ಇತ್ತೀಚಿನ ಸುದ್ದಿ
ಈಶಾನ್ಯ ರಾಜ್ಯಗಳಲ್ಲಿ ಭೂಕಂಪ: ರಿಕ್ಟರ್ ಮಾಪಕದಲ್ಲಿ 4.1 ತೀವ್ರತೆ ದಾಖಲು
18/06/2021, 07:50
ನವದೆಹಲಿ(reporterkarnataka news): ದೇಶದ ಈಶಾನ್ಯ ರಾಜ್ಯಗಳಲ್ಲಿ ಇಂದು ಮುಂಜಾನೆ ಭೂಕಂಪ ಸಂಭವಿಸಿದೆ. ಅಸ್ಸಾಂ, ಮಣಿಪುರ ಮತ್ತು ಮೇಘಾಲಯದ ಕೆಲವು ಭಾಗದಲ್ಲಿ ಭೂಕಂಪ ಉಂಟಾಗಿದೆ.
ಮೇಘಾಲಯದ ಮಣಿಪುರದ ಚಂದೇಲ್ ಹಾಗೂ ಪಶ್ಚಿಮ ಕಾಸು ಬೆಟ್ಟ ಪ್ರದೇಶದಲ್ಲಿ ರಿಕ್ಟರ್ ಮಾಪಕದಲ್ಲು 3.0 ಭೂಕಂಪ ದಾಖಲಾಗಿದೆ. ಅಸ್ಸಾಂನ ಸೋನಿತ್ ಪುರದಲ್ಲಿ 4.1 ತೀವ್ರತೆ ದಾಖಲಾಗಿದೆ. ಯಾವುದೇ ಸಾವು- ನೋವಿನ ವರದಿಯಾಗಿಲ್ಲ.