7:25 PM Thursday16 - January 2025
ಬ್ರೇಕಿಂಗ್ ನ್ಯೂಸ್
ಕುರ್ಚಿಗಾಗಿ ಕಾದಾಟದಲ್ಲೇ ಎಲ್ಲರೂ ಮಗ್ನ, ಜನರ ಪಾಲಿಗೆ ಸರ್ಕಾರದ ನೆರವು ಮರೀಚಿಕೆ: ಪ್ರತಿಪಕ್ಷ… ಕೆಎಎಸ್‌ ಪೂರ್ವಭಾವಿ ಮರುಪರೀಕ್ಷೆಯ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್… ಬಾಲಿವುಡ್ ನಟ ಸೈಫ್ ಅಲಿಖಾನ್ ಗೆ 6 ಬಾರಿ ಚಾಕು ಇರಿತ: ಮುಂಜಾನೆ… ಗರೋಡಿ ಜಾತ್ರೆಗೂ ಊರವರಿಗೆ ನೀರಿಲ್ಲ!: 5 ದಿನಗಳಿಂದ ನೋ ವಾಟರ್!!; ಮೇಯರ್ ಅವರೇ… ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ಸಚಿವ ಜಮೀರ್‌ ಭಾವಚಿತ್ರಕ್ಕೆ ಸಗಣಿ ಬಳಿದು ಬಿಜೆಪಿ… ಕೆಚ್ಚಲು ಕೊಯ್ದ ಪ್ರಕರಣ: ದನದ ಮಾಲೀಕನ ತಾಯಿಗೆ 3 ಹಸು ಕೊಡಿಸಿದ ಸಚಿವ… 5 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರ: ಆರೋಪಿಯ ತಕ್ಷಣ ಬಂಧಿಸಲು ಆಗ್ರಹಿಸಿ ಎಐಎಂಎಸ್ಎಸ್… ಕಾಡಾನೆಯ ಚಿತ್ರೀಕರಣ ಮಾಡಲು ಹೋದ ಯೂಟ್ಯೂಬರ್ ಮೇಲೆ ಸಲಗ ದಾಳಿ: ಕೂದಲೆಳೆ ಅಂತರದಲ್ಲಿ… ವಿಕಲಚೇತನ ಉದ್ಯೋಗಿಗಳ ಜತೆ ಸಂಕ್ರಾಂತಿ ಹಬ್ಬ ಆಚರಿಸಿಕೊಂಡ ಕೇಂದ್ರ ಸಚಿವ ಕುಮಾರಸ್ವಾಮಿ ಶಬರಿಮಲೆ: ಆಕಾಶದತ್ತ ಮುಖ ಮಾಡಿ ಕಾಯುತ್ತಿದ್ದ ಭಕ್ತರಿಗೆ ಮಕರ ಜ್ಯೋತಿ ದರ್ಶನ: ಪುನೀತರಾದ…

ಇತ್ತೀಚಿನ ಸುದ್ದಿ

ನಿಷ್ಕ್ರಿಯ- ನಿರ್ಲಿಪ್ತ- ಭ್ರಷ್ಟ ಶಾಸಕರಿಗಿಲ್ಲ ಬಿಜೆಪಿ ಟಿಕೆಟ್: ದ.ಕ. ಜಿಲ್ಲೆಯ 3 ಮಂದಿ ಹಾಲಿಗಳಿಗೆ ಕೊಕ್? 

15/04/2022, 13:14

ಬೆಂಗಳೂರು(reporterkarnataka.com): ಒಂದು ಕಡೆ ಈಶ್ವರಪ್ಪ ಪ್ರಕರಣ ಆಡಳಿತರೂಢ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದರೆ, ಇನ್ನೊಂದು ಕಡೆಯಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗೆ ಕಮಲ ಪಾಳಯದಲ್ಲಿ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಟಿಕೆಟ್ ಹಂಚಿಕೆಯ ಪಾರಮರ್ಶೆ ಪ್ರಕ್ರಿಯೆ ಆರಂಭಗೊಂಡಿದೆ. ಕಳೆದ ಬಾರಿ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳು ಸೇರಿದಂತೆ ಎರಡು ಡಜನಿಗೂ ಅಧಿಕ ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸುವ ಸಾಧ್ಯತೆಗಳಿವೆ. ಇದರಲ್ಲಿ ದ.ಕ. ಜಿಲ್ಲೆಯ 3 ಮಂದಿ ಹಾಲಿ ಶಾಸಕರು ಕೂಡ ಸೇರಿದ್ದಾರೆ ಎಂದು ತಿಳಿದು ಬಂದಿದೆ.

ಚುನಾವಣಾ ಸಿದ್ಧತೆಯ ಅಂಗವಾಗಿ ಬಿಜೆಪಿಯ ವಿಭಾಗೀಯ ಮಟ್ಟದ ಸಭೆ ಈಗಾಗಲೇ ನಡೆದಿದೆ. ಮಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆದರೆ, ಮೈಸೂರಿನಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಸಭೆ ಪೂರ್ಣಗೊಂಡಿದೆ. ಇನ್ನು ಟಿಕೆಟ್ ಹಂಚಿಕೆ ಕುರಿತಂತೆ

ಕ್ಷೇತ್ರವಾರು ಸಮೀಕ್ಷೆ ನಡೆಯಲಿದೆ. ಪ್ರತಿ ಕ್ಷೇತ್ರದ ಸಮೀಕ್ಷೆಗೆ 9 ಮಂದಿಯ ತಂಡ ಇರುತ್ತದೆ. ಇವರು ಬಿಜೆಪಿ ಹಾಲಿ ಶಾಸಕರ ಹಾಗೂ ಬಿಜೆಪಿ ಸೋತ ಕ್ಷೇತ್ರದಲ್ಲಿ ಹೊಸ ಅಭ್ಯರ್ಥಿಗಳ ಒರೆಗೆ ಹಚ್ಚಲಿದ್ದಾರೆ. ಈ ಬಾರಿ ಯಾರದೇ ಪ್ರಭಾವ ಟಿಕೆಟ್ ಹಂಚಿಕೆಯಲ್ಲಿ ನಡೆಯೋದಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷರಿಂದ

ಆರಂಭಗೊಂಡು ಮುಖ್ಯಮಂತ್ರಿವರೆಗೆ ಯಾರದೇ ಪ್ರಭಾವ ಕೆಲಸ ಮಾಡೊಲ್ಲ. ಸಮೀಕ್ಷಾ ತಂಡ ನೀಡುವ ವರದಿಯೇ ಅಂತಿಮವಾಗಿರುತ್ತದೆ. ಈಶ್ವರಪ್ಪ ಪ್ರಕರಣದಿಂದ ಬಿಜೆಪಿ ಸಾಕಷ್ಟು ಕಲಿತಿದೆ. ಯಾಕೆಂದರೆ ಈಶ್ವರಪ್ಪ ಹೊರಗಿನಿಂದ ಬಂದವರಲ್ಲ, ಮೂಲತಃ ಬಿಜೆಪಿಯವರೇ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಹೆಸರಿನಲ್ಲಿ ಗೆದ್ದು, ಭ್ರಷ್ಟಾಚಾರದಲ್ಲಿ ತೊಡಗಿಕೊಂಡ ಶಾಸಕರಿಗೆ ಕಡ್ಡಾಯವಾಗಿ ಟಿಕೆಟ್ ನಿರಾಕರಿಸಲು ಪಕ್ಷದ ಹೈಕಮಾಂಡ್ ಸೂಚಿಸಿದೆ ಎಂದು ತಿಳಿದು ಬಂದಿದೆ.

ಕಾರ್ಯನಿರ್ವಹಣೆ, ಸುಧಾರಣೆ, ಬದಲಾವಣೆ ಈ ಬಾರಿ ಬಿಜೆಪಿಯ ಧ್ಯೇಯವಾಕ್ಯವಾಗಿದೆ. ಹಾಲಿ ಶಾಸಕರ ಕಾರ್ಯನಿರ್ವಹಣೆ, ಸುಧಾರಣೆ ಹಾಗೂ ಬದಲಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಮತ್ತೆ ಟಿಕೆಟ್ ಹಂಚಲಾಗುವುದು. ಹಾಗೆ ನಿಷ್ಕ್ರಿಯ, ನಿರ್ಲಿಪ್ತ ಹಾಗೂ ಭ್ರಷ್ಟ ಶಾಸಕರಿಗೆ ಈ ಬಾರಿ ಟಿಕೆಟ್ ನಿರಾಕರಿಸಲಾಗುವುದು.  ಅಷ್ಟೇ ಅಲ್ಲದೆ ಪಕ್ಷದ ಹೆಸರು, ಚಿಹ್ನೆಯ ಬಲವಿಲ್ಲದೆ ಸ್ವಂತ ಶಕ್ತಿಯಿಂದ ಗೆಲ್ಲಬಲ್ಲ ಅಭ್ಯರ್ಥಿಗೆ ಟಿಕೆಟ್ ನೀಡಲಾಗುವುದು ಎಂದು ಪಕ್ಷದ ಬಲ್ಲಮೂಲಗಳಿಂದ ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ

ಜಾಹೀರಾತು