ಇತ್ತೀಚಿನ ಸುದ್ದಿ
ಮಂಗಳೂರು ಕೆನರಾ ಸಂಧ್ಯಾ ಕಾಲೇಜಿನಲ್ಲಿ 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ
23/06/2022, 20:57
ಮಂಗಳೂರು(reporterkarnataka.com): ಕೆನರಾ ಸಂಧ್ಯಾ ಕಾಲೇಜಿನಲ್ಲಿ 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂನ್ 21 ರಂದು ಆಚರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲೆ ಪ್ರೊ. ಅನಿಲಾ, ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಮಹತ್ವವನ್ನು ವಿವರಿಸಿದರು. ಕಾಲೇಜಿನ ಸಂಚಾಲಕರಾದ ಸಿ ಎ ಜಗನ್ನಾಥ್ ಕಾಮತ್ ಮಾತನಾಡಿ, ಯೋಗ ಮನಸ್ಸಿನ ಮೇಲೆ ವಿಶ್ರಾಂತಿ ಸಾಧಿಸಲು, ನಮ್ಮ ಒತ್ತಡ ಮತ್ತು ಆತಂಕವನ್ನು ಬಿಡುಗಡೆ ಮಾಡುವ ಮಾಧ್ಯಮ ಎಂದು ವಿವರಿಸಿದರು.
ಯೋಗ ಶಿಕ್ಷಕಿ ಉಷಾ ನಾಯಕ್, ವಿದ್ಯಾರ್ಥಿಗಳಿಗೆ ಯೋಗಾಭ್ಯಾಸ ತಿಳಿಸಿ ಪ್ರತಿ ದಿನ ಯೋಗವನ್ನು ಮಾಡಿ ರೋಗ ಮುಕ್ತಿ ಆಗುವುದರಲ್ಲಿ ಯಶಸ್ವಿ ಸಾಧ್ಯ ಎಂದು ತಿಳಿಸಿದರು.
ವಿದ್ಯಾರ್ಥಿ ಆನಂದ್ ಕಾರ್ಯಕ್ರಮ ನಿರೂಪಿಸಿದರು.