2:53 PM Monday7 - July 2025
ಬ್ರೇಕಿಂಗ್ ನ್ಯೂಸ್
Madikeri | ಕೊಡಗಿನಲ್ಲಿ ವ್ಯಾಪಕ ಅಬ್ಬರದ ಬಿರುಗಾಳಿ ಸಹಿತ ಮಳೆ: ಇಂದು ಶಾಲಾ-… ಕಾಫಿನಾಡು ಪ್ರವೇಶಿಸದಂತೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಗೆ… Madikeri | ಕೊಡಗು ಜಿಲ್ಲೆ: ಜು. 6ರಿಂದ ಆಗಸ್ಟ್ 5ರ ವರೆಗೆ ಭಾರೀ… ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದಿದ್ದು ನಾನೊಬ್ಬಳೇ ಎಂದ ರಶ್ಮಿಕಾಳಿಗೆ ಟೀಕೆಗಳ ಸುರಿಮಳೆ! ಮೆಟ್ರೋ ಹಳದಿ ಮಾರ್ಗ ಆಗಸ್ಟ್‌ ನಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗದಿದ್ದರೆ ಪ್ರತಿಭಟನೆ: ಸಂಸದ… ವಿದ್ಯುತ್ ಆಘಾತಕ್ಕೆ ಯುವಕ ಬಲಿ: ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ… ಸಂಸದರು ಕೊಟ್ಟಿರುವ ಬ್ಯಾಗುಗಳು ಧೂಳು ತಿನ್ನುತ್ತಿವೆ!: ಬೆನ್ನು ಬಾಗಿದ ಮೇಲೆ ಕೊಡ್ತಾರಾ ಶಾಲಾ… ಕಾಂಗ್ರೆಸ್ ಗೆ ಅಧಿಕಾರ, ಆರೆಸ್ಸೆಸ್‌ ಬ್ಯಾನ್‌ ಹಗಲುಗನಸು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಚಿಕ್ಕಮಗಳೂರು: ಶಾಲೆಗೆ ರಜೆ; ಕೆರೆಯಲ್ಲಿ ಈಜಲು ಹೋದ ಬಾಲಕ ದಾರುಣ ಸಾವು ನಾಪತ್ತೆಯಾಗಿದ್ದ ಕೊಡಗಿನ ಫಾರೆಸ್ಟ್ ಗಾರ್ಡ್ ಶವವಾಗಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ

ಇತ್ತೀಚಿನ ಸುದ್ದಿ

ಸಿದ್ದರಾಮಯ್ಯ ಸಂತೆಯಲ್ಲಿ ಮೆಂತೆ ಕದ್ದವರೆಂದು ನಾನು ಆತ್ಮಕಥೆಯಲ್ಲಿ ಬರೆದಿಲ್ಲ: ಮಾಜಿ ಸಚಿವೆ ಮೋಟಮ್ಮ

15/06/2022, 19:32

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತೆಯಲ್ಲಿ ಮೆಂತೆ ಕದ್ದವರೆಂದು ನಾನು ಆತ್ಮಕಥೆಯಲ್ಲಿ ಬರೆದಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕಿ, ಮಾಜಿ ಸಚಿವೆ ಮೋಟಮ್ಮ ಹೇಳಿದರು.

ಬುಧವಾರ ಇಲ್ಲಿ ಮಾಧ್ಯಮ ಜತೆ ಮಾತನಾಡಿದ ಅವರು, ಸಿದ್ದರಾಮಯ್ಯ ಸರಕಾರ ಅಧಿಕಾರಕ್ಕೆ ಬಂದಾಗ ನನ್ನನ್ನ ಕಡೆಗಣಿಸಲಾಯಿತು. ಮಹಿಳಾ ಕೋಟದಲ್ಲಿ ನನಗೆ ಸಚಿವ ಸ್ಥಾನ ನೀಡಬಹುದಿತ್ತು ಎಂದು ಬೇಸರ ವ್ಯಕ್ತಪಡಿಸಿದರು.

ನಮ್ಮಂಥವರು ಚುನಾವಣೆ ಎದುರಿಸೋಕೆ ಕಷ್ಟ.ಕಳೆದ ಎಲೆಕ್ಷನ್ ನಲ್ಲಿ ಸಾಕಷ್ಟು ನೊಂದಿದ್ದೇನೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲ್ಲ. ನನ್ನ ಮಗಳಿಗೆ ಟಿಕೆಟ್ ಕೇಳಿದ್ದೇನೆ ಎಂದರು.

ಚುನಾವಣೆ ವೆಚ್ಚ ಭರಿಸಲು ಮನೆ ಭೋಗ್ಯಕ್ಕೆ ಹಾಕಿದ್ದೇನೆ. 8 ಚುನಾವಣೆ ಎದುರಿಸಿದ್ದೇನೆ, 2018ರ ಚುನಾವಣೆ ಬಲು ದುಸ್ತರ ಎಂದು ನುಡಿದರು.

ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಕಾಂಗ್ರೆಸ್ ಸೇರ್ಪಡೆಗೆ ನನ್ನ ವಿರೋಧವಿದೆ. ಬಿಜೆಪಿಯವರ ಕೈ-ಬಾಯಿ ಸರಿ ಇಲ್ಲ. ಅಲ್ಲಿ ಮೇವು ಸಿಗುತ್ತೆ ಅಂತ ಕೆಲವರು ಬಿಜೆಪಿ ಸೇರಿದರು. ಕುಮಾರಸ್ವಾಮಿಗೆ ಟಿಕೆಟ್ ಕೊಡುವುದು ಬದಲು ಕಾಂಗ್ರೆಸ್ ನ ಬೂತ್ ಕಾರ್ಯಕರ್ತನಿಗೆ ನೀಡಲಿ ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು