1:24 AM Tuesday26 - May 2026
ಬ್ರೇಕಿಂಗ್ ನ್ಯೂಸ್
ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ 30ರಂದು ಮಂಗಳೂರಿಗೆ: ಧರ್ಮಸ್ಥಳದಲ್ಲಿ ವಾಸ್ತವ್ಯ ಗಂಡನ ಸಾವಿನ ನೋವಿನಲ್ಲೂ ಮಾನವೀಯತೆ ಮೆರೆದ ಗರ್ಭಿಣಿ ಪತ್ನಿ! ಕಿಡ್ನಿ, ಹಾರ್ಟ್ ಮತ್ತು… ಕಾಫಿ ತೋಟದಲ್ಲಿ ಕಾಡಾನೆಗಳ ‘ರೌದ್ರ ನರ್ತನ: ಅರಣ್ಯ ಸಿಬ್ಬಂದಿಯನ್ನೇ ಬೆನ್ನಟ್ಟಿದ ಗಜಪಡೆ ಮೇಕೆದಾಟು ವಿವಾದ: ತಮಿಳುನಾಡು ಸಿಎಂ ವಿಜಯ್ ತುರ್ತು ಸಭೆ, ಕಾನೂನು ಹೋರಾಟ ಚುರುಕುಗೊಳಿಸಲು… ಕೊಲ್ಲೂರು ಆಕ್ಸಿಡೆಂಟ್ | ಮೃತ ಮಹಿಳೆಯ ಮೈ ಮೇಲಿನ ಚಿನ್ನಾಭರಣ ಕದ್ದ ಕೇಸಿಗೆ… ಚಿಕ್ಕಮಗಳೂರು: ಕೈ ಕೈ ಮಿಲಾಯಿಸುವ ಮಟ್ಟಿಗೆ ತಲುಪಿದ ಕಾಂಗ್ರೆಸ್ – ಬಿಜೆಪಿ ಕಾರ್ಯಕರ್ತರ… ಮಂಗಳೂರು ವಿಮಾನ ದುರಂತ | ಕಾಕ್‌ಪಿಟ್‌ನಲ್ಲಿ ಹಾರಾಟದ ವೇಳೆ 1 ಗಂಟೆ 40… ಭಾರತೀಯರ ರಕ್ತಕ್ಕೆ ಪಾಕ್​ನಲ್ಲಿ ಪ್ರತೀಕಾರ: ಪುಲ್ವಾಮಾ ದಾಳಿ ಮಾಸ್ಟರ್‌ ಮೈಂಡ್ ಹಮ್ಜಾ ಬುರ್ಹಾನ್… ದ್ವಿತೀಯ ಪಿಯುಸಿ ಪರೀಕ್ಷೆ-2 ಫಲಿತಾಂಶ ಪ್ರಕಟ: 80,535 ವಿದ್ಯಾರ್ಥಿಗಳ ಪೈಕಿ 36,764 ಮಂದಿ… ತಜ್ಞರ ಸಮಿತಿ ವರದಿಯನ್ನು ನಿರ್ಲಕ್ಷಿಸಿದ್ದೇ ದುಬಾರೆ ದುರ್ಘಟನೆ ಕಾರಣ?

ಇತ್ತೀಚಿನ ಸುದ್ದಿ

ದುರ್ಗಾಂಭ ದೇವಿಯ ತಾಳಿ ಕಳ್ಳತನ: 4 ದಿನದ ಬಳಿಕ ತಾಳಿ ಜತೆ ತಪ್ಪುಕಾಣಿಕೆ ಸಲ್ಲಿಸಿ ಕಳ್ಳರು!!

03/05/2022, 21:16

ಸಾಂದರ್ಭಿಕ ಚಿತ್ರ
ಮೈಸೂರು(reporterkarnataka.com): ದೇವಿಯ ಮೂರ್ತಿಯಲ್ಲಿರುವ ತಾಳಿಯನ್ನು ಕದ್ದ ಕಳ್ಳರು 4 ದಿನಗಳ ಬಳಿಕ ಅದನ್ನು ವಾಪಸ್ ತಂದು 100 ರೂ. ತಪ್ಪು ಕಾಣಿಕೆ ಹಾಕಿದ ಘಟನೆ ನಂಜನಗೂಡು ತಾಲೂಕಿನ ಉಪ್ಪಿನಹಳ್ಳಿ ಗ್ರಾಮದಲ್ಲಿ ನಡೆದಿದೆ. 

ಉಪ್ಪಿನಹಳ್ಳಿ ಗ್ರಾಮದ ದುರ್ಗಾಂಭ ದೇವಸ್ಥಾನದಲ್ಲಿ ಈ ಅಪರೂಪದ ಘಟನೆ ನಡೆದಿದೆ. ಕಳೆದ ವಾರವಷ್ಟೇ ದೇವಸ್ಥಾನದಲ್ಲಿ ಹುಂಡಿ ಕಳ್ಳತನವಾಗಿತ್ತು. ಹುಂಡಿ ಜೊತೆ ದೇವರ ತಾಳಿಯನ್ನು ಸಹ ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದರು.

ಪೊಲೀಸ್ ಕಂಪ್ಲೇಂಟ್ ಬಳಿಕ ನಾಲ್ಕು ದಿನ ದೇವಸ್ಥಾನದ ಬಾಗಿಲು ಮುಚ್ಚಲಾಗಿತ್ತು. ನಾಲ್ಕು ದಿನದ ನಂತರ ದೇವಸ್ಥಾನದ ಬಾಗಿಲು ತೆರೆದು ನೋಡಿದ ಅರ್ಚಕರಿಗೆ ಅಚ್ಚರಿ ಖಾದಿತ್ತು. ಕದ್ದಿದ್ದ ತಾಳಿಯನ್ನ 100 ರೂ. ನೋಟಿನಲ್ಲಿ ಕಟ್ಟಿ ದೇವಸ್ಥಾನದ ಮುಂದೆ ಇಟ್ಟು ಹೋಗಿದ್ದ ಕಳ್ಳರು. ಇದು ದೇವಿಯ ಮಹಿಮೆಯೇ ಸರಿ ಎಂದು ಗ್ರಾಮಸ್ಥರು ಈ ಪವಾಡ ಸದೃಶ ಘಟನೆ ಬಗ್ಗೆ ಹೇಳಿಕೊಳ್ಳುತ್ತಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು