ಇತ್ತೀಚಿನ ಸುದ್ದಿ
ಭಾರತ ಧಗಧಗ: 122 ವರ್ಷಗಳಲ್ಲಿ ಅತ್ಯಧಿಕ ತಾಪಮಾನ ದಾಖಲು; ಮೇ ತಿಂಗಳಲ್ಲಿ ಇಳಿಕೆ ಸಾಧ್ಯತೆ
01/05/2022, 14:09
ಹೊಸದಿಲ್ಲಿ(reporterkarnataka.com): ಇಡೀ ದೇಶವೇ ಧಗಧಗನೆ ಕುದಿಯುತ್ತಿದೆ. ತಾಪಮಾನ ಹೆಚ್ಚಾಗುತ್ತಿದೆ. ಭಾರತದ ವಾರ್ಷಿಕ ಸರಾಸರಿ ತಾಪಮಾನವು ಕಳೆದ 122 ವರ್ಷಗಳ ಅವಧಿಯಲ್ಲಿ ಇದೇ ಮೊದಲಬಾರಿಗೆ ಅತ್ಯಧಿಕ ಪ್ರಮಾಣವನ್ನು ದಾಖಲಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಹೀಟ್ ವೇವ್ ನ ಪರಿಣಾಮ ಮಾರ್ಚ್ ತಿಂಗಳಿನಿಂದಲೇ ವಾಯವ್ಯ ಭಾರತದ ತಾಪಮಾನದಲ್ಲಿ ಏರಿಕೆಯಾಗಿದೆ. ಇದು 1900ನೇ
ಇಸವಿಯಿಂದ ಇಲ್ಲಿಯವರೆಗೆ ದಾಖಲಾದ ಗರಿಷ್ಟ ಪ್ರಮಾಣವಾಗಿದೆ. ಮೇ ತಿಂಗಳಲ್ಲಿ ಈ ಪ್ರಮಾಣವು ಸರಾಸರಿಗಿಂತ ತುಸು ಇಳಿಕೆಯಾಗಬಹುದು ಎಂದು ಊಹಿಸಲಾಗಿದೆ.
ಹವಾಮಾನ ಇಲಾಖೆಯ ಪ್ರಕಾರ ಮೇ ತಿಂಗಳಲ್ಲಿ ಪಶ್ಚಿಮದ ಅಡಚಣೆ (ವೆಸ್ಟರ್ನ್ ಡಿಸ್ಟರ್ಬನ್ಸ್) ಗಳ ಪರಿಣಾಮದಿಂದಾಗಿ ವಾಯವ್ಯ ಭಾಗಗಳಲ್ಲಿ ಗಣನೀಯವಾಗ ಇಳಿಕೆಯಾಗುವ ಸಾಧ್ಯತೆಯಿದೆ.