12:02 AM Saturday13 - September 2025
ಬ್ರೇಕಿಂಗ್ ನ್ಯೂಸ್
Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು… Kodagu | ಕಾಲೇಜಿನಲ್ಲಿ ಮಚ್ಚು ಹಿಡಿದು ರೀಲ್ಸ್: ವಿದ್ಯಾರ್ಥಿ ವಿರುದ್ದ ಪ್ರಕರಣ ದಾಖಲು;… Kodagu | ಕೇರಳದ ಕಸಾಯಿಖಾನೆಗೆ ಕೋಣಗಳ ಸಾಗಾಟ: 34 ಕೋಣಗಳ ರಕ್ಷಣೆ ಸಂತೋಷದ ಬಾಗಿಲಿನತ್ತ ಪೂಜಾಳ ಪಯಣ: ಬಿಹಾರದಲ್ಲಿರುವ ಕುಟುಂಬ ಜತೆ ಪುನರ್ಮಿಲನ ಕರಾವಳಿಯಲ್ಲಿ ಸಂಭ್ರಮದ ಮೊಂತಿ ಹಬ್ಬ: ಚರ್ಚ್ ಗಳಲ್ಲಿ ವಿಶೇಷ ಬಲಿಪೂಜೆ; ತೆನೆ ವಿತರಣೆ ಮೈಸೂರು ದಸರಾ: ಗೋಲ್ಡ್​ ಕಾರ್ಡ್​; ಟಿಕೆಟ್​ ದರ ಎಷ್ಟು? ಖರೀದಿ ಹೇಗೆ? ಇಲ್ಲಿದೆ… Kodagu | ಮಡಿಕೇರಿ: ಮಾಂದಲಪಟ್ಟಿಗೆಯಲ್ಲಿ ಪ್ರವಾಸಿಗನ ಮೇಲೆ ಜೀಪ್ ಚಾಲಕ ಹಲ್ಲೆ

ಇತ್ತೀಚಿನ ಸುದ್ದಿ

ಡಾಲರ್‌ ವಿರುದ್ಧ ತುಸು ಚೇತರಿಕೆ ಕಂಡ ರೂಪಾಯಿ: 12 ಪೈಸೆ ಹೆಚ್ಚಳ; ರೂಪಾಯಿ ದರ 77.93

20/06/2022, 22:12

ಹೊಸದಿಲ್ಲಿ(reporterkarnataka.com): ಸೊಮವಾರದ ಆರಂಭಿಕ ವಹಿವಾಟಿನಲ್ಲಿ ಯುಎಸ್ ಡಾಲರ್ ಎದುರು ರೂಪಾಯಿ 12 ಪೈಸೆಗಳಷ್ಟು ಏರಿಕೆ ಕಂಡಿದ್ದು ರೂಪಾಯಿ ದರವು 77.93 ಆಗಿದೆ. 

ಈ ಏರಿಕೆಯ ಹಿಂದೆ ಕಚ್ಚಾ ತೈಲಬೆಲೆಗಳಲ್ಲಿನ ಕುಸಿತವು ಕಾರಣವಾಗಿದೆ. ಅನಿಯಮಿತ ವಿದೇಶಿ ನಿಧಿಯ ಹೊರಹರಿವು, ದೇಶೀಯ ಷೇರುಗಳಲ್ಲಿನ ಕುಸಿತವು ಡಾಲರ್‌ ಲಾಭವನ್ನು ನಿರ್ಬಂಧಿಸಿದೆ ಎಂದು ಫಾರೆಕ್ಸ್‌ ಡೀಲರ್‌ಗಳು ಹೇಳಿದ್ದಾರೆ.

ಇಂಟರ್‌ಬ್ಯಾಂಕ್ ವಿದೇಶಿ ವಿನಿಮಯದಲ್ಲಿ, ರೂಪಾಯಿಯು ಡಾಲರ್‌ಗೆ 77.98 ಆರಂಭಿಕ ಮೌಲ್ಯ ದಾಖಲಿಸಿತ್ತು. ನಂತರ 77.93 ಬಂದ ರೂಪಾಯಿ ದರವು ಕೊನೆಯ ಮುಕ್ತಾಯದಲ್ಲಿ 12 ಪೈಸೆಯ ಏರಿಕೆಯನ್ನು ದಾಖಲಿಸಿದೆ.

ಇದರ ನಡುವೆ ಆರು ಕರೆನ್ಸಿಗಳ ಮೂಲಕ ಡಾಲರ್‌ ಬಲವನ್ನು ಅಳೆಯುವ ಡಾಲರ್ ಸೂಚ್ಯಂಕವು 0.30 ಶೇಕಡಾ ಕುಸಿದು 104.38 ಕ್ಕೆ ತಲುಪಿದೆ. ಜಾಗತಿಕ ತೈಲಬೆಲೆಯ ಮಾನದಂಡವಾಗಿರುವ ಬ್ರೆಂಟ್‌ ಕಚ್ಚಾತೈಲವು ಪ್ರತಿ ಬ್ಯಾರೆಲ್‌ಗೆ 0.26 ಶೇಕಡಾರಷ್ಟು ಕುಸಿದಿದ್ದು 112.83 ಡಾಲರ್‌ಗೆ ಇಳಿಕೆಯಾಗಿದೆ.

ರೂಪಾಯಿ ದರದಲ್ಲಿನ ಏರಿಕೆಗೆ ಒಂದು ತಿಂಗಳಲ್ಲಿ ಹೆಚ್ಚು ಕುಸಿತ ಕಂಡಿರುವ ಕಚ್ಚಾ ತೈಲವು ಸಹಾಯ ಮಾಡಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು