7:11 AM Monday21 - April 2025
ಬ್ರೇಕಿಂಗ್ ನ್ಯೂಸ್
DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ…

ಇತ್ತೀಚಿನ ಸುದ್ದಿ

ಭಾರತದಲ್ಲಿ ಸುಸ್ಥಿರ ಕಲ್ಲಿದ್ದಲು ಗಣಿಗಾರಿಕೆ:  ವಿಶ್ವ ಕಲ್ಲಿದ್ದಲು ಸಂಘʼದೊಂದಿಗೆ `ಗೇನ್ವೆಲ್ ಎಂಜಿನಿಯರಿಂಗ್ʼ ಪಾಲುದಾರಿಕೆ

28/04/2022, 18:29

•ದೇಶದಲ್ಲಿ ಇಂಧನ ಭದ್ರತೆಯನ್ನು ಸಾಧಿಸಲು ಗಣಿಗಾರಿಕೆಯಲ್ಲಿ ʻಸ್ವಚ್ಛ ತಂತ್ರಜ್ಞಾನʼಕ್ಕೆ(ಕ್ಲೀನ್ಟೆಕ್) ಕರೆ ನೀಡಿದೆ ಮತ್ತು '2070 ರ ವೇಳೆಗೆ ನಿವ್ವಳ ಶೂನ್ಯʼ ಸಾಧನೆಗೆ ಭಾರತದ ಬದ್ಧತೆಯನ್ನು ಸಂಸ್ಥೆಯು ಸ್ವಾಗತಿಸುತ್ತದೆ.

•ಪಶ್ಚಿಮ ಬಂಗಾಳದ ಪನಗಢದಲ್ಲಿರುವ ತನ್ನ ಉತ್ಪಾದನಾ ಘಟಕದಲ್ಲಿ ಭೂಗತ ಗಣಿಗಾರಿಕೆಗಾಗಿ ಆಮದು ಮಾಡಿದ ಸಲಕರಣೆಗಳ ಮೇಲಿನ ಭಾರತದ ಅವಲಂಬನೆಯನ್ನು ಕಡಿಮೆ ಮಾಡುವ ಗುರಿಯನ್ನು ʻಗೇನ್ವೆಲ್ʼ ಹೊಂದಿದೆ.

ಹೊಸದಿಲ್ಲಿ(reporterkarnataka.com): ʻಗೇನ್ವೆಲ್ ಕಮೋಸಲ್ ಪ್ರೈವೇಟ್ ಲಿಮಿಟೆಡ್ʼನ (ಈ ಹಿಂದಿನ ʻಟ್ರಾಕ್ಟರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್) ಉತ್ಪಾದನಾ ಉದ್ಯಮವಾದ ʻಗೇನ್ವೆಲ್  ಎಂಜಿನಿಯರಿಂಗ್ʼ, ಭಾರತದಲ್ಲಿ ಸುಸ್ಥಿರ ಕಲ್ಲಿದ್ದಲು ಗಣಿಗಾರಿಕೆಯನ್ನು ಉತ್ತೇಜಿಸಲು ʻವಿಶ್ವ ಕಲ್ಲಿದ್ದಲು ಸಂಘʼದ (ವರ್ಲ್ಡ್ ಕೋಲ್ ಅಸೋಸಿಯೇಷನ್ -ಡಬ್ಲ್ಯುಸಿಎ) ಜೊತೆ ಪಾಲುದಾರಿಕೆಯನ್ನು ಮಾಡಿಕೊಂಡಿದೆ. ಇದರೊಂದಿಗೆ ʻಗೇನ್ವೆಲ್ʼ ಸಂಸ್ಥೆಯು ʻವಿಶ್ವ ಕಲ್ಲಿದ್ದಲು ಸಂಘʼದೊಂದಿಗೆ ಪಾಲುದಾರಿಕೆ ಹೊಂದಿರುವ ಭಾರತದ ಎರಡನೇ ಸಂಸ್ಥೆಯಾಗಿ ಹೊರಹೊಮ್ಮಿದೆ.

2021-22ರ ಆರ್ಥಿಕ ಸಮೀಕ್ಷೆಯ ಪ್ರಕಾರ, 2030ರ ವೇಳೆಗೆ ಭಾರತದಲ್ಲಿ ಕಲ್ಲಿದ್ದಲು ಬೇಡಿಕೆಯು 1.3 ರಿಂದ 1.5 ಶತಕೋಟಿ ಟನ್ಗಳ ವ್ಯಾಪ್ತಿಯಲ್ಲಿರಲಿದೆ ಎಂದು ಅಂದಾಜಿಸಲಾಗಿದೆ, ಇದು ಪ್ರಸ್ತುತ ಬೇಡಿಕೆಗಿಂತ 63% ಹೆಚ್ಚಾಗಿದೆ. ಈ ಪಾಲುದಾರಿಕೆಯು ಕಲ್ಲಿದ್ದಲು ಗಣಿಗಾರಿಕೆ ಸಲಕರಣೆಗಳ ಆಮದಿನ ಮೇಲಿನ ಭಾರತದ ಅವಲಂಬನೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಜೊತೆಗೆ ಸುಸ್ಥಿರ ರೀತಿಯಲ್ಲಿ ಕಲ್ಲಿದ್ದಲಿನ ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ಸ್ಥಳೀಯವಾಗಿ ಅತ್ಯಾಧುನಿಕ ಉಪಕರಣಗಳನ್ನು ತಯಾರಿಸುವ ಗುರಿಯನ್ನು ಹೊಂದಿದೆ. ಇದು ಭಾರತಕ್ಕೆ ಕಲ್ಲಿದ್ದಲು ಆಮದು ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ದೇಶದ ಇಂಧನ ಭದ್ರತೆಯನ್ನು ಸಾಧಿಸಲು ಅನುವು ಮಾಡಿಕೊಡುತ್ತದೆ.

ಕಲ್ಲಿದ್ದಲು ಈಗಲೂ ವಿಶ್ವದ ಅತಿದೊಡ್ಡ ಶಕ್ತಿಯ ಮೂಲವಾಗಿ ಉಳಿದಿದೆ ಮತ್ತು ಭಾರತದಲ್ಲಿ ಸುಸ್ಥಿರ ಕಲ್ಲಿದ್ದಲು ಗಣಿಗಾರಿಕೆ ಇಂದಿನ ತುರ್ತು ಅಗತ್ಯವಾಗಿದೆ. ʻವಿಶ್ವ ಕಲ್ಲಿದ್ದಲು ಸಂಘʼದ ಸಿಇಒ

ಮಿಶೆಲ್ ಮನೋಕ್ ಅವರು ಮಾತನಾಡಿ, “ಭಾರತದಂತಹ ದೇಶಗಳು ಮತ್ತು ʻಗೇನ್ವೆಲ್ ಎಂಜಿನಿಯರಿಂಗ್ʼನಂತಹ ಕಂಪನಿಗಳು ಕಲ್ಲಿದ್ದಲಿನ ಸುಸ್ಥಿರ ಪ್ರಯಾಣದ ಬಗ್ಗೆ ಚರ್ಚೆಯನ್ನು ಮುನ್ನಡೆಸುತ್ತಿರುವುದು ನಿರ್ಣಾಯಕವಾಗಿದೆ.   ಅನೇಕ ದೇಶಗಳ ವ್ಯಾಪ್ತಿಯಲ್ಲಿ (ಆಸ್ಟ್ರೇಲಿಯಾ, ಚೀನಾ, ರಷ್ಯಾ, ದಕ್ಷಿಣ ಆಫ್ರಿಕಾ, ಅಮೆರಿಕ ಸೇರಿದಂತೆ) ಏಕೀಕೃತ ಕಲ್ಲಿದ್ದಲು ಮೌಲ್ಯ ಸರಪಳಿಯಾಗಿ, ನಮ್ಮ ಜಾಗತಿಕ ಸಮುದಾಯದ ಸಾಮೂಹಿಕ ಆರ್ಥಿಕ ಅಭಿವೃದ್ಧಿ ಮತ್ತು ಪರಿಸರ ಗುರಿಗಳನ್ನು ಪೂರೈಸಲು ನಮಗೆ ಉತ್ತಮ ಅವಕಾಶವಿರುತ್ತದೆ ಎಂದು ಅರ್ಥಮಾಡಿಕೊಂಡಿರುವ ʻಗೇನ್ವೆಲ್ ಎಂಜಿನಿಯರಿಂಗ್ʼ ನಿರ್ವಹಣಾ ತಂಡವನ್ನು ನಾವು ಸ್ವಾಗತಿಸುತ್ತೇವೆ. ಭಾರತದಂತಹ ದೇಶಗಳಿಗೆ, ಈ ಮಹತ್ವಾಕಾಂಕ್ಷೆಗಳು ಅಷ್ಟೇನೂ ಪ್ರತ್ಯೇಕವಾಗಿಲ್ಲ.

‘ಡಬ್ಲ್ಯುಸಿಎ ಸದಸ್ಯತ್ವವನ್ನು ಸ್ವಾಗತಿಸಿದ ʻಗೇನ್ವೆಲ್ ಎಂಜಿನಿಯರಿಂಗ್ʼ ಅಧ್ಯಕ್ಷರಾದ ಶ್ರೀ ಸುನಿಲ್ ಚತುರ್ವೇದಿ, ಅವರು ಹವಾಮಾನ ಬದಲಾವಣೆ ಮತ್ತು ವಾಯುಮಾಲಿನ್ಯದ ಬಗೆಗಿನ ಕಳವಳಗಳು ಹೆಚ್ಚು ಸುಸ್ಥಿರವಾದ ಮಾರ್ಗವನ್ನು ಅನುಸರಿಸುವ ಅಗತ್ಯವನ್ನು ಎತ್ತಿ ತೋರಿಸಿದ್ದರೂ, ಜಾಗತಿಕ ಹವಾಮಾನ ಬದಲಾವಣೆಯ ಕುರಿತಾದ ಯಾವುದೇ ಚರ್ಚೆಯಲ್ಲಿ ಭಾರತವನ್ನು ನಿರ್ಲಕ್ಷಿಸಲಾಗದು. ಅದೇ ರೀತಿ ಭಾರತದ ಇಂಧನ ಭವಿಷ್ಯದ ಕುರಿತಾದ ಯಾವುದೇ ಚರ್ಚೆಯಲ್ಲಿ ಕಲ್ಲಿದ್ದಲನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ.

ಕಲ್ಲಿದ್ದಲು ಭಾರತಕ್ಕೆ ಇಂಧನ ಭದ್ರತೆಯ ಪ್ರಮುಖ ಆಧಾರಸ್ತಂಭವಾಗಿ ಉಳಿದಿದೆ. ಆದರೆ ಇದುವರೆಗೂ ದೇಶವು ತನ್ನ ಭೂಗತ ಗಣಿಗಾರಿಕೆ ಕಾರ್ಯಾಚರಣೆಗಳನ್ನು, ವಿಶೇಷವಾಗಿ ಕಲ್ಲಿದ್ದಲನ್ನು ವಿಸ್ತರಿಸಲು ಆಮದು ಮಾಡಿಕೊಂಡ ಭೂಗತ ಗಣಿಗಾರಿಕೆ ಯಂತ್ರೋಪಕರಣಗಳನ್ನು ಸಂಪೂರ್ಣವಾಗಿ ಅವಲಂಬಿಸಿತ್ತು. ಪಶ್ಚಿಮ ಬಂಗಾಳದ ಪನಗಢದಲ್ಲಿ ನಮ್ಮ ಅತ್ಯಾಧುನಿಕ ಉತ್ಪಾದನಾ ಘಟಕವು ತ್ವರಿತವಾಗಿ ನಿರ್ಮಾಣವಾಗುತ್ತಿರುವುದರಿಂದ, ʻಗೇನ್ವೆಲ್ ಎಂಜಿನಿಯರಿಂಗ್ʼ ಸಂಸ್ಥೆಯು ಭಾರತ ಮತ್ತು ಇತರ ದೇಶಗಳಿಗೆ ಸಹಾಯ ಮಾಡಲಿದೆ. ಭಾರತ ಸೇರಿದಂತೆ ಆ ದೇಶಗಳು ಭೂಗತ ಖನಿಜ ಸಂಪನ್ಮೂಲಗಳನ್ನು ಹೆಚ್ಚು ಸುಸ್ಥಿರವಾಗಿ ಗಣಿಗಾರಿಕೆ ಮಾಡಲು ಮಾತ್ರವಲ್ಲದೆ ಭೂಗತ ಗಣಿಗಾರಿಕೆಗಾಗಿ ಆಮದು ಉಪಕರಣಗಳ ಮೇಲಿನ ಅವುಗಳ ಅವಲಂಬನೆಯನ್ನು ಅಂತ್ಯಗೊಳಿಸಲಿದೆ. 

‘ಪ್ಯಾರಿಸ್ ಒಪ್ಪಂದʼ ಮತ್ತು ʻವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿʼಗಳ ತತ್ವಗಳ ಆಧಾರದ ಮೇಲೆ ಹವಾಮಾನ ಬದಲಾವಣೆ ಪರಿಸ್ಥಿತಿಯ ಅಡಿಯಲ್ಲಿ ಜವಾಬ್ದಾರಿಯುತ ಕಲ್ಲಿದ್ದಲು ತತ್ವಗಳನ್ನು ʻವಿಶ್ವ ಕಲ್ಲಿದ್ದಲು ಸಂಘʼವು ಅನುಮೋದಿಸುತ್ತದೆ. ವಿಶ್ವ ಕಲ್ಲಿದ್ದಲು ಸಂಘಕ್ಕೆ ಗೇನ್ವೆಲ್ ಎಂಜಿನಿಯರಿಂಗ್ʼ ಸಂಸ್ಥೆ ಸೇರ್ಪಡೆಯು ಭಾರತದ ಕಲ್ಲಿದ್ದಲು ನಾಯಕತ್ವಕ್ಕೆ ಉತ್ತೇಜನ ನೀಡುತ್ತದೆ. 

ಹವಾಮಾನ ಬದಲಾವಣೆ ಮತ್ತು ವಾಯುಮಾಲಿನ್ಯವು ಈಗ ಅನೇಕ ವರ್ಷಗಳಿಂದ ಕಳವಳಕಾರಿ ಕ್ಷೇತ್ರಗಳಾಗಿವೆ. ಭಾರತ ಸರ್ಕಾರವು ಮುಂಬರುವ ದಶಕದಲ್ಲಿ ಶುದ್ಧ ಕಲ್ಲಿದ್ದಲಿನಲ್ಲಿ 55 ಶತಕೋಟಿ ಡಾಲರ್ ಹೂಡಿಕೆ ಯೋಜನೆಯನ್ನು ಘೋಷಿಸಿದ್ದು, ಭಾರತವು ಕಲ್ಲಿದ್ದಲು ಉದ್ಯಮದಲ್ಲಿ ಮುಂಚೂಣಿಯಲ್ಲಿದೆ. 

ಮನೋಕ್ ಅವರು, “ಕಲ್ಲಿದ್ದಲು ಬಳಕೆಯನ್ನೇ ಹಂತಹಂತವಾಗಿ ಕಡಿಮೆಗೊಳಿಸುವ ಬದಲಾಗಿ, ಕಲ್ಲಿದ್ದಲು ಗಣಿಗಾರಿಕೆಯ ಮಾಲಿನ್ಯಕಾರಕ ಮತ್ತು ಅಸುರಕ್ಷಿತ ಕಾರ್ಯವಿಧಾನವನ್ನು ಕಡಿಮೆ ಮಾಡುತ್ತಿದ್ದು, ಈ ವಿಚಾರದಲ್ಲಿ ಭಾರತದ ನಿಲುವನ್ನು ಡಬ್ಲ್ಯುಸಿಎ ಶ್ಲಾಘಿಸುತ್ತದೆ. ಕಲ್ಲಿದ್ದಲು ಈಗಲೂ ವಿಶ್ವದ ಅತಿದೊಡ್ಡ ಶಕ್ತಿಯ ಮೂಲವಾಗಿದೆ. ಇತ್ತೀಚಿನ ಮತ್ತು ಪ್ರಸ್ತುತ ಘಟನೆಗಳು ಕಲ್ಲಿದ್ದಲು ಇನ್ನೂ ಅಗತ್ಯವಿದೆ ಮತ್ತು ಅವನತಿಯಲ್ಲಿಲ್ಲ ಎಂದು ದೃಢೀಕರಿಸುತ್ತವೆ. ಕಲ್ಲಿದ್ದಲು ಕಣ್ಮರೆಯಾಗುತ್ತಿಲ್ಲ; ಸರಳವಾಗಿ ಹೇಳುವುದಾದರೆ ಇದು ಇನ್ನಷ್ಟು ಸುಸ್ಥಿರ ಮಾದರಿಗೆ ಪರಿವರ್ತನೆಗೊಳ್ಳುತ್ತಿದೆ.  ಪ್ರತಿಯೊಂದು ದೇಶದ ಕಲ್ಲಿದ್ದಲು ಮೌಲ್ಯ ಸರಪಳಿಯಲ್ಲರುವ ಪ್ರತಿಯೊಬ್ಬ ಸದಸ್ಯನೂ ಶುದ್ಧ ತಂತ್ರಜ್ಞಾನಗಳ ಮೂಲಕ ಕಲ್ಲಿದ್ದಲಿನ ವಿಕಸನವನ್ನು ಬೆಂಬಲಿಸಲು ನೇರವಾಗಿ ಮತ್ತು/ಅಥವಾ ಪರೋಕ್ಷವಾಗಿ ಏನಾದರೂ ಸಹಾಯ ಮಾಡಬಹುದು. ನಾವೆಲ್ಲರೂ ಅಂತಹ ಪರಿಹಾರದ ಭಾಗವಾಗಿದ್ದೇವೆ, ” ಎಂದರು. 

‘ಗೇನ್ವೆಲ್ ಎಂಜಿನಿಯರಿಂಗ್ʼ ಮತ್ತು ʻವಿಶ್ವ ಕಲ್ಲಿದ್ದಲು ಸಂಘʼದ ಪ್ರಕಾರ, ಹವಾಮಾನ ಬದಲಾವಣೆಯ ಕಾರ್ಯಸೂಚಿಯನ್ನು ಮರುಹೊಂದಿಸುವಲ್ಲಿ ಭಾರತವು ಈಗಾಗಲೇ ಸಕಾರಾತ್ಮಕ ಪರಿಣಾಮ ಬೀರಿದೆ ಮತ್ತು ಕಲ್ಲಿದ್ದಲಿನ ಭವಿಷ್ಯವನ್ನು ನಿಜವಾಗಿಯೂ ಕ್ರಾಂತಿಕಾರಿ ರೀತಿಯಲ್ಲಿ ಬದಲಾಯಿಸುವ ಸಾಮರ್ಥ್ಯವನ್ನು ಭಾರತ ಹೊಂದಿದೆ.

ಇತ್ತೀಚಿನ ಸುದ್ದಿ

ಜಾಹೀರಾತು