9:34 AM Monday6 - May 2024
ಬ್ರೇಕಿಂಗ್ ನ್ಯೂಸ್
ರಾಜ್ಯದ 2ನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ; ಇಬ್ಬರು ಮಾಜಿ ಸಿಎಂ,… ಮಾಜಿ ಪ್ರಧಾನಿ ದೇವೇಗೌಡರಿಗೆ ನೀಡಿದ್ದ, ಸಂಸದ ಪ್ರಜ್ವಲ್ ರೇವಣ್ಣ ಬಳಸುತ್ತಿದ್ದ ಹಾಸನದ ಸರಕಾರಿ… ಎಸ್ಐಟಿ ತಂಡಕ್ಕೆ ಸ್ವತಃ ತಾನೇ ಗೇಟ್ ತೆರೆದ ಎಚ್.ಡಿ. ರೇವಣ್ಣ!: ಪುತ್ರನ ಬಂಧನದ… ಸೂರ್ಯಾಘಾತ: ವಿಟ್ಲ ಸಮೀಪ ಬಸ್ಸಿನ ಗ್ಲಾಸ್ ಒಡೆದು ಬಾಲಕ ಸಹಿತ 3 ಮಂದಿಗೆ… ಸುಬ್ರಹ್ಮಣ್ಯ: ನವ ವಿವಾಹಿತ ಸಿಡಿಲು ಬಡಿದು ದಾರುಣ ಸಾವು; 15 ದಿನಗಳ ಹಿಂದೆಯಷ್ಟೇ… ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ನೀರಿನ ಒಳಹರಿವು ಸ್ಥಗಿತ: ಮೇ 5ರಿಂದ ಪಾಲಿಕೆ… ಮುಳ್ಳೇರಿಯ: ಇತ್ತ ಮಗಳ ಮದುವೆಯ ಮದರಂಗಿ ಶಾಸ್ತ್ರ ನಡೆಯುತ್ತಿದ್ದಂತೆ ಅತ್ತ ಅಪ್ಪ ಆತ್ಮಹತ್ಯೆ ಕೊರೊನಾ ಲಸಿಕೆ ಕೋವಿಶೀಲ್ಡ್‌ ಅಡ್ಡ ಪರಿಣಾಮಗಳು: ಅಧ್ಯಯನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ… ಸೆಕ್ಸ್ ವೀಡಿಯೊ ಪ್ರಕರಣ: ಜೆಡಿಎಸ್ ನಾಯಕ ರೇವಣ್ಣಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನು… ಪ್ರಜ್ವಲ್ ರೇವಣ್ಣ ಪರ ಮತಯಾಚಿಸಿದ ಪ್ರಧಾನಿ ಮೋದಿ ಕ್ಷಮೆ ಕೇಳಲಿ: ಕಾಂಗ್ರೆಸ್ ನಾಯಕ…

ಇತ್ತೀಚಿನ ಸುದ್ದಿ

ಟ್ವಿಟ್ಟರ್‌ನಲ್ಲಿ ಬಂದಿದೆ ಹೊಸ ಫೀಚರ್: ಅಕ್ಷರಗಳ ಮಿತಿ 280ರಿಂದ 2,500ಕ್ಕೆ ಏರಿಕೆ

24/06/2022, 09:54

ಹೊಸದಿಲ್ಲಿ(reporterkarnataka.com):

ಟ್ವಿಟ್ಟರ್‌ ನಲ್ಲಿ ಹೊಸ ಫೀಚರ್ ಬಂದಿದೆ. ಟ್ವಿಟ್ಟರ್ ತನ್ನ ಅಕ್ಷರ ಮಿತಿಯನ್ನು ಏರಿಕೆ ಮಾಡಿದೆ. 280 ಅಕ್ಷರಗಳಿಂದ 2,500ಕ್ಕೆ ಹೆಚ್ಚಿಸಲು ಯೋಜಿಸಿದೆ. ಮೊದಲು ಟ್ವಿಟ್ಟರ್‌ನಲ್ಲಿ ಏನನ್ನಾದರೂ ಬರೆಯಲು ಮತ್ತು ಪೋಸ್ಟ್ ಮಾಡಬೇಕೆಂದರೆ ಕೇವಲ 280 ಅಕ್ಷರಗಳನ್ನು ಬರೆಯಬೇಕಾಗಿತ್ತು. ಇಲ್ಲವೇ ಮತ್ತೊಂದು ಟ್ವೀಟ್‌ ಮಾಡಿ ಲಿಂಕ್‌ ಮಾಡಬೇಕಿತ್ತ. ಇದೀಗ ಆ ಕಸರತ್ತು ಮಾಡಬೇಕಿಲ್ಲ. ಒಂದೇ ಟ್ವೀಟ್‌ನಲ್ಲಿ ಸುಮಾರು 2,500 ಪದಗಳನ್ನು ಬಳಸಬಹುದು.  ಈ ನಿಟ್ಟಿನಲ್ಲಿ `ನೋಟ್ಸ್’ ಎಂಬ ಹೊಸ ಫೀಚರ್ ಅನ್ನು ಪರಿಚಯಿಸಲಾಗುವುದು. ಈ ವೈಶಿಷ್ಟ್ಯವು ಪ್ರಸ್ತುತ ಪರೀಕ್ಷಾ ಹಂತದಲ್ಲಿದ್ದು, ಲಭ್ಯವಾದ ನಂತರ, ಬಳಕೆದಾರರು ತಮ್ಮದೇ ಆದ ದೀರ್ಘ ಸಂದೇಶಗಳನ್ನು ಪೋಸ್ಟ್ ಮಾಡಬಹುದು. ಇದರ ಜೊತೆಗೆ ಫೋಟೋಗಳು ಮತ್ತು ವೀಡಿಯೊಗಳನ್ನು ಕೂಡ ಸೇರಿಸಬಹುದು. ಈ ಹೊಸ ವೈಶಿಷ್ಟ್ಯವು Twitter ಟೈಮ್‌ಲೈನ್‌ನಲ್ಲಿ ಲಭ್ಯವಿರುತ್ತದೆ. ನೀವು ಮಾಡುವ ಈ ದೀರ್ಘ ಟ್ವೀಟ್ ಪೂರ್ವವೀಕ್ಷಣೆಯನ್ನು ಸಹ ನೀವು ಪರಿಶೀಲಿಸಬಹುದು. ಟ್ವಿಟರ್ ಈಗಾಗಲೇ ಯುಎಸ್, ಯುಕೆ, ಕೆನಡಾ ಮತ್ತು ಘಾನಾದಲ್ಲಿ ಪ್ರಾಯೋಗಿಕ ಹಂತದಲ್ಲಿದ್ದು, ಯಶಸ್ವಿಯಾದ ಬಳಿಕ ಸಾರ್ವಜನಿಕರಿಗೆ ಪರಿಚಯಿಸಲಾಗುವುದು.

ಈ ಟಿಪ್ಪಣಿಯನ್ನು ಹಂಚಿಕೊಳ್ಳಲು ಬಯಸುವವರಿಗೆ ಪ್ರತ್ಯೇಕವಾಗಿ ಲಿಂಕ್ ಅನ್ನು ಸಹ ಲಭ್ಯಗೊಳಿಸಲಾಗುತ್ತಿದೆ. 2017 ರ ಮೊದಲು, Twitter ನಲ್ಲಿ ಅಕ್ಷರಗಳ ಮಿತಿ 140 ಆಗಿತ್ತು. ನಂತರ ಮಿತಿಯನ್ನು 280 ಕ್ಕೆ ಹೆಚ್ಚಿಸಲಾಯಿತು.

ಇತ್ತೀಚಿನ ಸುದ್ದಿ

ಜಾಹೀರಾತು