ಇತ್ತೀಚಿನ ಸುದ್ದಿ
ಕಟೀಲು: ‘ವಾಯ್ಸ್ ಆಫ್ ಆರಾಧನಾ’ದಿಂದ ಮೇಳೈಸಿದ ಪ್ರತಿಭೆಗಳ ಸಾಂಸ್ಕೃತಿಕ ಸಂಭ್ರಮ
18/05/2022, 12:15
ಕಟೀಲು(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯ ವಾಯ್ಸ್ ಆಫ್ ಆರಾಧನಾ ಅರ್ಪಿಸುವ ಪ್ರತಿಭೆಗಳ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಇತ್ತೀಚೆಗೆ ಶ್ರೀನಿಕೇತನ ಸಭಾಂಗಣ ಕಟೀಲಿನಲ್ಲಿ ನಡೆಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷೀಯ ಪೀಠವನ್ನು ಡಾ ಸೋಮಶೇಖರ ಮಯ್ಯರು ವಹಿಸಿದ್ದರು.
ಅರ್ಚಕರಾದ ವೇ| ಮೂ| ವೆಂಕಟರಮಣ ಆಸ್ರಣ್ಣ ಅವರು ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಪತ್ರಕರ್ತ
ರಾಜೇಶ್ ಭಟ್ ಮಂದಾರ ಅವರು ಭಾಗವಹಿಸಿದ್ದರು. ವಾಯ್ಸ್ ಆಫ್ ಆರಾಧನ ನಿರ್ವಾಹಕಿ ಪದ್ಮಶ್ರೀ ಭಟ್ ನಿಡ್ಡೋಡಿ, ಸದಸ್ಯರಾದ ದೇವಿಪ್ರಸಾದ್ ಶೆಟ್ಟಿ. ದೀನ್ ರಾಜ್ ಕೆ., ಅಭಿಷೇಕ್ ಶೆಟ್ಟಿ ಐಕಳ, ಪ್ರಸಾದ್ ಉಡುಪಿ, ಶ್ರೀನಿವಾಸ ಬಜಪೆ, ಬಸವರಾಜ್ ಮಂತ್ರಿ ಉಪಸ್ಥಿತರಿದ್ದರು. ಅಶ್ಮಿತ್, ಎ.ಜೆ ಶಿವಮನ್ಯು ಪ್ರಾರ್ಥನೆ ನೆರವೇರಿಸಿದರು. ಕಿರಣ್ ಶೆಟ್ಟಿ ಅತ್ತೂರು ಕಾರ್ಯಕ್ರಮ ನಿರೂಪಿಸಿದರು. ವಾಯ್ಸ್ ಆಫ್ ಆರಾಧನ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು