11:56 AM Tuesday2 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಪೊಲೀಸ್ ಗೆ ಆವಾಜ್: ಮೂಡಿಗೆರೆ ಶಾಸಕ ಕುಮಾರಸ್ವಾಮಿ ಅವರದ್ದು ಎನ್ನಲಾದ ಆಡಿಯೋ ಲೀಕ್

06/05/2022, 08:39

ಚಿಕ್ಕಮಗಳೂರು(reporterkarnataka.com) : ಮೂಡಿಗೆರೆ  ಶಾಸಕ ಎಂ. ಪಿ. ಕುಮಾರಸ್ವಾಮಿ ಅವರದ್ದು ಎನ್ನಲಾದ ಆಡಿಯೋ ಬಹಿರಂಗವಾಗಿದೆ. ಕುಮಾರಸ್ವಾಮಿ ಹಾಗೂ ಪೊಲೀಸರ ಮಧ್ಯೆ ನಡೆದ ಸಂಭಾಷಣೆಯ ವಿಡಿಯೋ ತುಣುಕು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ .

ಕಾಕತಾಳೀಯ ಎನ್ನುವಂತೆ ಸಚಿವ ಸಂಪುಟ ವಿಸ್ತರಣೆಯ ಮಾತುಗಳು ಕೇಳಿಬರುತ್ತಿರುವ ಬೆನ್ನ ಹಿಂದೆ ಈ ಆಡಿಯೋ ಲೀಕ್ ಆಗಿರುವುದು ವಿಶೇಷ .

ಈ ಹಿಂದೆಯೂ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಶಾಸಕರು ಆಡಿದ ಕೆಲವು ವಿಡಿಯೋಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿತ್ತು. ಕೆಲ ವಿವಾದಗಳು ನಡೆದಿದ್ದವು .

ಆಡಿಯೋದಲ್ಲಿ ಏನಿದೆ ?

ಶಾಸಕ : ಹಲೋ ಯಾರಪ್ಪಾ ಇದು ನಂಬರು ?

ಪೋಲಿಸ್ : ನಾನು ರವೀಶ್ ಮಾತಾಡೋದು ಸಾರ್ 

ಶಾಸಕ :ಈಗ ಎಲ್ಲಿದ್ದೀಯಪ್ಪ ನೀನು 

ಪೊಲೀಸ್ :ಸ್ಟೇಷನ್ ನಲ್ಲಿ ಸಾರ್

ಶಾಸಕ :ಇಲ್ಲಿಗೆ ಬರ್ಬೇಡ ಅಂದಿದ್ನಲ್ಲ ನಾನು 

ಪೊಲೀಸ್ :  ಐಜಿ ಸಾರ್ ತಗೋ ಅಂತ ಹೇಳಿದ್ರು ಸಾರ್ 

ಶಾಸಕ : ವಾಪಸ್ ಹೊಗಲೇ.. ಮರ್ಯಾದೆಯಿಂದ ವಾಪಸ್ ಹೋಗು

ಪೊಲೀಸ್ : ನಾಳೆ ಬಂದ್ ನಿಮ್ಮನ್ನಾ  ಕಾಣ್ತೀನಿ  

 ಶಾಸಕ : ನನಗೆ ವಾಪಸ್ ಕಳಿಸುವುದು ಗೊತ್ತು ಯಾರ್ಯಾರಿಗೆ ಎಷ್ಟೆಷ್ಟು ಕೊಟ್ಟಿದ್ದೀಯಾ ಎಲ್ಲಾ ಗೊತ್ತು ,

ಪೊಲೀಸ್ : ಇಲ್ಲ ಸಾರ್ ಯಾರಿಗೂ ಏನೂ ಕೊಟ್ಟಿಲ್ಲ ಐಜಿ ಹೇಳಿದ್ರು ಅಷ್ಟೆ 

ಶಾಸಕ : ಯಾವನ್ ಐಜಿ ?  ಮೂಡಿಗೆರೆಗೆ ನಾನೇ ದೊಡ್ಡವನು .ಮರ್ಯಾದೆಯಿಂದ ವಾಪಸ್ ಹೋಗು.(ಇಲ್ಲ ಸಾರ್ ನಾಳೆ ಬಂದು ಕಾಣುತ್ತೇನೆ )ಬಂದ ದಾರಿಯಲ್ಲೇ ವಾಪಸ್ ಹೋಗು

ಇತ್ತೀಚಿನ ಸುದ್ದಿ

ಜಾಹೀರಾತು