ಇತ್ತೀಚಿನ ಸುದ್ದಿ
ರಾಜ್ಯ ಬಿಜೆಪಿಯಲ್ಲಿ ನಿಲ್ಲದ ಕದನ: ಸಿಎಂ ಪುತ್ರ ವಿಜಯೇಂದ್ರ ವಿರುದ್ಧ 20 ಸಾವಿರ ಕೋಟಿ ಟೆಂಡರ್ ಕಿಕ್ ಬ್ಯಾಕ್ ಆರೋಪ
17/06/2021, 19:28
ಬೆಂಗಳೂರು(reporterkarnataka news): ಬಿಜೆಪಿ ಉಸ್ತವಾರಿ ಅರುಣ್ ಸಿಂಗ್ ಅವರು ರಾಜ್ಯಕ್ಕೆ ಆಗಮಿಸಿದರೂ ಪಕ್ಷದೊಳಗಿನ ಬಿಕ್ಕಟ್ಟು ಪರಿಹಾರಗೊಳ್ಳುವ ಲಕ್ಷಣ ಕಂಡು ಬರುತ್ತಿಲ್ಲ. ಅರುಣ್ ಸಿಂಗ್ ಒಂದು ಕಡೆ ಮೀಟಿಂಗ್ ಮೇಲೆ ಮೀಟಿಂಗ್ ನಡೆಸುತ್ತಿದ್ದರೆ, ಇನ್ನೊಂದು ಕಡೆ ಪಕ್ಷದ ಎಂಎಲ್ ಸಿ ಎಚ್. ವಿಶ್ವನಾಥ್ ಅವರು ಸಿಎಂ ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ವಿರುದ್ಧ 20 ಸಾವಿರ ಕೋಟಿ ಟೆಂಡರ್ ಕಿಕ್ ಬ್ಯಾಕ್ ಬಾಂಬ್ ಸಿಡಿಸಿದ್ದಾರೆ.
ಅರುಣ್ ಸಿಂಗ್ ಅವರು ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ, ಮುಂದಿನ ದಿನಗಳಲ್ಲಿ ಕೂಡ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದು ನಿನ್ನೆಯೇ ಸ್ಪಷ್ಟಪಡಿಸಿದ್ದರು. ಆದರೆ ಎಚ್. ವಿಶ್ವನಾಥ್ ಅವರು ನಾಯಕತ್ವ ಬದಲಾವಣೆಯಾಗಲೇ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಸಿಎಂ ಪುತ್ರ ಎಲ್ಲ ಖಾತೆಗಳಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದಾರೆ. ನೀರಾವರಿ ಖಾತೆಯಲ್ಲೂ ಹಸ್ತಕ್ಷೇಪ ನಡೆಸಿದ್ದಾರೆ. ಸಿಎಂ ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ. ನಾಯಕತ್ವ ಬದಲಾವಣೆ ಮಾಡಲೇ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇದಕ್ಕೆ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೀಶ್ವರ್ ಕೂಡ ಸಾಥ್ ನೀಡಿದ್ದಾರೆ. ಕೆಲವು ದಿನ ತಣ್ಣಗಾಗಿದ್ದ ಯೋಗೀಶ್ವರ್ ಅವರು ಮತ್ತೆ ಬಂಡಾಯದ ಬಾವುಟವನ್ನು ವಿಶ್ವನಾಥ ಜತೆ ಹಾರಿಸಿದ್ದಾರೆ.