5:23 AM Saturday4 - October 2025
ಬ್ರೇಕಿಂಗ್ ನ್ಯೂಸ್
ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಗರ ಆತಂಕಗೊಳಿಸಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ Kodagu | ಡಿವೈಎಸ್ಪಿ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ ಅ. 16 ರವರೆಗೆ… ಹೆತ್ತಬ್ಬೆಯನ್ನೇ ಕೊಂದ ಪಾಪಿ ಪುತ್ರ: ಅಡುಗೆ ಮಾಡಿಲ್ಲ ಎಂಬ ಕಾರಣಕ್ಕೆ ಹತ್ಯೆ; ಆರೋಪಿಯ… Kodagu | ಮಂಜಿನ ನಗರಿ ಮಡಿಕೇರಿಯಲ್ಲಿ ಜನೋತ್ಸವಕ್ಕೆ ಜನಜoಗುಳಿ: ದಶ ಮಂಟಪಗಳಿಂದ ಶೋಭಾ… Bangaluru | ವೈದ್ಯ ದಂಪತಿಯಿಂದ ಮನೆಯಲ್ಲೇ ನವದುರ್ಗೆಯರ ಆರಾಧನೆ: ಸಾಲು ಸಾಲು ದಸರಾ… ಮಡಿಕೇರಿ ದಸರಾ ಶೋಭಯಾತ್ರೆಗೆ ತೆರೆ: ದಶಮoಟಪಗಳ ತೀರ್ಪುಗಾರರ ವಿರುದ್ದ ಆಕ್ರೋಶ; ಪ್ರತಿಭಟನೆ ಮುಂದಿನ ವರ್ಷವೂ ನಾನೇ ದಸರಾ ಪುಷ್ಪಾರ್ಚನೆ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ ಭರವಸೆಯ ನುಡಿ ಮೈಸೂರು ದಸರಾ: ಅರಮನೆ ಆವರಣದಲ್ಲಿ ಯದುವೀರ್ ಒಡೆಯರ್ ರಿಂದ ಶಮಿ ಪೂಜೆ ವಿಶ್ವ ವಿಖ್ಯಾತ ಮೈಸೂರು ದಸರಾ: ಜಂಬೂ ಸವಾರಿಗೆ ಗಜಪಡೆ ಸಜ್ಜು ಮೈಸೂರು ಅರಮನೆಗೆ ಬೆಳ್ಳಿ ರಥದಲ್ಲಿ ಹೊರಟ ಚಾಮುಂಡಿ ದೇವಿ: ಬಿಗಿ ಬಂದೋಬಸ್ತ್

ಇತ್ತೀಚಿನ ಸುದ್ದಿ

Telefilm : ಕೊರೊನಾ ಬಿಸಿಯಿಂದ ತತ್ತರಿಸಿದ ಮನಸ್ಸಿಗೆ ಮುಲಾಮು ಹಚ್ಚಬಹುದು “ಕನಸಿನ ಮಳೆಯಾದವಳು” : ನವಿರಾದ ಪ್ರೇಮಕಥೆಗೆ ಪ್ರೇಕ್ಷಕರಿಂದ ಕೂಲ್ ರೆಸ್ಪಾನ್ಸ್

15/06/2021, 15:00

ಗಣೇಶ್ ಅದ್ಯಪಾಡಿ, ಮಂಗಳೂರು
info.reporterkarnataka@gmail.com

ಕೊರೊನಾ ಹಾವಳಿಯಿಂದಾಗಿ ತತ್ತರಿಸಿ ಹೋದ ಬದುಕಿನಲ್ಲಿ ಒಂದಿಷ್ಟು ಉತ್ಸಾಹವನ್ನು ಅಥವಾ ಮತ್ತೆ ಚಿಗುರುವ ಚೈತನ್ಯವನ್ನು ತುಂಬುವ ಕೆಲಸವನ್ನು ಮಾಡುವ ತಾಕತ್ತು ಈ ಕಿರುಚಿತ್ರಕ್ಕಿದೆ.

ಕಳೆದ ಬಾರಿಯ ಲಾಕ್‌ಡೌನ್ ಸಂದರ್ಭದಲ್ಲಿ ಅತಿ ಹೆಚ್ಚು ಜನರ ಮೆಚ್ಚುಗೆ ಗಳಿಸಿದ ಹಾಗೂ ಆ ಸಂದರ್ಭದಲ್ಲಿ ಮನಸ್ಸಿಗೆ ಮುದ ಹಾಗೂ ಮನೋರಂಜನೆ ನೀಡಿದ ಸಿನಿಮಾ “ದಿಯಾ”. ಅದೇ ರೀತಿ ಈ ಬಾರಿ ನವಿರಾದ ಕಥಾ ಹಂದರ ಇರುವ ಸೊಗಸಾಗಿ ಸೆರೆಯಾಗಿ ತೆರೆ ಮೇಲೆ ಬಂದ ಕಿರುಚಿತ್ರ ಅಥವಾ ಹಿರಿ ಚಿತ್ರ ಅಂತಲೆ ಹೇಳಬಹುದು( 48 ನಿಮಿಷದ ಚಿತ್ರ ಇದು.).

ನವಿರಾದ ಕಥಾ ಹಂದರ ಇರುವ ಈ ಕಥೆಯನ್ನು ಬರೆದವರು ಪ್ರತಿಲಿಪಿ ಹಾಗೂ ಕಥಾ ಪ್ರಪಂಚದಲ್ಲಿ ತನ್ನದೇ ಛಾಪು ಮೂಡಿಸುತ್ತಿರುವ ರಾಮಚಂದ್ರ ಸಾಗರ್ ಅವರು.
ಮುಖ್ಯವಾಗಿ ಈ ಕಿರುಚಿತ್ರದ ಕಥೆಯೇ ಮುಖ್ಯ ಪಾತ್ರಧಾರಿ.

ಯಾವುದೇ ರೀತಿಯ ಕಾಂಪ್ಲೆಕ್ಸಿಟಿ ಇಲ್ಲದ ಸಿಂಪಲ್ ಸ್ಟೋರಿಗೆ ಅತಿ ಮಧುರವಾಗಿ ಜೀವ ತುಂಬುವ ಕೆಲಸವನ್ನು ನಿರ್ದೇಶಕ ಸುಕೇಶ್ ಮಿಜಾರ್ ಮಾಡಿದ್ದಾರೆ.

ಅಚಾನಕ್ ಆಗಿ ಭೇಟಿ ಆಗುವ ಇಬ್ಬರ ನಡುವಿನ ಸೆಳೆತ ಹಾಗೂ ಅದಕ್ಕೆ ಕಾರಣವಾಗುವ ಸಣ್ಣ ಸಣ್ಣ ಘಟನೆಗಳು ಅವರ ನಡುವೆ ಮತ್ತಷ್ಟು ಭಾವನಾತ್ಮಕ ಸಂಬಂಧವನ್ನು ಏರ್ಪಡಿಸುತ್ತದೆ. ಯುವಕ ಆಕಾಶ್ ಸೌಮ್ಯಳನ್ನ ಮನಸ್ಸಲ್ಲೇ ಸಿಕ್ಕಾಪಟ್ಟೆ ಇಷ್ಟ ಪಡಲು ಶುರು ಮಾಡುತ್ತಾನೇ.. ಅವರ ಮಾತುಗಳಿಗೇ ಕೊನೆಯೆ ಇರುವುದಿಲ್ಲ… ಅತಿಯಾಗಿ ಹತ್ತಿರವಾದ ಅವರು ಒಂದಾಗುತ್ತಾರೊ ಇಲ್ಲವೋ ಏನಾಗುತ್ತೆ ಎನ್ನುವುದನ್ನು ತೋರಿಸುವುದೇ ಈ ಕಿರುಚಿತ್ರದ ಜೀವಾಳ.

ಆಕಾಶ್ ಪಾತ್ರಧಾರಿ ವಿಕಾಸ್ ಉತ್ತಯ್ಯ ಹಾಗೂ ಸೌಮ್ಯ ಪಾತ್ರಧಾರಿ ಮಧುರ ಆರ್.ಜೆ. ಪಾತ್ರಕ್ಕೆ ಜೀವ ತುಂಬುವ ಪ್ರಯತ್ನದಲ್ಲಿ ಸಕ್ಸಸ್‌ಫುಲ್ ಆಗಿದ್ದಾರೆ. ಕೋಸ್ಟಲ್‌ವುಡ್ ಸಿನಿರಂಗದ ವರ್ಸಟೈಲ್ ನಟ ಪ್ರಕಾಶ್ ತೂಮಿನಾಡು ಅವರ ವೆಂಕಟೇಶನ ಪಾತ್ರ ಈ ಕಿರುಚಿತ್ರ ಮುಖ್ಯ ಆಕರ್ಷಣೆ.

ಕಿರುಚಿತ್ರದ ಹಾಡು ಕೂಡ ಉತ್ತಮ ಸ್ಪಂದನೆಯನ್ನು ಪ್ರೇಕ್ಷಕರಿಂದ ಪಡೆದುಕೊಂಡಿದ್ದು, ವಿನಾಯಕ ಅರಳಸುರಳಿ ಸಾಹಿತ್ಯಕ್ಕೆ ಆಕಾಶ್ ಪರ್ವ ಸಂಗೀತ ನೀಡಿದ್ದಾರೆ. ಮೋಹನ್ ತೋಡಾರ್ ಸಹಾಯಕ ನಿರ್ದೇಶಕರಾಗಿ ಸಾಥ್ ನೀಡಿದ್ದು, ಆರ್.ಜೆ ತ್ರಿಶೂಲ್, ವಾತ್ಸಲ್ಯ, ಪೂರ್ವಿ, ಶಿವಾನಂದ್, ಸುನೀತಾ ಅಭಿನಯಿಸಿದ ಈ ಕಿರು ಚಿತ್ರ ವಿ4 ಸ್ಟ್ರೀಮ್‌ನಲ್ಲಿ ಸ್ಟ್ರೀಮ್ ಆಗ್ತಾ ಇದೆ. ಜನರಿಂದ ಉತ್ತಮ ಪ್ರತಿಕ್ರಿಯೆಯೂ ದೊರಕುತ್ತಿದೆ.

ಕಿರುಚಿತ್ರದ ಫ್ರೇಮ್‌ಗಳು ಕಲರ್ ಫುಲ್ ಆಗಿದ್ದು ನಿರ್ದೇಶಕರ ಸೃಜನಶೀಲತೆಗೆ ಸಾಕ್ಷಿಯಾಗಿದೆ. ಹಿನ್ನೆಲೆ ಸಂಗೀತ ಕೂಡ ಮನಮೋಹಕವಾಗಿದೆ.
ನಿರ್ದೇಶಕ ಮೊದಲ ಕಿರುಚಿತ್ರದಲ್ಲಿಯೆ ಉತ್ತಮ ರೀತಿಯಲ್ಲಿ ತೆರೆಯ ಮೇಲೆ ತಂದಿದ್ದಾರೆ. ಕೆಲವು ದೃಶ್ಯಗಳು ಹಾಗು ಸನ್ನಿವೇಶಗಳು ತುಸು ಲೆಂಗ್ತಿ ಎನಿಸಿದರು ಕಥೆಯೊಳಗಿನ ಭಾವನೆ ಜನರ ಮನಸ್ಸನ್ನು ಸೆಳೆದುಕೊಳ್ಳುತ್ತದೆ. ಇನ್ನೂ ಹೆಚ್ಚು ಶಾರ್ಟ್ ಆಗಿ ಸ್ವೀಟ್ ಆಗಿ ತೆರೆಯ ಮೇಲೆ ತರಬಹುದಿತ್ತು ಎನ್ನುವ ಅಭಿಪ್ರಾಯ ಮೂಡುತ್ತದೆ. ಆದರೆ ಹೊಸಬರಾಗಿ ಈ ರೀತಿಯಲ್ಲಿ ಕಿರುಚಿತ್ರವನ್ನು ಸಾಧಾರಣ ಸಿನಿಮಾ ಮಟ್ಟದಲ್ಲಿ ತರುವ ಸಾಹಸ ಮಾಡಿದ್ದಕ್ಕೆ ಶಹಭಾಷ್ ಎನ್ನಲೇ ಬೇಕು.

ಇತ್ತೀಚಿನ ಸುದ್ದಿ

ಜಾಹೀರಾತು