ಇತ್ತೀಚಿನ ಸುದ್ದಿ
ಮಂಗಳೂರು ವಿವಿ ಕಾಲೇಜು: ಫುಟ್ ಪಾತ್ ನಲ್ಲಿ ಬಸ್ ಸ್ಟಾಂಡೋ? ಬಸ್ ಸ್ಟಾಂಡ್ ಒಳಗೆ ಫುಟ್ ಪಾತೋ?
16/04/2022, 22:48
ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com
ಫುಟ್ ಪಾತ್ ನಲ್ಲಿ ಬಸ್ ತಂಗುದಾಣವೋ ಅಥವಾ ಬಸ್ ತಂಗುದಾಣದೊಳಗೆ ಫುಟ್ ಪಾತೋ ಎನ್ನುವ ಪ್ರಶ್ನೆ ಈ ತಂಗುದಾಣವನ್ನು ಕಂಡವರಿಗೆ ಮೂಡುವುದರಲ್ಲಿ ಯಾವುದೇ ಸಂಶಯವಿಲ್ಲ.
ಯಾಕೆಂದರೆ ಈ ಬಸ್ ತಂಗುದಾಣ ಫುಟ್ ಪಾತ್ ನಲ್ಲೇ ನಿರ್ಮಾಣವಾಗುತ್ತಿದೆ.!
ಮಂಗಳೂರಿನ ಎಲ್ಲೆಡೆ ಭಾರಿ ವೇಗದಲ್ಲಿ ರಸ್ತೆ ಮತ್ತು ಫುಟ್ ಪಾತ್ ಕಾಮಗಾರಿ ನಡೆಯುತ್ತಿದೆ. ಅದರ ಜತೆಗೆ ತರಾತುರಿಯಲ್ಲಿ ಬಸ್ ತಂಗುದಾಣ ನಿರ್ಮಾಣ ಕಾರ್ಯ ನಡೆಯುತ್ತಿದೆ.
ಇದೆಲ್ಲ ಆಗುತ್ತಿರುವುದು ನಗರದ ಹೃದಯಭಾಗ ಎಂದು ಕರೆಸಿಕೊಳ್ಳುವ ಹಂಪನಕಟ್ಟೆಯ ವಿವಿ ಕಾಲೇಜಿನ ಮುಂಭಾಗದ ಫುಟ್ ಪಾತ್ ನಲ್ಲಿ. ನಗರದ ಆಯಕಟ್ಟಿನ ಸ್ಥಳಗಳಲ್ಲಿ ಬಸ್ ತಂಗುದಾಣ ಬೇಕು ನಿಜ. ಹಾಗೆಂತ ಫುಟ್ ಪಾತ್ ನಲ್ಲಿಯೇ ಬಸ್ ತಂಗುದಾಣ ನಿರ್ಮಿಸಿದರೆ ಪಾದಚಾರಿಗಳು ಓಡಾಡುವುದು ಹೇಗೆ ಎಂಬ ಸಾಮಾನ್ಯ ಪ್ರಶ್ನೆಯೂ ಪಾಲಿಕೆಯ ಆಳುವ ಮಂದಿಯಲ್ಲಿ ಹುಟ್ಟಿಕೊಳ್ಳುವುದಿಲ್ಲ ಎನ್ನುವುದು ಬಹಳ ವಿಚಿತ್ರವಾಗಿದೆ. ನಗರದಲ್ಲಿ ಸಾಕಷ್ಟು ತಂಗುದಾಣಗಳು ವೇಸ್ಟ್ ಆಗಿವೆ. ಯಾಕೆಂದರೆ ಸಿಟಿಬಸ್ ಸ್ಟಾಪ್ ಇಲ್ಲದ್ದಲ್ಲಿ ತಂಗುದಾಣ ನಿರ್ಮಿಸಲಾಗಿದೆ. ಆದರೆ ಕೆಲವು ಕಡೆ ಬಸ್ ನಿಲ್ಲುವಲ್ಲಿ ತಂಗುದಾಣ ಇಲ್ಲದ ಪರಿಸ್ಥಿತಿ ಇದೆ. ಬಂಟ್ಸ್ ಹಾಸ್ಟೆಲ್ ಕರಂಗಲ್ಪಾಡಿ ಸಿಟಿ ಬಸ್ ಸ್ಟಾಪ್ ಎರಡು ಬದಿಯಲ್ಲಿಯೂ ಬಸ್ ಸ್ಟಾಂಡ್ ಇಲ್ಲ. ಬೆಸೆಂಟ್ ಸ್ಟಾಪ್ ನಲ್ಲಿ ಸುರತ್ಕಲ್ ಕಡೆ ಹೋಗುವ ಬಸ್ ಸ್ಟಾಂಡ್ ಇದೆ. ಆದರೆ ಅದೇ ಬೆಸೆಂಟ್ ಸ್ಟಾಪ್ ನಲ್ಲಿ ಮಂಗಳೂರು ಕಡೆಗೆ ಬಸ್ ಸ್ಟಾಂಡ್ ಇಲ್ಲ. ಹಾಗೆ ಕೆಪಿಟಿ ಪ್ರದೇಶದಲ್ಲಿ ಉಪಯೋಗಶೂನ್ಯ ಬಸ್ ಸ್ಟಾಂಡ್ ಗಳನ್ನು ಕಾಣಬಹುದು. 15 ನಂಬರ್ ಸಿಟಿ ಬಸ್ ಹೋಗುವ ದಾರಿಯಲ್ಲಿ ಸ್ಮಾರ್ಟ್ ಸಿಟಿಯಿಂದ ಬಸ್ ನಿಲ್ಲದ ಜಾಗದಲ್ಲಿ ಬಸ್ ಸ್ಟಾಂಡ್ ನಿರ್ಮಿಸಲಾಗಿದೆ. ಎಲ್ಲವೂ ವಿಚಿತ್ರವಾಗಿದೆ.
ನಾಗೇಶ್ ಪ್ರಯಾಣಿಕ ಮಂಗಳೂರು
ಹೊಸತಾಗಿ ನಿರ್ಮಿಸುತ್ತಿರುವ ಬಸ್ ಸ್ಟಾಂಡ್ ಒಳಗಡೆಯೇ ಮಳೆ ನೀರು ಹೋಗುವ ಡ್ರೈನ್ ಇದೆ. ಇದನ್ನು ಮೇಲ್ಗಡೆ ಮಾತ್ರ ಮುಚ್ಚಲಾಗುತ್ತದೆ. ಮುಂದಿನ ದಿನಗಳಲ್ಲಿ ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುವ ಸಾಧ್ಯತೆಗಳೇ ಹೆಚ್ಚು ಎಂದು ಸಾರ್ವಜನಿಕರು ಹೇಳುತ್ತಾರೆ
.