4:09 PM Tuesday14 - July 2026
ಬ್ರೇಕಿಂಗ್ ನ್ಯೂಸ್
ಬೆಂಗಳೂರು: ಮಹಿಳೆ ಜತೆ ಅಸಭ್ಯ ವರ್ತನೆ; ಡೆಲಿವರಿ ಬಾಯ್ ಬಂಧನ *ಕೊಡ್ಲಿಪೇಟೆಯ ನದಿಯಲ್ಲಿ ನಾಪತ್ತೆಯಾಗಿದ್ದ ನಾಗರಾಜು, ಶಿವರಾಜು ಶವ ಪತ್ತೆ* ಹಿರಿಯ ಗಾಯಕಿ ಎಸ್​​. ಜಾನಕಿ ನಿಧನ: ಅಜ್ಜಿ ನೆನೆದು ಮೊಮ್ಮಗಳು ಅಪ್ಸರಾ ಭಾವುಕ ಆಸ್ಟ್ರೇಲಿಯಾ | ಪ್ರಧಾನಿ ಮೋದಿ ತಂಗಿದ್ದ ಆಸೀಸ್‌ ಹೋಟೆಲ್‌ಗೆ ನುಗ್ಗಿ ಭಾರತ ವಿರೋಧಿ… ಬೆಂಗಳೂರು: ಶಾಸಕಿ ನಯನ ಮೋಟಮ್ಮ ಪರ ಕಾರ್ಯಕರ್ತರ ಬ್ಯಾಟಿಂಗ್; ಕೆಪಿಸಿಸಿ ಅಧ್ಯಕ್ಷರಿಗೆ ವಿವರಣೆ ಮಂಡ್ಯ: ಕಟ್ಟಡದ ಮೇಲಿಂದ ಬಿದ್ದು ಫೈಂಟ್ ಮಾಡುತ್ತಿದ್ದ ಕಾರ್ಮಿಕ ದಾರುಣ ಸಾವು ಕೊಡಗು ಜೆಡಿಎಸ್‌ಗೆ ಶೀಘ್ರದಲ್ಲೇ ಜಿಲ್ಲಾಧ್ಯಕ್ಷ?: ಕುಮಾರಸ್ವಾಮಿ ಭೇಟಿ ಮಾಡಿದ ತಾಲೂಕು ಅಧ್ಯಕ್ಷರ ನಿಯೋಗ ಉದ್ಯಮಿ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣ: ತನಿಖೆಯಲ್ಲಿ ಮಹತ್ವದ ಅಂಶ ಬಹಿರಂಗ; ಶೀಘ್ರದಲ್ಲೇ… ಶೃಂಗೇರಿ | ಗೋರಿಗುಡ್ಡ ಮಸೀದಿ ರಕ್ಷಣೆಗೆ ಕಟ್ಟಿದ್ದ ಕಾಂಕ್ರೀಟ್ ವಾಲ್ ನಲ್ಲಿ ಬಿರುಕು:… ಮಡಿಕೇರಿಯಲ್ಲಿ ಭಾರಿ ಮಳೆಗೆ ಭೂಕುಸಿತ: ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಏರು ರಸ್ತೆ ಹಾನಿ;…

ಇತ್ತೀಚಿನ ಸುದ್ದಿ

ಎಂ.ಕಾಂ ಪರೀಕ್ಷೆ: ಕುಡ್ಲದ ಪೊಣ್ಣು, ನಟಿ- ನಿರೂಪಕಿ ಶೀತಲ್ ಮಂಗಳೂರು ಪ್ರಥಮ Rank

18/04/2022, 21:19

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ನಗರದ ಬೆಸೆಂಟ್ ಸಂಧ್ಯಾ ಕಾಲೇಜಿನ ವಿದ್ಯಾರ್ಥಿನಿ,ನಟಿ, ನಿರೂಪಕಿ ಶೀತಲ್ ಅವರು ಎಂ.ಕಾಂ ಪರೀಕ್ಷೆಯಲ್ಲಿ ಪ್ರಥಮ rank ಪಡೆದಿದ್ದಾರೆ.


ಮಂಗಳೂರಿನ ಕೆನರಾ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಥಮಿಕ ಶಿಕ್ಷಣದಿಂದ ಪದವಿ ವರೆಗೆ ವಿದ್ಯಾಭ್ಯಾಸವನ್ನು ಪೂರೈಸಿದ ಅವರು ಬೆಸೆಂಟ್ ಸಂಧ್ಯಾ ಕಾಲೇಜಿನಲ್ಲಿ ಎಂ.ಕಾಂ ಶಿಕ್ಷಣ ಪಡೆದರು.


ಅತೀ ಸಣ್ಣ ವಯಸ್ಸಿನಲ್ಲಿ ತುಳು ರಂಗಭೂಮಿ ಪ್ರವೇಶಿಸಿದರು. ನಾಯಕಿ ನಟಿಯಾಗಿ ನಟನೆಯಲ್ಲೂ ಎತ್ತಿದ ಕೈ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಖಾಸಗಿ ಟಿವಿ ವಾಹಿನಿಯಲ್ಲಿ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿದರು.

ಈಕೆ ಕೆ.ಪ್ರಕಾಶ್ ಹಾಗೂ ಗೀತಾ ದಂಪತಿಯ ಏಕೈಕ ಪುತ್ರಿ. ಪ್ರಸ್ತುತ ಅವರು ಎ. ಜೆ. ಸಂಸ್ಥೆಯಲ್ಲಿ  ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತನ್ನ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದೆಂದು ನಟನೆಯಿಂದ ದೂರ ಸರಿದಿದ್ದಾರೆ.


ಬೇರೆ ಭಾಷೆಗಳಲ್ಲಿ ನಟನೆ ಮಾಡುವ ಆಸಕ್ತಿ ಸದ್ಯಕ್ಕಿಲ್ಲ. ತುಳು ಭಾಷೆಯ ಮೇಲೆ ಅಭಿಮಾನ ಮತ್ತು ಪ್ರೀತಿ ಇದೆ. ಹಾಗಾಗಿ ಅವಕಾಶ ಸಿಕ್ಕಾಗ ಬಳಸಿಕೊಂಡೆ. ನಟಿಯಾಗಬೇಕೆಂಬ ಕನಸು ಯಾವತ್ತು ಕಂಡಿಲ್ಲ. ಕಾಲೇಜು ಜೀವನದಲ್ಲಿ ನಟನೆಯಿಂದ ಬರುತ್ತಿದ್ದ ಹಣ ನನ್ನ ವಿದ್ಯಾಭ್ಯಾಸಕ್ಕೆ ಸಹಾಯವಾಗುತ್ತಿತ್ತು. ಮೊದಲು ಓದಿಗೆ ಪ್ರಾಮುಖ್ಯತೆ, ಆಮೇಲೆ ಇತರ ವಿಷಯಕ್ಕೆ ಎಂದು ರಿಪೋರ್ಟರ್ ಕರ್ನಾಟಕ ಜತೆ ಮಾತನಾಡಿದ ಅವರು ನುಡಿದರು.

ನನ್ನ ತಂದೆ-ತಾಯಿ ಯಾವತ್ತು ಒತ್ತಡ ಮಾಡಿಲ್ಲ ಇಷ್ಟೇ ಅಂಕ ಗಳಿಸಬೇಕು ಅಥವಾ ಇದೇ ಫೀಲ್ಡಿಗೆ ಹೋಗಬೇಕು ಎಂದು ಒತ್ತಡ ಹೇರಿಲ್ಲ.


ಯಾವುದೇ ರಂಗಕ್ಕೆ ಹೋಗು ನಮ್ಮ ಸಹಾಯ ಇದೆ ಎಂದು ಇವತ್ತಿಗೂ ಬೆನ್ನು ತಟ್ಟುತ್ತಿರುವ ತಂದೆ-ತಾಯಿಯೇ ನನಗೆ ಸ್ಪೂರ್ತಿ ಎಂದು ಶೀತಲ್ ಹೇಳುತ್ತಾರೆ. ನನಗೆ ಸಹಕಾರ ನೀಡಿದ ಎಲ್ಲಾ ಶಿಕ್ಷಕರಿಗೂ ಹಾಗೂ ನನಗೆ ಹಾರೈಸಿದ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ.



ದಬಕ್ ದಬ ಐಸಾ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ಮೆಹಂದಿ ಆರ್ಟಿಸ್ಟ್, ಡ್ಯಾನ್ಸರ್ ಕೂಡ ಹೌದು.

ಇತ್ತೀಚಿನ ಸುದ್ದಿ

ಜಾಹೀರಾತು