ಇತ್ತೀಚಿನ ಸುದ್ದಿ
ಮೂಡಿಗೆರೆ ತಾಲೂಕಿನಲ್ಲಿ ಕಾಡಾನೆಗಳ ಹಾವಳಿ: ಹೊಸಹಳ್ಳಿ ತೋಟದಲ್ಲಿ ಬೀಡುಬಿಟ್ಟ ಸಲಗ
22/05/2022, 20:43
ಮೂಡಿಗೆರೆ(reporterkarnataka.com): ತಾಲೂಕಿನ ಊರುಬಗೆ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಊರುಬಗೆ, ಹೊಸಹಳ್ಳಿ ಕುಂಬರಡಿ, ಗೌಡಹಳ್ಳಿಹೊಸಕೆರೆ, ಸತ್ತಿಗನಹಳ್ಳಿ ಮುಂತಾದ ಪ್ರದೇಶದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು ಬೆಳೆಹಾನಿ ಮಾಡುತ್ತಿವೆ.



ಇದರಿಂದ ಭತ್ತದ ಬೆಳೆ ಬೆಳೆಯದೆ ಸಾವಿರಾರು ಎಕರೆ ಗದ್ದೆಗಳು ಹಾಳು ಗದ್ದೆಗಳಾಗಿವೆ.ಊರುಬಗೆ ಗ್ರಾಮದಲ್ಲಿನ ಹೊಸಹಳ್ಳಿ ಉಮೇಶ್ ರವರ ತೋಟದಲ್ಲಿ ನಿನ್ನೆ ಯಿಂದ ಆನೆಗಳು ಬೀಡುಬಿಟ್ಟಿದ್ದು ಬಾಳೆ ಮೆಣಸು ಕಾಫ಼ಿ ಗಿಡಗಳನ್ನು ತುಳಿದು ಕಿತ್ತು ಹಾಕಿ ನಷ್ಟ ಉಂಟು ಮಾಡಿವೆ. ಇದರಿಂದ ಗದ್ದೆ ತೋಟ ಗಳಿಗೆ ಹೋಗಿ ಕೆಲಸ ನಿರ್ವಹಿಸುವುದು ಕಷ್ಟ ವಾಗಿದೆ.ಆದರಿಂದ ಕಾಡಾನೆಗಳ ಹಿಡಿದು ಬೇರೆಡೆ ಸ್ಥಳಾಂತರ ಮಾಡುವ ಮೂಲಕ ರೈತರಿಗೆ ಉಂಟಾಗುವ ತೊಂದರೆ ತಪ್ಪಿಸಬೇಕೆಂದು ಒತ್ತಾಯಿಸಿದ್ದಾರೆ.














