ಇತ್ತೀಚಿನ ಸುದ್ದಿ
ಶೋರೂಮ್ ಒಳಗಿದ್ದ 30 ವಾಹನ ಗಳ ಪೈಕಿ 6 ವಾಹನಗಳು ಭಸ್ಮವಾಗಿದ್ದು ಉಳಿದ ಎಲೆಕ್ಟ್ರಿಕಲ್
24/06/2022, 12:57
ಮಂಗಳೂರು(reporterkarnataka.com):ನಗರದ ಪಂಪ್ ವೆಲ್ ಬಳಿಯ ನಾಗೂರಿ ಪಟೇಲ್ ಹೌಸ್ ಸಮೀಪದ ಎಲೆಕ್ಟ್ರಿಕಲ್ ಸ್ಕೂಟರ್ ಶೋರೂಮ್ ನಲ್ಲಿ ಶುಕ್ರವಾರ ವಿದ್ಯುತ್ ಶಾಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಸಂಭವಿಸಿದ್ದು, 6ಕ್ಕೂ ಹೆಚ್ಚು ವಾಹನಗಳು ಸುಟ್ಟು ಭಸ್ಮವಾಗಿದೆ.
ಶೋರೂಮ್ ಒಳಗಿದ್ದ 30 ವಾಹನಗಳ ಪೈಕಿ 6 ವಾಹನಗಳು ಭಸ್ಮವಾಗಿದ್ದು ಉಳಿದ ಎಲೆಕ್ಟ್ರಿಕಲ್ ಟೂ ವೀಲರ್ ಗೆ ಬೆಂಕಿ ತಗುಲಿ ಡ್ಯಾಮೇಜ್ ಆಗಿದೆ. ಬಿಲ್ಡಿಂಗ್ ಪೈಟಿಂಗ್, ಒಳ ಗೋಡೆಗಳಿಗೆ ಹಾನಿಯಾಗಿದೆ. ಒಂದನೇ ಮಹಡಿ ಕಟ್ಟಡದ ಮನೆಗೆ ಬೆಂಕಿಯ ಶಾಖದಿಂದಾಗಿ ಪೇಂಟಿಂಗ್ ಡ್ಯಾಮೇಜ್ ಆಗಿದೆ.