9:16 AM Saturday5 - July 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಗೆ ಅಧಿಕಾರ, ಆರೆಸ್ಸೆಸ್‌ ಬ್ಯಾನ್‌ ಹಗಲುಗನಸು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಚಿಕ್ಕಮಗಳೂರು: ಶಾಲೆಗೆ ರಜೆ; ಕೆರೆಯಲ್ಲಿ ಈಜಲು ಹೋದ ಬಾಲಕ ದಾರುಣ ಸಾವು ನಾಪತ್ತೆಯಾಗಿದ್ದ ಕೊಡಗಿನ ಫಾರೆಸ್ಟ್ ಗಾರ್ಡ್ ಶವವಾಗಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ ಭೂ ಸ್ವಾಧೀನ; ಕಾನೂನು ತೊಡಕು ನಿವಾರಿಸಿ ರೈತರ ಸಭೆ: ಮುಖ್ಯಮಂತ್ರಿ ಸಿದ್ದರಾಮಯ್ಯ Virajpete | ಎರಡು ಮಕ್ಕಳ ತಾಯಿಯೊಂದಿಗೆ ಲಿವಿಂಗ್ ರಿಲೇಶನ್ ಶಿಪ್: ಯುವಕ ಆತ್ಮಹತ್ಯೆಗೆ… ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ದಿನ ದೂರವಿಲ್ಲ: ಬೀದರ್ ನಲ್ಲಿ ಸಚಿವೆ ಲಕ್ಷ್ಮೀ… ಕಡೂರು: 6 ದಿನಗಳ ಹುಡುಕಾಟದ ನಂತರವೂ ಸಿಗದ ಫಾರೆಸ್ಟ್ ಗಾರ್ಡ್ ಶರತ್‌ ಸುಳಿವು ಸೋರುತ್ತಿದೆ ಸೂರು; ಕೊಠಡಿ ತುಂಬಾ ನೀರು: ರಾಷ್ಟ್ರಕವಿ ಕುವೆಂಪು ಓದಿದೆ ಶಾಲೆಯ ಕೇಳುವವರೇ… ಮಲೆನಾಡಲ್ಲಿ ಮುಂದುವರಿದ ಮಳೆ: ಶೃಂಗೇರಿಯ ಗಾಂಧಿ ಮೈದಾನದ ರಸ್ತೆಗೆ ನುಗ್ಗಿ ನೆರೆ ನೀರು;… ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಪೈಪೋಟಿಯಿಲ್ಲ: ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ

ಇತ್ತೀಚಿನ ಸುದ್ದಿ

ಪೂಜಾರಳ್ಳಿ: “ಕೆರೆ ಉಳಿಸಿ-ರೈತರ ಹೊಲಗಳಿಗೆ ನೀರುಣುಸಿ” ಹೋರಾಟ, ಎಐಕೆಎಸ್ ನಿಂದ  ಡಿಸಿಗೆ ಒತ್ತಾಯ

12/06/2022, 23:00

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com 

ಜಿಲ್ಲೆಯ ಕೂಡ್ಲಿಗಿ ತಾಲೂಕು ಪೂಜಾರಹಳ್ಳಿ ಕೆರೆಯಲ್ಲಿ, ” ಕೆರೆ ಉಳಿಸಿ ರೈತರ ಭೂಮಿಗಳಿಗೆ ನೀರುಣಿಸಿ” ಎಂಬ ಘೋಷಣೆಯೊಂದಿಗೆ ಅಖಿಲ ಭಾರತ ಕಿಸಾನ್ ಸಭಾ(AIKS) ಕೂಡ್ಲಿಗಿ ತಾಲೂಕು ಸಮಿತಿ, ಹಾಗೂ ಕನ್ನ ಬೋರಯ್ಯನ ಹಟ್ಟಿ  ಪೂಜಾರಹಳ್ಳಿ ತಾಂಡಾದ ಸಾವಿರಾರು ಜನಗಳ ನೇತೃತ್ವದಲ್ಲಿ ಹೋರಾಟದ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ನೀಡುವ ಮೂಲಕ ಕೆರೆಯ ಉಳಿಸುವ ಹೋರಾಟ ಮಾಡಲಾಯಿತು.

ವಿಜಯನಗರ ಜಿಲ್ಲಾಧಿಕಾರಿ ಗೆ ಮನವಿ ಸಲ್ಲಿಸಲಾಯಿತು. ಇದರ ಫಲವಾಗಿ ಕೆರೆ ಸರ್ವೆ ಇಲಾಖೆಯ ಅಧಿಕಾರಿಗಳು ಸರ್ವೆ ಮಾಡಿದರು.

ಕೆರೆಯ ಗಡಿ ಗುರುತಿಸಿ ಹದ್ದು ಬಸ್ತ್ ಮಾಡಲಾಗಿತ್ತು. ಜಿಲ್ಲಾಧಿಕಾರಿ ಸೂಚನೆಯಂತೆ ಜೂನ್10ರಂದು ಪೂಜಾರಳ್ಳಿ  ಕೆರೆಗೆ ಕಂದಾಯ ಇಲಾಖೆ ಹಾಗೂ ಸರ್ವೆ ಇಲಾಖೆ ಸೇರಿದಂತೆ ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು ಕೆರೆಗೆ ಭೇಟಿ ನೀಡಿದರು. ಜಿಲ್ಲಾ ಅಪರ ಜಿಲ್ಲಾಧಿಕಾರಿ ಮಹೇಶಬಾಬು,ಜಿಲ್ಲಾ ಸರ್ವೆ ಇಲಾಖಾಧಿಕಾರಿ ಕುಸುಮಾ ಲತಾ, ತಹಶಿಲ್ದಾರರಾದ ಟಿ.ಜಗದೀಶ, ಕೂಡ್ಲಿಗಿ ತಾಲೂಕು ಸರ್ವೆ ಅಧಿಕಾರಿ ಕರಿಯಣ್ಣ ಹಾಗೂ ಸಿಬ್ಬಂದಿ, ಉಪ ತಹಶಿಲ್ದಾರರು ಹಾಗೂ ಕಂದಾಯ ಇಲಾಖಾ ಸಿಬ್ಬಂದಿ, ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಸಿಬ್ಬಂದಿ, ಗ್ರ‍ಾಮ ಪಂಚಾತಿತಿ ಅಧ್ಯಕ್ಷೆ ಶಿಲ್ಪ ಬಸಪ್ಪ,ಸದಸ್ಯರಾದ ನಾಗೇಶ ಸೆರಿದಂತೆ ಬಹುತೇಕ ಗ್ರಾಪಂ ಸದಸ್ಯರು. ಅಖಿಲ ಭಾರತ ಕಿಸಾನ್ ಸಭಾ ರಾಜ್ಯ ಉಪಾಧ್ಯಕ್ಷ ಹೆಚ್.ವೀರಣ್ಣ ಅವರು ಮಾತನಾಡಿ, ಇದು ಅಖಿಲ ಭಾರತ ಕಿಸಾನ್ ಸಭಾ ದ ಹೋರಾಟಕ್ಕೆ ಸಿಕ್ಕ ಜಯವಾಗಿದೆ. ಗೆಲುವಿನ ಪ್ರಥಮ ಹೆಜ್ಜೆಯಾಗಿದೆ ಅಂತಿಮವರೆಗೂ ಹೋರಾಟ ನಿಲ್ಲದು,ಸುಮಾರು 50ಎಕರೆ ಗೂ ಹೆಚ್ಚು ಕೆರೆಯ ಭೂಮಿ ಒತ್ತುವರಿಯಾಗಿರುವುದು ಸಾಬೀತಾಗಿದೆ. ಮನೆಗಳನ್ನು ನಿರ್ಮಿಸಲಾಗಿದೆ ಹಾಗೂ ಕೆಲವರು ಬಿತ್ತನೆ ಮಾಡಿಕೊಂಡಿದ್ದಾರೆ. ಅಕ್ರಮ ವಾಗಿ ಒತ್ತುವರಿ ಮಾಡಿಕೊಂಡಿರುವುದನ್ನು, ಶೀಘ್ರವೇ ತೆರವುಗೊಳೊಸಬೇಕಿದೆ. ಇಲ್ಲವಾದಲ್ಲಿ ಹೋರಾಟ ನಿರಂತರ ನಡೆಯಲಿದೆ. ಸಂಬಂಧಿಸಿದಂತೆ ಸ್ಥಳೀಯ ಆಡಳಿತ, ಕಂದಾಯ ಇಲಾಖೆ ಹಾಗೂ ಕೆಲ ಇಲಾಖೆಗಳ ನಿರ್ಲಕ್ಷ್ಯದ ವಿರುದ್ಧ ಕಾನೂನು ಹೋರಾಟ ಅನಿವಾರ್ಯವಾಗಲಿದೆ  ಎಂದು ಅವರು ಎಚ್ಚರಿಸಿದ್ದಾರೆ. 


ಕಾರ್ಮಿಕ ಮುಖಂಡರಾದ ದಾಸಣ್ಣ ಮಹೇಶ್,ಗೆದ್ದಯ್ಯ,ಸಿದ್ದಲಿಂಗಸ್ವಾಮಿ, ಜಿ.ಎಚ್.ಅಂಜನಿ, ಅಜ್ಜನ ಬೋರಣ್ಣ,ಕೋಟಗಿ ತಿಪ್ಪೇಸ್ವಾಮಿ, ಓಬಣ್ಣ,ಬೋರಯ್ಯ, ನಾಗರಾಜಪ್ಪ, ಎನ್.ಪಿ.ವೆಂಕಟೇಶ್ ಸೇರಿದಂತೆ ಪೂಜಾರಿಹಳ್ಳಿ ಅಖಿಲ ಭಾರತ ಕಿಸಾನ್ ಸಭಾದ ಕಾರ್ತಕರ್ತರು, ಗ್ರಾಮಸ್ಥರು ಹಾಗೂ ಕಾರ್ಮಿಕರು ಇದರು.

ಇತ್ತೀಚಿನ ಸುದ್ದಿ

ಜಾಹೀರಾತು