ಇತ್ತೀಚಿನ ಸುದ್ದಿ
ತಮಿಳುನಾಡು:10 ರೂ.ಗಳ ನಾಣ್ಯ ಕೊಟ್ಟು 6 ಲಕ್ಷ ಮೌಲ್ಯದ ಕಾರು ಖರೀದಿಸಿದ ಅಂಗಡಿ ಮಾಲೀಕ!
21/06/2022, 17:51

ಚೆನ್ನೈ(reporterkarnataka.com): ಜನರು 10 ರೂ. ನಾಣ್ಯವನ್ನು ಸ್ವೀಕರಿಸಲು ನಿರಾಕರಿಸುತ್ತಿರುವುದರಿಂದ ಬೇಸತ್ತ ತಮಿಳುನಾಡಿನ ವ್ಯಕ್ತಿಯೊಬ್ಬರು 10 ರೂ. ನಾಣ್ಯಗಳನ್ನು ಸಂಗ್ರಹಿಸಿ ಅದರಿಂದಲೇ 6 ಲಕ್ಷ ರೂ.ಮೌಲ್ಯದ ಕಾರು ಖರೀದಿಸಿದ್ದಾರೆ.
ಅರೂರು ನಿವಾಸಿಯಾದ ವೆಟ್ರಿವೇಲ್ ಎಂಬವರು ತಾಯಿಯ ಅಂಗಡಿಯನ್ನು ನಡೆಸುತ್ತಿದ್ದರು. ಗ್ರಾಹಕರು 10 ರೂ. ನಾಣ್ಯವನ್ನು ಸ್ವೀಕರಿಸಲು ನಿರಾಕರಿಸಿದ್ದರು. ಹೀಗಾಗಿ ಅಂಗಡಿಯಲ್ಲಿ 10 ರೂ. ನಾಣ್ಯಗಳು ದೊಡ್ಡ ಮಟ್ಟದಲ್ಲಿ ಸಂಗ್ರಹವಾಗಿದ್ದವು. 10 ರೂ. ನಾಣ್ಯಗಳು ಇನ್ನೂ ಬಳಕೆಗೆ ಯೋಗ್ಯವಾಗಿವೆ ಎಂದು ಅರಿವು ಮೂಡಿಸಲು ಸುಮಾರು 6 ಲಕ್ಷ ರೂ. ಮೌಲ್ಯದ ನಾಣ್ಯಗಳನ್ನು ಸಂಗ್ರಹಿಸಿ ಅದರಿಂದ ವೆಟ್ರಿವೇಲ ಕಾರನ್ನು ಖರೀದಿಸಿದ್ದಾರೆ.
ದೊಡ್ಡ ಚೀಲದಲ್ಲಿ ನಾಣ್ಯಗಳೊಂದಿಗೆ ಧರ್ಮಪುರಿಯ ಕಾರು ಶೋ ರೂಮಿಗೆ ಕಾರು ಖರೀದಿಸಲು ಬಂದಾಗ ಮೊದಲು ಅಲ್ಲಿನ ಸಿಬ್ಬಂದಿಗಳಿಗೆ ಆಶ್ಚರ್ಯವಾಯಿತು. ನಂತರ ವೆಟ್ರಿವೇಲ್ ದೃಢ ನಿರ್ಣಯ ನೋಡಿ ಕಾರು ಮಾರಾಟ ಮಾಡಲು ಒಪ್ಪಿಕೊಂಡರು. ಚೀಲಗಟ್ಟಲೆ ನಾಣ್ಯಗಳನ್ನು ಎಣಿಸಿದ ನಂತರ ಕೊನೆಗೂ ಮಾರುತಿ ಸುಜುಕಿ ಇಕೋ ಕಾರನ್ನು ವೆಟ್ರಿವೇಲನಿಗೆ ಹಸ್ತಾಂತರಿಸಲಾಗಿದೆ’ ಎಂದು ಶೋ ರೂಂನವರು ಹೇಳಿದ್ದಾರೆ.