11:36 PM Tuesday8 - September 2026
ಬ್ರೇಕಿಂಗ್ ನ್ಯೂಸ್
ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ… ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:… ತುಮಕೂರು-ರಾಯದುರ್ಗ- ಚಿತ್ರದುರ್ಗ | 2027 ಡಿಸೆಂಬರ್ ಅಂತ್ಯಕ್ಕೆ ರೈಲು ಮಾರ್ಗ ಆರಂಭ ಕಸ್ತೂರಿ ರಂಗನ್ ವರದಿ ವಿರೋಧಿಸಿ ನವೆಂಬರ್ 16ರಿಂದ ತೀರ್ಥಹಳ್ಳಿ ಟು ಶಿವಮೊಗ್ಗ ಪಾದಯಾತ್ರೆ:… *ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ* ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ ಕುಡಿದು ಗಾಡಿ ಚಲಾಯಿಸಿದ ಯುವಕನ ತಡೆಯಲೆತ್ನಿಸಿದ ಪೊಲೀಸ್ ಸಿಬ್ಬಂದಿ: ಖಾಕಿಗೆ ಕುಡುಕನಿಂದ ಅವಾಜ್;… ಕುಕ್ಕೆ ಸುಬ್ರಹ್ಮಣ್ಯ: ಭಕ್ತರ ಗಮನಕ್ಕೆ; ಈ ದಿನಗಳಲ್ಲಿ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಪೂಜೆ ಇರೋದಿಲ್ಲ

ಇತ್ತೀಚಿನ ಸುದ್ದಿ

ಐನಾಪುರ: ಕೃಷ್ಣಾ ಕಿತ್ತೂರ ಮಹಾಲಕ್ಷ್ಮೀ ದೇವಿ ದೇವಸ್ಥಾನದಲ್ಲಿ ಕಳಸಾರೋಹಣ ಸಂಪನ್ನ

14/05/2022, 22:22

ಬೆಳಗಾವಿ(reporterkarnataka.com):
ಒಳ್ಳೆಯದನ್ನು ನೋಡಬೇಕು, ಕೇಳಬೇಕು, ಉಣ್ಣಬೇಕು, ತಿನ್ನಬೇಕು,l. ಅಷ್ಟೇಯಲ್ಲದೆ.ಒಳ್ಳೆಯ ಕಾರ್ಯಗಳನ್ನು ಮಾಡಬೇಕು ಎಂದು ವಿಜಯಪುರ ಜ್ಞಾನ ಯೋಗಾಶ್ರಮದ  ಸಿದೇಶ್ವರ ಮಹಾಸ್ವಾಮಿಜಿ ಹೇಳಿದರು.

ಅವರು ಐನಾಪುರ ಸಮೀಪದ ಕೃಷ್ಣಾ ಕಿತ್ತೂರ ಗ್ರಾಮದ ಮಹಾಲಕ್ಷ್ಮಿ ದೇವಿ ಕಮಿಟಿ ಮತ್ತು ಸಮಸ್ತ ನಾಗರಿಕರು ಆಯೋಜಿಸಿದ  ಶ್ರೀ ಮಹಾಲಕ್ಷ್ಮೀ ದೇವಿಯ ದೇವಸ್ಥಾನದ  ಕಳಸಾರೋಹಣವನ್ನು ಸಮಾರಂಭದ ದಿವ್ಯಸಾನಿದ್ಯ ವಹಿಸಿ ಮಾತನಾಡಿದರು.

ಈ ಶರೀರಕ್ಕೆ ಪ್ರಾಸಾದ ಭಾವ ಬರಲ್ಲಿ ಅಂತಾ ಗುಡಿಗಳನ್ನು ಕಟ್ಟುತ್ತಾರೆ. ಗುಡಿಗಳು ನಮ್ಮಗೆ ಪಾಠಯಲಿಕ್ಕೆ ಇರುತ್ತವೆ. ಗುಡಿಗಳನ್ನು ಸುಂದರವಾಗಿ ಕಟ್ಟಿದಿರಿ. ಅವುಗಳು ಪಾವಿತ್ರತೆ ಪಡೆದಿವೆ. ಅದೇ ರೀತಿ ದೇವರು ಕಟ್ಟಿದ ಗುಡಿಗಳು ಅಂದರೆ ನಿಮ್ಮ ದೇಹಗಳು ಎಷ್ಟು ಪಾವಿತ್ರ್ಯ ಪಡೆದಿವೆ. ದೇವರು ಕಟ್ಟಿದ ಗುಡಿಗಳು ನೀವೆಲ್ಲ ಎಷ್ಟು ಭಾಗ್ಯಶಾಲಿಗಳು ಎಂದು ಹೇಳಿದರು.

ಸಾನಿಧ್ಯ ವಹಿಸಿದ ಗದಗ ಬ್ರಹನ್ಮಠದ ಸದಾಶಿವಾನಂದ ಸ್ವಾಮಿಜಿ ಆರ್ಶಿವಚನ  ನೀಡಿ ಶ್ರೀ ಮಹಾಲಕ್ಷ್ಮಿ ದೇವಿ ಗುಡಿಗೆ ಅತ್ಯಂತ ಸುಂದರವಾದ ಗೋಪುರ ನಿರ್ಮಾಣ ಮಾಡಿರುವುದು ಸಂತಸ ತಂದಿದೆ. ಇದು ದಕ್ಷಿಣ ಭಾರತದಲ್ಲಿ ವೈಶಿಷ್ಟ್ಯ ಪೂರ್ಣ ವಾದದು. ನಮ್ಮ ದೇಶದಲ್ಲಿ ದೇವಸ್ಥಾನ ಕಟ್ಟುವುದು ರಾಜಗೋಪುರ ನಿರ್ಮಾಣ ಮಾಡುವದು  ಹಳೆಯ ಕಾಲದಿಂದಲೂ ನಡೆದುಕೊಂಡು ಬಂದಿದೆ ಎಂದರು. 


ಸಾನಿದ್ಯವನ್ನು ಕಾಗವಾಡ ಗುರುದೇವಾಶ್ರಮದ ಯತೀಶ್ವರಾನಂದ ಸ್ವಾಮಿಜಿ ವಹಿಸಿದರು. ನೇತ್ರತ್ವವನ್ನು ಐನಾಪುರ ಕೃಷ್ಣಾಕಿತ್ತೂರ ಗುರುದೇವಾಶ್ರಮದ ಬಸವೇಶ್ವರ ಸ್ವಾಮೀಜಿ ವಹಿಸಿದರು. ಅಥಣಿ ಶುರ್ಗಸನ ವ್ಯವಸ್ಥಾಪಕ ನಿದೇರ್ಶಕ ಯೋಗೇಶ ಪಾಟೀಲ, ತಹಸೀಲ್ದಾರ ಆರ್ ಆರ್ ಬುರ್ಲಿ, ಕಾಗವಾಡ ಪಿ ಎಸ್ ಐ ಭೀಮಪ್ಪಾ ರಬಕವಿ ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು