ಇತ್ತೀಚಿನ ಸುದ್ದಿ
ಬಾಗೆಪಲ್ಲಿ ಮಾಜಿ ಶಾಸಕ, ಸಿಪಿಎಂ ಹಿರಿಯ ನಾಯಕ ಶ್ರೀರಾಮ ರೆಡ್ಡಿ ಹೃದಯಾಘಾತದಿಂದ ಸಾವು
15/04/2022, 11:40
ಬಾಗೆಪಲ್ಲಿ(reporterkarnataka.com): ಬಾಗೆಪಲ್ಲಿ ಮಾಜಿ ಶಾಸಕ, ಸಿಪಿಎಂ ಹಿರಿಯ ನಾಯಕ ಜಿ.ವಿ.ಶ್ರೀರಾಮ ರೆಡ್ಡಿ ಹೃದಯಾಘಾತದಿಂದ ಇಂದು ನಿಧನರಾದರು.
ಬಡವರು, ಕಾರ್ಮಿಕರು ಮತ್ತು ರೈತರ ಪರ ಹೋರಾಟ ನಡೆಸುತ್ತಿದ್ದ ಶ್ರೀರಾಮ ರೆಡ್ಡಿ ಅವರು ಕೋಮುವಾದದ ವಿರುದ್ಧದ ಗಟ್ಟಿ ದನಿಯಾಗಿದ್ದರು.
ಇತ್ತೀಚೆಗೆ ಜಾತ್ಯತೀತ ಶಕ್ತಿಗಳ ಧ್ರುವೀಕರಣಕ್ಕೆ ಪ್ರಯತ್ನ ನಡೆಸಿದ್ದರು. ಶ್ರೀರಾಮ ರೆಡ್ಡಿ ಅವರು ರಾಜ್ಯ ಕಂಡ ಒಬ್ಬ ಧೀಮಂತ ಹೋರಾಟಗಾರ.