1:03 PM Tuesday27 - January 2026
ಬ್ರೇಕಿಂಗ್ ನ್ಯೂಸ್
ಸುನಿಲ್ ಕುಮಾರ್ ಪರಶುರಾಮನ ಮೂರ್ತಿಯ ಫೈಬರ್ ನಲ್ಲಿ ಮಾಡಿಸಿ ಕಂಚಿನದ್ದು ಎಂದು ನಂಬಿಸಿದ್ದರು:… ಸೋಮವಾರಪೇಟೆ ಕಾಜೂರಿನಲ್ಲಿ ಭಾರೀ ಬೆಂಕಿ ಅವಘಡ: ಮನೆಯೊಳಗೆ ನಿದ್ರಿಸುತ್ತಿದ್ದ ಬಾಲಕ ಬಚಾವ್ ಮಾಡಿದ… ಕೊಡಗಿನ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಬದ್ಧ: ಉಸ್ತುವಾರಿ ಸಚಿವ ಬೋಸರಾಜ್ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಾರ್ಯಾಲದಲ್ಲಿ ಗಣರಾಜ್ಯೋತ್ಸವ: 130ಕ್ಕೂ ಅಧಿಕ ವಾಹನ ಚಾಲಕಿಯರಿಗೆ… ರಾಜ್ಯದಲ್ಲಿದ್ದಾರೆ ಒಟ್ಟು 10,365 ಟ್ರಾನ್ಸ್ ಜೆಂಡರ್: ಸಮೀಕ್ಷೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸ್ಥಿತಿಗತಿ ಬಗ್ಗೆ… ಹುಬ್ಬಳ್ಳಿ | ಕೊಳೆಗೇರಿ ನಿವಾಸಿಗಳ ಮುಖ್ಯವಾಹಿನಿಗೆ ತರಲು ಬೃಹತ್ ಪ್ರಮಾಣದಲ್ಲಿ ಮನೆ ವಿತರಣೆ:… ಪ್ರೀತಿಯಲ್ಲಿ ಒಂದಾದ ಭಾರತ- ಚೀನಾ!: ಚೈನಾದ ಬೆಡಗಿಯ ಕೈ ಹಿಡಿದ ಕಾಫಿನಾಡ ಯುವಕ ಗೋಣಿಕೊಪ್ಪ- ತಿತಿಮತಿ ಮುಖ್ಯ ರಸ್ತೆಯಲ್ಲಿ‌ ರಾತ್ರಿ ವ್ಯಾಘ್ರನ ದರ್ಶನ; ಭಯಭೀತರಾದ ಗ್ರಾಮಸ್ಥರು ಸದನದ ಪಾವಿತ್ರ್ಯತೆ ಹಾಳು ಮಾಡುವ ಕೆಲಸ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟೀಕೆ ನರೇಗಾ ಉಳಿಸಲು ಕಾಂಗ್ರೆಸ್ ಉಪವಾಸ ಸತ್ಯಾಗ್ರಹ

ಇತ್ತೀಚಿನ ಸುದ್ದಿ

ಪಿಎಸ್ ಐ  ನೇಮಕಾತಿ: ಜ್ಞಾನಜ್ಯೋತಿ ಸ್ಕೂಲ್ ನಲ್ಲಿ ಡಿಲಿಂಗ್ ಹೇಗೆ ನಡೆಯುತ್ತಿತ್ತು?; ಬಂಧಿತ ಕಾಶೀನಾಥ್ ಬಾಯ್ಬಿಟ್ಟ ಸತ್ಯ ಏನು?

06/05/2022, 00:01

ಬೆಂಗಳೂರು(reporterkarnataka.com):ಪಿಎಸ್‍ ಐ  ಪರೀಕ್ಷೆಯ ಅಕ್ರಮದಲ್ಲಿ ಬಗೆದಷ್ಟು ರಹಸ್ಯ ಬಯಲಾಗುತ್ತಿದ್ದು, ಜ್ಞಾನಜ್ಯೋತಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ ಡಿಲಿಂಗ್ ಹೇಗೆ ನಡೆಯುತಿತ್ತು ಎನ್ನುವುದನ್ನು ಬಂಧಿತ ಆರೋಪಿ ಮುಖ್ಯೋಪಾಧ್ಯಾಯ ಕಾಶಿನಾಥ ಬಹಿರಂಗ ಪಡಿಸಿದ್ದಾನೆ.

ಈ‌ ನಡುವೆ ಪ್ರಕರಣದ ಸಂಬಂಧ ಕಾಂಗ್ರೆಸ್ ಶಾಸಕ ಪ್ರಿಯಾಂಕ ಖರ್ಗೆ ಅವರಿಗೆ ಮೂರನೇ ಬಾರಿ ಸಿಐಡಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗಲು ನೋಟೀಸ್ ನೀಡಿದ್ದು, ಅವರು ಇಂದು ವಿಚಾರಣೆ ಹಾಜರಾಗುತ್ತಾರೋ ಇಲ್ಲವೋ ಎನ್ನುವ ಕುತೂಹಲ ಮೂಡಿದೆ.

ಸಿಐಡಿ ವಿಚಾರಣೆಯಲ್ಲಿ ಆರೋಪಿ ಕಾಶೀನಾಥ್ 2014ರಿಂದ ಈ ರೀತಿಯ ಕೃತ್ಯ ಎಸಗುತ್ತಿದ್ದೆ ಎನ್ನುವುದನ್ನು ಬಾಯ್ಬಿಟ್ಟಿದ್ದಾನೆ.

ದಿವ್ಯಾ ಹಾಗರಗಿ ಹಾಗೂ ಮಂಜುನಾಥ ಮೇಲ್ಕುಂದಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿದ್ದರು. ಅಭ್ಯರ್ಥಿಗಳಿಂದ ಅರ್ಧ ಹಣ ಪಾವತಿ ಆಗುತ್ತಿದ್ದಂತೆ  ರೋಲ್ ನಂಬರ್ ಸ್ಕೂಲ್ ಪ್ರಿನ್ಸಿಪಾಲ್‍ ಗೆ ಹೋಗುತ್ತಿತ್ತು. ನಂತರ ಜ್ಞಾನ ಜ್ಯೋತಿ ಸ್ಕೂಲ್ ಪ್ರಿನ್ಸಿಪಾಲ್ ಕಾಶಿನಾಥ ಡೀಲಿಂಗ್ ಪಡೆಯುತ್ತಿದ್ದ. ಡೀಲಿಂಗ್ ಪಡೆದು ಇನ್ವಿಜಿಲೇಟರ್‌ ಗಳನ್ನು ಬುಕ್ ಮಾಡಿಕೊಳ್ಳುತ್ತಿದ್ದ.

545 ಪಿಎಸ್‍ ಐ ಹುದ್ದೆಗಳ ಪರೀಕ್ಷೆ ಯಲ್ಲಿ ಜ್ಞಾನ ಜ್ಯೋತಿ ಪರೀಕ್ಷಾ ಕೇಂದ್ರಕ್ಕೆ ಸಾವಿತ್ರಿ, ಸುಮಾ, ಅರ್ಚನಾ, ಸುನಂದಾ, ಸಿದ್ದಮ್ಮ ಇನ್ವಿಜಿಲೇಟರ್‌ ಗಳಾಗಿ ಹೋಗಿದ್ದರು. ಈ ಐವರಿಗೂ ಕಾಶಿನಾಥ್ ಅಭ್ಯರ್ಥಿಗಳ ರೋಲ್ ನಂಬರ್ ಮೆಸೇಜ್ ಮಾಡುತ್ತಿದ್ದನು. ನಂತರ ಆ ರೋಲ್ ನಂಬರ್‌ ನಲ್ಲಿರುವ ಕ್ಯಾಂಡಿಡೇಟ್‍ ಗಳಿಗೆ ಇದೇ ಮೇಲ್ವಿಚಾರಕರು ಉತ್ತರಗಳ ಚೀಟಿಯನ್ನು ತೆಗೆದುಕೊಂಡು ಹೋಗಿ ಕೊಡುತ್ತಿದ್ದರು. ಇದೇ ವೇಳೆ ಬೇರೆ ಅಭ್ಯರ್ಥಿಗಳು ನೋಡಬಹುದು ಅಂತ ಎಕ್ಸಾಂನ ಬಳಿಕ ಮೇಲ್ವಿಚಾರಕರು ತಿದ್ದುವುದಾಗಿ ಹೇಳುತ್ತಿದ್ದರು.

ಕೇವಲ ವಾಟ್ಸಪ್ ಮೂಲಕವೇ ಕಾಶಿನಾಥ ಮೇಲ್ವಿಚಾರಕರಿಗೆ ಎಲ್ಲ ಮಾಹಿತಿಯನ್ನು ನೀಡುತ್ತಿದ್ದ. ಈ ಕೆಲಸವನ್ನು ಮಾಡಲು ಒಬ್ಬೊಬ್ಬ ಮೇಲ್ವಿಚಾರಕರಿಗೆ ಕಾಶಿನಾಥ 1 ಲಕ್ಷ ರೂಪಾಯಿ ಪರೀಕ್ಷಾ ಕೊಠಡಿಗೆ ಹೋಗುವ ಮುನ್ನವೇ ನೀಡುತ್ತಿದ್ದ. ಹಣವನ್ನು ಪಡೆದ ಬಳಿಕ ಇವರು ಕೊಠಡಿಯ ಪರಿವೀಕ್ಷಣೆಗೆ ತೆರಳುತ್ತಿದ್ದರು. ಈ ಸ್ಕ್ಯಾಮ್‍ ನಲ್ಲಿ ಕಾಶಿನಾಥ ನಾಲ್ಕು ಲಕ್ಷ ರೂಪಾಯಿ ಇಟ್ಟುಕೊಳ್ಳುತ್ತಿದ್ದನು. ಇದೀಗ ಸಿಐಡಿ  ಪೊಲೀಸರ ಮುಂದೆ 2014 ರಿಂದ ವ್ಯವಹಾರ ಮಾಡುತ್ತಿದ್ದೆ ಎಂದು ತಪ್ಪನ್ನು ಒಪ್ಪಿಕೊಂಡಿದ್ದಾನೆ. ದಿವ್ಯಾ, ಮಂಜುನಾಥ ಹೇಳುತ್ತಿದ್ದಂತೆ ನನಗೆ ಬೇಕಾದ ಮೇಲ್ವಿಚಾರಕರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೆ ಎಂದಿದ್ದಾನೆ.

ಮತ್ತಷ್ಟು ತನಿಖೆ ನಡೆಸಬೇಕಾದ ಕಾರಣ ಮತ್ತೆ ಎಂಟು ದಿನಗಳ ಕಾಲ ಮಂಜುನಾಥ ಮೇಲ್ಕುಂದಿ, ಕಾಶಿನಾಥ, ಅಭ್ಯರ್ಥಿ ಶ್ರೀಧರನನ್ನು ಕಸ್ಟಡಿಗೆ ಪಡೆಯಲಾಗಿದೆ. ಈ ಹಿಂದೆ ಸೆಲೆಕ್ಟ್ ಆದ ವ್ಯಕ್ತಿಗಳ ಮಾಹಿತಿಯನ್ನು ಕೂಡ ಕಾಶಿನಾಥ ಬಾಯ್ಬಿಟ್ಟಿದ್ದಾನಂತೆ. ಈಗಿರುವ ಹಾಲಿ ಪಿಎಸ್‍ ಐಗಳ ಗುಂಪಲ್ಲೂ ಗೋಲ್ ಮಾಲ್ ನಡೆದು ಹುದ್ದೆ ಗಿಟ್ಟಿಸಿಕೊಂಡಿದ್ದಾರೆ ಎಂದು ಕಾಶಿನಾಥ ಹೇಳಿದ್ದಾನೆ.

ಮತ್ತೊಂದೆಡೆ ಪರೀಕ್ಷಾ ಕೇಂದ್ರದಲ್ಲಿ ನಡೆದಿರುವ ಅಕ್ರಮಗಳಿಗೆ ಪೊಲೀಸರೇ ಶ್ರೀರಕ್ಷೆ ನೀಡಿದ್ದಾರೆ ಎನ್ನಲಾಗುತ್ತಿದೆ. ಬೆಂಗಳೂರಿನ ಪಾಲು ಬಹಳ ದೊಡ್ಡದಿದೆ. ಅದಕ್ಕೆ ಅರೆಸ್ಟ್ ಆಗಿ ಸಿಐಡಿ ಕಸ್ಟಡಿಯಲ್ಲಿರೋ ಅಭ್ಯರ್ಥಿಗಳ ಸಂಖ್ಯೆ ಸಾಕ್ಷಿ. ಅಲ್ಲದೆ, ಬಹುತೇಕ ಟಾಪರ್ಸ್‍ಗಳೇ ಹಿಟ್ ಲಿಸ್ಟ್‍ನಲ್ಲಿದ್ದಾರೆ. ಪಿಎಸ್‍ಐ ನೇಮಕಾತಿಯಲ್ಲಿ ನಡೆದಿರುವ ಅಕ್ರಮ ಬಗೆದಷ್ಟು ಬಯಲಾಗುತ್ತಿದೆ ತಾತ್ಕಾಲಿಕ ಪಟ್ಟಿಯಲ್ಲಿ ಆಯ್ಕೆ ಆಗಿರುವ ಟಾಪರ್ಸ್‍ಗಳೇ ಆರೋಪಿಗಳ ಪಟ್ಟಿಯಲ್ಲಿದ್ದಾರೆ.

ಈ ಪ್ರಕರಣದಲ್ಲಿ ನಾಲ್ವರು ಡಿವೈಎಸ್‍ಪಿ, ಇಬ್ಬರು ಸಿಪಿಐಗಳು ಭಾಗಿಯಾಗಿದ್ದು, ಅಭ್ಯರ್ಥಿಗಳಿಗೆ ಬ್ಲೂಟೂತ್ ಸರಬರಾಜು ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಈಗಾಗಲೇ ಮೂವರು ಡಿವೈಎಸ್‍ಪಿಗಳ ವಿಚಾರಣೆ ನಡೆಸಿದ ಸಿಐಡಿ ಅಧಿಕಾರಿಗಳು ಓರ್ವ ಡಿವೈಎಸ್‍ಪಿಯ ಎರಡು ಮೊಬೈಲ್ ಸೀಜ್ ಮಾಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು