1:57 PM Saturday4 - May 2024
ಬ್ರೇಕಿಂಗ್ ನ್ಯೂಸ್
ಸುಬ್ರಹ್ಮಣ್ಯ: ನವ ವಿವಾಹಿತ ಸಿಡಿಲು ಬಡಿದು ದಾರುಣ ಸಾವು; 15 ದಿನಗಳ ಹಿಂದೆಯಷ್ಟೇ… ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ನೀರಿನ ಒಳಹರಿವು ಸ್ಥಗಿತ: ಮೇ 5ರಿಂದ ಪಾಲಿಕೆ… ಮುಳ್ಳೇರಿಯ: ಇತ್ತ ಮಗಳ ಮದುವೆಯ ಮದರಂಗಿ ಶಾಸ್ತ್ರ ನಡೆಯುತ್ತಿದ್ದಂತೆ ಅತ್ತ ಅಪ್ಪ ಆತ್ಮಹತ್ಯೆ ಕೊರೊನಾ ಲಸಿಕೆ ಕೋವಿಶೀಲ್ಡ್‌ ಅಡ್ಡ ಪರಿಣಾಮಗಳು: ಅಧ್ಯಯನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ… ಸೆಕ್ಸ್ ವೀಡಿಯೊ ಪ್ರಕರಣ: ಜೆಡಿಎಸ್ ನಾಯಕ ರೇವಣ್ಣಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನು… ಪ್ರಜ್ವಲ್ ರೇವಣ್ಣ ಪರ ಮತಯಾಚಿಸಿದ ಪ್ರಧಾನಿ ಮೋದಿ ಕ್ಷಮೆ ಕೇಳಲಿ: ಕಾಂಗ್ರೆಸ್ ನಾಯಕ… ಮನೆಯ ಮೇಲೆ ಸಿಸಿಬಿ ದಾಳಿ: ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ; 16… ಈಶ್ವರಪ್ಪ ಪುತ್ರನಿಗೂ ಅಶ್ಲೀಲ ವೀಡಿಯೊ, ಫೋಟೋ, ವರದಿ ಭೀತಿ: ನ್ಯಾಯಾಲಯದಿಂದ ತಡೆಯಾಜ್ಞೆ ತಂದ… ತಾತನಿಂದಲೇ ಮೊಮ್ಮಗನ ಮೇಲೆ ಕ್ರಮ: ಜೆಡಿಎಸ್ ನಿಂದ ಹಾಸನ ಸಂಸದ ಪ್ರಜ್ವಲ್ ರೇವಣ್ಣ… ಸಂಸದ, ಕೇಂದ್ರ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ನಿಧನ: ಪ್ರಧಾನಿ ಮೋದಿ ಸಹಿತ…

ಇತ್ತೀಚಿನ ಸುದ್ದಿ

ಒಮ್ಮೆ ನೀ ಹೊಕ್ಕು ನೋಡು ಪುಸ್ತಕದೊಳು… ಹೆಚ್ಚಿಸುವುದು ನಿನ್ನ  ಜ್ಞಾನವನು ಮಸ್ತಕದೊಳು

23/04/2022, 09:40

ಒಮ್ಮೆ ನೀ ಹೊಕ್ಕು ನೋಡು ಪುಸ್ತಕದೊಳು…

ಹೆಚ್ಚಿಸುವುದು ನಿನ್ನ  ಜ್ಞಾನವನು ಮಸ್ತಕದೊಳು..

ತಲೆ ಎತ್ತಿ ನಿಲ್ಲುವಂತೆ ಮಾಲ್ಪುದು ನಾಲ್ಕು ಜನರೊಳು…

ಕರಮುಗಿದು ನಮಸ್ಕರಿಸುವರು ನಿನಗೆ ಈ ಜಗದೊಳು….

“ದೇಶ ಸುತ್ತಿ ನೋಡು ಕೋಶ ಓದಿ ನೋಡು ” ಎಂಬ ಗಾದೆ ಮಾತಿನಂತೆ ಪುಸ್ತಕಗಳು ನಮ್ಮ ಜ್ಞಾನವನ್ನು ಹೆಚ್ಚಿಸಬಲ್ಲ ಆಗರಗಳು.  ಪುಸ್ತಕಗಳು ನಮ್ಮ ಜೀವನದಲ್ಲಿ ಸಂಗಾತಿಯಾಗಿ, ಗುರುವಾಗಿ, ಗೆಳೆಯರಾಗಿ ಹಲವಾರು ಪಾತ್ರಗಳನ್ನು ನಿರ್ವಹಿಸುತ್ತದೆ. ಹಲವು ವರ್ಷಗಳಿಂದ ಮಾನವನ ವಿಕಾಸ ಪ್ರಕ್ರಿಯೆಯಲ್ಲಿ ಮತ್ತು ಜ್ಞಾನ ಪರಂಪರೆಯನ್ನು ಮುಂದುವರಿಸಿಕೊಂಡು ಬರುವುದರಲ್ಲಿ ಪುಸ್ತಕಗಳ ಪಾತ್ರ ಹಿರಿದಾಗಿದೆ.

ಈ ಅಂಶವನ್ನು ಮನಗಂಡ ಯುನೆಸ್ಕೋ 1995ರಲ್ಲಿ” ಏಪ್ರಿಲ್ 23″ ನ್ನು ವಿಶ್ವ ಪುಸ್ತಕ ದಿನವನ್ನಾಗಿ ಘೋಷಿಸಿತು. ಓದುವ ಅಭಿರುಚಿಯನ್ನು ಬೆಳೆಸುವುದು, ಪುಸ್ತಕೋದ್ಯಮವನ್ನು ಬೆಂಬಲಿಸುವುದು ಮತ್ತು ಕಾಪಿರೈಟ್ ಕಾಯ್ದೆ (ಗ್ರಂಥಸಾಮ್ಯ)ಯನ್ನು ಬಲಪಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

ಶೇಷ್ಠ ನಾಟಕಕಾರ, ದಾರ್ಶನಿಕ ವಿಲಿಯಂ ಷೇಕ್ಸ್ಪಿಯರ್  ಹುಟ್ಟಿದ ಮತ್ತು ಮರಣದ ದಿನವೂ ಏಪ್ರಿಲ್ 23 ಆಗಿದೆ. ಆದುದರಿಂದ ವಿಶ್ವ ಪುಸ್ತಕ ದಿನಾಚರಣೆಗೆ ಹೆಚ್ಚಿನ ಮಹತ್ವವನ್ನೂ ನೀಡಲಾಗಿದೆ.

ಪುಸ್ತಕಗಳು ನಮ್ಮಿಂದ ಏನನ್ನೂ ನಿರೀಕ್ಷಿಸುವುದಿಲ್ಲ ಆದರೆ ಪುಸ್ತಕದಿಂದ ನಾವು ಬೆಟ್ಟದಷ್ಟು ಲಾಭವನ್ನು ಪಡೆಯಬಹುದು.

ಪುಸ್ತಕಗಳು ನಮಗೆ ಬದುಕುವುದನ್ನು ಕಲಿಸುವುದರ ಜೊತೆಗೆ ಅಲೋಚನಾ ಶಕ್ತಿಯನ್ನು, ಜೀವನ ಮೌಲ್ಯಗಳನ್ನು, ಆದರ್ಶಗಳನ್ನು , ಗೌರವವನ್ನು ದೊರಕಿಸುತ್ತದೆ . ಸೋಲಿನ ಹತಾಶೆ ಯಲ್ಲಿರುವ ಮನುಷ್ಯನಿಗೆ  ಸ್ಪೂರ್ತಿಯನ್ನು , ಆತ್ಮ ಧೈರ್ಯವನ್ನು  ತುಂಬಿಸುತ್ತದೆ. ಪುಸ್ತಕಗಳು ನಮ್ಮ ಬದುಕನ್ನು ಬಂಗಾರವನ್ನಾಗಿಸುತ್ತದೆ.

ತಾಳೆಗರಿಯಲ್ಲಿ ಬರೆಯಲು ಪ್ರಾರಂಭಿಸಿದ ಕಾಲದಿಂದ ಹಿಡಿದು ಈಗಿನ  ಇ ಪುಸ್ತಕಗಳ ವರೆಗೆ ಪುಸ್ತಕದ ರೂಪ ಬದಲಾಗಿರಬಹುದು ಆದರೆ ಮಹತ್ವ ಮತ್ತು ಸಾರ ಬದಲಾಗಿಲ್ಲ.. 


ಇಂದಿನ ಆಧುನಿಕ ತಂತ್ರಜ್ಞಾನ ಹೆಚ್ಚಾದಂತೆಲ್ಲ ಯುವಜನತೆ ಮೊಬೈಲ್ , ಕಂಪ್ಯೂಟರ್ ನಂತಹ ಎಲೆಕ್ಟ್ರಾನಿಕ್ ಮಾಧ್ಯಮಕ್ಕೆ ಒಗ್ಗಿಕೊಂಡ ಪರಿಣಾಮವಾಗಿ ಪುಸ್ತಕ ಓದುವ ಹವ್ಯಾಸ ಬಹಳಷ್ಟು ಮಂದಿಯಲ್ಲಿ ಕಡಿಮೆಯಾಗಿದೆ.

ಮನೆಯಲ್ಲಿ ಮತ್ತು ಶಾಲೆಗಳಲ್ಲಿ ಮಕ್ಕಳು ಎಳೆಯ ವಯಸ್ಸಿನಲ್ಲಿಯೇ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸುವ ಅಭ್ಯಾಸ ಮಾಡಬೇಕು.. “ಒಳ್ಳೆಯ ಪುಸ್ತಕಗಳು ನಮ್ಮ ಜ್ಞಾನವನ್ನು ತಣಿಸುವ ಚಿಲುಮೆಗಳು”.

“ಪುಸ್ತಕಗಳನ್ನು ತಲೆತಗ್ಗಿಸಿ ಓದಿದರೆ ಅವುಗಳು ಜೀವನದಲ್ಲಿ ನಮ್ಮನ್ನು ತಲೆಯೆತ್ತಿ ನಡೆಯುವಂತೆ ಮಾಡುತ್ತದೆ.” . ಎಂಬ  ಅರ್ಥಪೂರ್ಣವಾದ  ಮಾತನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳುತ್ತಾ ಪ್ರತಿಯೊಬ್ಬರು ಪುಸ್ತಕವನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳೋಣ… 

ಪುಸ್ತಕಗಳು ಎಲ್ಲರ ಮನಸ್ಸನ್ನು ಬೆಳಗಲಿ.. ಪುಸ್ತಕಗಳ ಮೂಲಕ ಜ್ಞಾನವೆಂಬ ಬೆಳಕು ಜಗದೆಲ್ಲೆಡೆ ಪಸರಿಸಲಿ .

“ಎಲ್ಲರಿಗೂ ವಿಶ್ವ ಪುಸ್ತಕ ದಿನದ ಶುಭಾಶಯಗಳು” 

✍️

ಇತ್ತೀಚಿನ ಸುದ್ದಿ

ಜಾಹೀರಾತು