ಇತ್ತೀಚಿನ ಸುದ್ದಿ
ಕೊಟ್ಟಿಗೆಹಾರ: ಧಾರಾಕಾರ ಮಳೆಗೆ ಹಲವೆಡೆ ಮನೆಗೆ ಹಾನಿ; ವಿದ್ಯುತ್ ಸಂಪರ್ಕ ಕಡಿತ
21/04/2022, 21:20
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕೊಟ್ಟಿಗೆಹಾರ ಸಮೀಪದ ಬಣಕಲ್ ಸುತ್ತಮುತ್ತ ಗುರುವಾರ ಧಾರಾಕಾರ ಮಳೆಯಾಗಿದ್ದು ಬಣಕಲ್, ಹೆಮ್ಮಕ್ಕಿ, ಮಾಲಿಂಗನಾಡಿನಲ್ಲಿ ಮನೆಗೆ ಹಾನಿಯಾಗಿದೆ.
ಗಾಳಿ ಮಳೆಗೆ ಬಣಕಲ್ ಕುವೆಂಪುನಗರದ ಹರೀಶ್ ಎಂಬುವವರ ಮನೆಯ ಮೇಲ್ಛಾವಣಿ ಹಾರಿ ಹೋಗಿದೆ.ಹೆಮ್ಮಕ್ಕಿ ಸಮೀಪದ ನಾಗಸಂಪಿಗೆ ಮಕ್ಕಿಯಲ್ಲಿ ಹರೀಶ್ ಎಂಬುವವರ ಮನೆಯ ಮೇಲೆ ಮರ ಬಿದ್ದು ಮನೆ ಜಖಂಗೊಂಡಿದ್ದು ಮನೆಯೊಳಗಿದ್ದ ಸುಪಿತ್ರಾ ಎಂಬುವವರಿಗೆ ಗಾಯವಾಗಿದೆ.
ಮಾಲಿಂಗನಾಡು ಗ್ರಾಮದಲ್ಲಿ10 ಕ್ಕೂ ಹೆಚ್ಚುಮರಗಳು ಧರೆಗುರುಳಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.