11:16 PM Wednesday15 - January 2025
ಬ್ರೇಕಿಂಗ್ ನ್ಯೂಸ್
ಗರೋಡಿ ಜಾತ್ರೆಗೂ ಊರವರಿಗೆ ನೀರಿಲ್ಲ!: 5 ದಿನಗಳಿಂದ ನೋ ವಾಟರ್!!; ಮೇಯರ್ ಅವರೇ… ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ಸಚಿವ ಜಮೀರ್‌ ಭಾವಚಿತ್ರಕ್ಕೆ ಸಗಣಿ ಬಳಿದು ಬಿಜೆಪಿ… ಕೆಚ್ಚಲು ಕೊಯ್ದ ಪ್ರಕರಣ: ದನದ ಮಾಲೀಕನ ತಾಯಿಗೆ 3 ಹಸು ಕೊಡಿಸಿದ ಸಚಿವ… 5 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರ: ಆರೋಪಿಯ ತಕ್ಷಣ ಬಂಧಿಸಲು ಆಗ್ರಹಿಸಿ ಎಐಎಂಎಸ್ಎಸ್… ಕಾಡಾನೆಯ ಚಿತ್ರೀಕರಣ ಮಾಡಲು ಹೋದ ಯೂಟ್ಯೂಬರ್ ಮೇಲೆ ಸಲಗ ದಾಳಿ: ಕೂದಲೆಳೆ ಅಂತರದಲ್ಲಿ… ವಿಕಲಚೇತನ ಉದ್ಯೋಗಿಗಳ ಜತೆ ಸಂಕ್ರಾಂತಿ ಹಬ್ಬ ಆಚರಿಸಿಕೊಂಡ ಕೇಂದ್ರ ಸಚಿವ ಕುಮಾರಸ್ವಾಮಿ ಶಬರಿಮಲೆ: ಆಕಾಶದತ್ತ ಮುಖ ಮಾಡಿ ಕಾಯುತ್ತಿದ್ದ ಭಕ್ತರಿಗೆ ಮಕರ ಜ್ಯೋತಿ ದರ್ಶನ: ಪುನೀತರಾದ… ನಂಜನಗೂಡು: ಶಿವಶರಣ ಶ್ರೀ ಸಿದ್ದರಾಮೇಶ್ವರ ರ ಜಯಂತಿ ಆಚರಣೆ ಜಿಹಾದಿ ಮನಸ್ಥಿತಿಯನ್ನು ಪೋಷಿಸಿ ಬೆಳೆಸುತ್ತಿರುವ ಸಿದ್ದರಾಮಯ್ಯ ಸರಕಾರ: ಸಂಸದ ಕ್ಯಾ ಬ್ರಿಜೇಶ್ ಚೌಟ… ವಿಜಯಪುರ: 4 ಮಂದಿ ಮಕ್ಕಳ ಜತೆ ಕಾಲುವೆಗೆ ಜಿಗಿದ ಹೆತ್ತಬ್ಬೆ: ಮಕ್ಕಳ ದಾರುಣ…

ಇತ್ತೀಚಿನ ಸುದ್ದಿ

ವಾಯ್ಸ್ ಆಫ್ ಆರಾಧನಾ: ಮೇ ತಿಂಗಳ ಟಾಪರ್ ಆಗಿ ಬಾಲಪ್ರತಿಭೆಗಳಾದ ಸಾನ್ವಿ ದೇವಿಪ್ರಸಾದ್ ಹಾಗೂ ಶ್ರವಣ್ ಕಡಬ ಆಯ್ಕೆ

31/05/2022, 21:03

ಮಂಗಳೂರು(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದೊಂದಿಗೆ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಮೇ ತಿಂಗಳ ಟಾಪರ್ ಆಗಿ ಬಾಲಪ್ರತಿಭೆಗಳಾದ ಸಾನ್ವಿ ದೇವಿಪ್ರಸಾದ್ ಹಾಗೂ ಶ್ರವಣ್ ಕಡಬ ಆಯ್ಕೆಗೊಂಡಿದ್ದಾರೆ.

ಕಾವೂರು ಗಾಂಧಿನಗರದ ದೇವಿಪ್ರಸಾದ್ ಮತ್ತು  ಚಿತ್ರಾಕ್ಷಿ ಅವರ ಪುತ್ರಿಯಾದ ಸಾನ್ವಿ ದೇವಿಪ್ರಸಾದ್ 2015, ಮೇ 17ರಂದು

ಮಂಗಳೂರಿನಲ್ಲಿ ಜನಿಸಿದರು. ಸಾನ್ವಿ ಇದೀಗ ಮಂಗಳೂರಿನ ಶ್ರೀ ಶ್ರೀ ರವಿ ಶಂಕರ ವಿದ್ಯಾಮಂದಿರದಲ್ಲಿ 2ನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ. ಸಂಗೀತ, ನೃತ್ಯ, ಕೀಬೋರ್ಡ್ , ಯಕ್ಷಗಾನ ಈಕೆಯ ಹವ್ಯಾಸ.


ಯಕ್ಷಗುರು ರಾಕೇಶ್ ರೈ ಅಡ್ಕ ಅವರ ಬಳಿ ಯಕ್ಷಗಾನ ನಾಟ್ಯ ಕಲಿಯುತ್ತಿದ್ದಾಳೆ. ಮಹಾಲಿಂಗೇಶ್ವರ ಯಕ್ಷಾಲಯ ಕಾವೂರು ಇದರಲ್ಲಿ ವೇದಿಕೆ ರಂಗಪ್ರವೇಶ ಮಾಡಿರುತಾಳೆ. ಭರತನಾಟ್ಯ ಕಲಿಯುತ್ತಿದ್ದು, ಸ್ಪಂದನ ಟಿವಿಯ ಕಿನ್ನರ ಮೇಳದಲ್ಲಿ ಭಾಗವಹಿಸಿ ಇತ್ತೀಚೆಗೆ ಅಜೆಕಾರಿನಲ್ಲಿ ನಡೆದ 3ನೇ ಆದಿಗ್ರಾಮೋತ್ಸವ ಸಮ್ಮೇಳನದಲ್ಲಿ ಆದಿಗ್ರಾಮೋತ್ಸವ ಬಾಲ ಪ್ರತಿಭಾ ಪುರಸ್ಕಾರ ಪಡೆದಿರುತ್ತಾಳೆ. ಕೊರೊನಾ ಸಮಯದಲ್ಲಿ ವಾಯ್ಸ್ ಆಫ್ ಆರಾಧನಾ ಸಂಸ್ಥೆ ಯ  ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗುರುತಿಸಿ ಮಂಗಳೂರಿನ ಬಾಲಪ್ರತಿಭೆ ಸಾನ್ವಿ ದೇವಿ ಪ್ರಸಾದ್ ಅವರಿಗೆ ವಾಯ್ಸ್ ಆಫ್ ಆರಾಧನಾ  2021 ರ ಅವಾರ್ಡ್ ಪಡೆದಿದ್ದಾಳೆ. ಸ್ಪಂದನ ಟಿ.ವಿಯ ರೈ ಸಿಂಗ್ ಸ್ಟಾರ್ ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದು, ಸ್ಟಾರ್ ಸುವರ್ಣ ವಾಹಿನಿಯ ಸುವರ್ಣ ಸೂಪರ್ ಸ್ಟಾರ್ ನಲ್ಲೂ ಭಾಗವಹಿಸಿ ಬಹುಮಾನ ಪಡೆದಿದ್ದಾಳೆ..

ಚಿದಾನಂದ ಪೂಜಾರಿ ಹಾಗೂ ಪ್ರೇಮಾ ದಂಪತಿಗಳ  ಮಗನಾದ ಶ್ರವಣ್ ಕಡಬ ರಾಮಕುಂಜದ ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆ  ಓದುತ್ತಿದ್ದಾನೆ . ಈತ ಸಂಗೀತ,  ಕೀಬೋರ್ಡ್, ಯಕ್ಷಗಾನ ತರಬೇತಿ ಪಡೆಯುತ್ತಿದ್ದೂ ಹಲವಾರು ಕಡೆ ಕಾರ್ಯಕ್ರಮಗಳನ್ನು ಸಹ ನೀಡಿದ್ದಾನೆ. ಚಿತ್ರಕಲೆ ಇವನ ಹವ್ಯಾಸವಾಗಿದೆ. ಸಂಗೀತ, ಚಿತ್ರಕಲೆ,ಕರಾಟೆ ಯಕ್ಷಗಾನದಲ್ಲಿ ಹಲವಾರು ಬಹುಮಾನಗಳನ್ನು ಪಡೆದಿರುತ್ತಾನೆ. ಸುದ್ದಿ ಬಿಡುಗಡೆ

ಪ್ರತಿಭಾ ದೀಪ ಪುರಸ್ಕಾರ ನೀಡಿ ಗೌರವಿಸಿದೆ. ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದಿದ್ದಾರೆ. “All kerala and karnataka open karate championchip “ನವರು ಆಯೋಜಿಸಿದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದಿರುತ್ತಾನೆ.  “kamal martial arts academy”ಯವರು ಆಯೋಜಿಸಿದ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದಿರುತ್ತಾನೆ. 

ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ವತಿಯಿಂದ ಪ್ರತಿಭಾ ಸಿರಿ ಗೌರವ, ಸತ್ಯಶಾಂತ ಪ್ರತಿಷ್ಠಾನ  (ರಿ. ) ಇದರ ವತಿಯಿಂದ ಪ್ರತಿಭಾ ಚೇತನ ಪ್ರಶಸ್ತಿ ಹಾಗೂ ಕರ್ನಾಟಕ ಜನಸ್ಪಂದನ ಟ್ರಸ್ಟ್ (ರಿ. )ಇದರ ವತಿಯಿಂದ ಜನಸ್ಪಂದನ ಕಲಾ ಸಿರಿ ರತ್ನ ಪ್ರಶಸ್ತಿ ಪಡೆದಿದ್ದಾನೆ.

ಇತ್ತೀಚಿನ ಸುದ್ದಿ

ಜಾಹೀರಾತು