವರು ಮಂಗಳಜ್ಯೋತಿ ಶಾಲೆಯ ಎದುರು ಭಾಗದಲ್ಲಿ ಒಂದು ಸಣ್ಣ ಅರಣ್ಯವನ್ನು ನಿರ್ಮಿಸಿದ್ದು ಅದನ್ನು ಉಳಿಸಿ ಬೆಳೆಸುವ ಕರ್ತವ್ಯ ನಮ್ಮ ನಿಮ್ಮೆಲ್ಲರದ್ದು. ಆ ಮೂಲಕ ನಮ್ಮ ಪರಿಸರದ ಸ್ವಾಸ್ತ್ಯವನ್ನು ಕಾಪಾಡುವ ಎಂದು ಹೇಳಿದರು. ರಾಷ್ಟ್ರಪತಿಗಳಿಂದ ಪ್ರಶಸ್ತಿ ಪಡೆದ ಸಾಲುಮರದ ತಿಮ್ಮಕ್ಕ ನಮೆಗೆಲ್ಲರಿಗೂ ಪ್ರೇರಣೆಯಾಗಲಿ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ವಿವಿಧ ಬಾಗಗಳ ಪ್ರಮುಖರು, ಶಾಲೆಯ ಶಿಕ್ಷಕ ವೃಂದ, ಶಾಲೆಯ ವಿದ್ಯಾರ್ಥಿಗಳು ಅಲ್ಲದೆ ಅನೇಕ ಸ್ಥಳೀಯರು ಬಹಳಷ್ಟು ಸಂಖ್ಯೆಯಲ್ಲಿ ಸೇರಿದ್ದರು.

ಸೆಲ್ವ ಕುಮಾರ್ ಸ್ವಾಗತಿಸಿದರು.ಕೀರ್ತಿಕಾ ವಂದಿಸಿದರು.ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ವಿನಯ ಕಾರ್ಯಕ್ರಮ ನಿರೂಪಿಸಿದರು.

ಸಾಂಕೇತಿಕವಾಗಿ ಶಾಲಾ ವಠಾರದಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆ ಕಾರ್ಯಕ್ರಮವನ್ನು ಆಚರಿಸಲಾಯಿತು.

ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಮಾರಿಯೆಟ್, ವಲಯ ಅಧ್ಯಕ್ಷರಾದ ವನಿತಾ, ಪಚ್ಚನಾಡಿ ಒಕ್ಕೂಟ ಅಧ್ಯಕ್ಷರಾದ ಯಶವಾಣಿ, ವಾಮಂಜೂರು ಒಕ್ಕೂಟದ ಅಧ್ಯಕ್ಷರಾದ ಶಾಂತ, ಉಪಾಧ್ಯಕ್ಷರು ಜಗದೀಶ್ ಹಾಗೂ ಶಾಲಾ ಶಿಕ್ಷಕಿ ಜ್ಯೋತಿ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು