6:41 PM Saturday13 - December 2025
ಬ್ರೇಕಿಂಗ್ ನ್ಯೂಸ್
ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ: ವಿಧಾನ ಸಭೆಯಲ್ಲಿ ಸಚಿವ ಬಿ.ಎಸ್.ಸುರೇಶ್ ದ್ವೇಷ ಭಾಷಣಕ್ಕೆ 10 ವರ್ಷ ಜೈಲು ಶಾಸನ ಕಾಂಗ್ರೆಸ್ ನ ಕ್ರೂರ ಸಂಪ್ರದಾಯದ… ಚಿಕ್ಕಮಗಳೂರಿನಲ್ಲಿ ಪಿಪಿಪಿ ಮಾದರಿಯಲ್ಲಿ ಸ್ಪೈಸ್ ಪಾರ್ಕ್ ಅಭಿವೃದ್ಧಿ: ವಿಧಾನ ಪರಿಷತ್ ನಲ್ಲಿ ಸರಕಾರ… ಕೆಪಿಟಿಸಿಎಲ್: 448 ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್‌ಮ್ಯಾನ್‌ಗಳ ನೇಮಕ ಭಾರತದಲ್ಲಿ ಎಫ್ ಡಿಐ ಹೆಚ್ಚಳ: ಪ್ರಧಾನಿ ಮೋದಿಗೆ ಸಂಸದ ಬಸವರಾಜ ಬೊಮ್ಮಾಯಿ ಅಭಿನಂದನೆ ಮೈಸೂರು ಅರಮನೆ ಮುಖ್ಯ ದ್ವಾರದ ಮೇಲ್ಚಾವಣಿ ಕುಸಿತ: ವರಾಹ ಗೇಟ್ ಬಳಿ ಬ್ಯಾರಿಕೇಡ್… ಶಾಲೆಗಳ ಮೂಲಸೌಕರ್ಯಕ್ಕೆ ಕ್ರಮ; ಮಕ್ಕಳ ಶೂ-ಸಾಕ್ಸ್ ಅನುದಾನ ಪೂರ್ಣ ಬಿಡುಗಡೆ: ಸಚಿವ ಮಧು… ಹಂತ ಹಂತವಾಗಿ ಖಾಲಿ ಹುದ್ದೆಗಳ ಭರ್ತಿ: ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿ ಭರವಸೆ

ಇತ್ತೀಚಿನ ಸುದ್ದಿ

ಹೊನ್ನಾವರದ ಗೇರುಸೊಪ್ಪಾ: ವಿದ್ಯೋದಯ ಶಾಲೆಯಲ್ಲಿ ಉಚಿತ ಬೇಸಿಗೆ ರಜಾ ಶಿಬಿರ 

23/04/2022, 11:04

ಕಾರವಾರ(reporterkarnataka.con):

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಗೇರುಸೊಪ್ಪಾದ ಕೃಷ್ಣ ಕೆರೆಯಲ್ಲಿರುವ ವಿದ್ಯೋದಯ ಶಾಲೆಯಲ್ಲಿ ಉಚಿತ ಬೇಸಿಗೆ ರಜಾ ಶಿಬಿರ ಪ್ರಾರಂಭಗೊಂಡಿತು. 

ಪ್ರಥಮ ದಿನವಾದ ಏಪ್ರಿಲ್ 21 ರಂದು ಇಂಗ್ಲಿಷ್ ಲರ್ನಿಂಗ್ ವಿತ್ ಫನ್, ಚಿತ್ರಕಲೆ, ಇಂಗ್ಲಿಷ್ ಗ್ರಾಮರ್, ಹಾಡು ಇನ್ನು ಮುಂತಾದ ಅನೇಕ ಚಟುವಿಕೆಗಳೊಂದಿಗೆ ಮಕ್ಕಳು ನಲಿಯುತ್ತ ಕಲಿಯುತ್ತಾ ಸಂಭ್ರಮಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ವಿ. ಟಿ. ನಾಯ್ಕ್ ರವರು ಮಕ್ಕಳೊಂದಿಗೆ ಸಂಭ್ರಮಿಸುತ್ತಾ ತಣ್ಣನೆಯ ಐಸ್ ಕ್ರೀಂ ಮತ್ತು ಬಿಸ್ಕೆಟ್ ಗಳನ್ನು ಹಂಚಿದರು. ಮುಖ್ಯಾಧ್ಯಾಪಕಿ ಭಾರತಿ ಕುಲಕರ್ಣಿ ಮಕ್ಕಳಿಗೆ ಮಾರ್ಗದರ್ಶನ ಮಾಡುವುದರ ಜೊತೆಗೆ ಮಾತನಾಡಿ ಬೇಸಿಗೆ ರಜಾ ಶಿಬಿರ ಉಚಿತವಾಗಿ ಏಪ್ರಿಲ್ 21 ರಿಂದ ಮೇ 1ರ ವರೆಗೆ ನಡೆಯುತ್ತಿರುವುದರಿಂದ ಇದರ ಪ್ರಯೋಜನವನ್ನು ಇನ್ನೂ ಹೆಚ್ಚಿನ ಬಡ ವಿದ್ಯಾರ್ಥಿಗಳು ಪಡೆದುಕೊಳ್ಳುವಂತಾಗಬೇಕು ಎಂದರು.

ಶಿಕ್ಷಕರಾದ ಮೇಟಿಲ್ದಾ ಮಿರಾಂದ, ಅನಿತಾ ನಾಯ್ಕ್,  ಸುಜಾತಾ ನಾಯ್ಕ್ ಶಿಬಿರದ ಮಾರ್ಗದರ್ಶಕರಾಗಿದ್ದರು. ಪಾಲಕರು ಮಕ್ಕಳ ಕಲಿಕೆಯ ಆಸಕ್ತಿಯನ್ನು ಕಂಡು ಸಂತಸಪಟ್ಟರು.

ಇತ್ತೀಚಿನ ಸುದ್ದಿ

ಜಾಹೀರಾತು