3:13 PM Thursday3 - July 2025
ಬ್ರೇಕಿಂಗ್ ನ್ಯೂಸ್
ಸೋರುತ್ತಿದೆ ಸೂರು; ಕೊಠಡಿ ತುಂಬಾ ನೀರು: ರಾಷ್ಟ್ರಕವಿ ಕುವೆಂಪು ಓದಿದೆ ಶಾಲೆಯ ಕೇಳುವವರೇ… ಮಲೆನಾಡಲ್ಲಿ ಮುಂದುವರಿದ ಮಳೆ: ಶೃಂಗೇರಿಯ ಗಾಂಧಿ ಮೈದಾನದ ರಸ್ತೆಗೆ ನುಗ್ಗಿ ನೆರೆ ನೀರು;… ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಪೈಪೋಟಿಯಿಲ್ಲ: ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ Accident | ಸುರತ್ಕಲ್ ಬಳಿ ಎರಡು ಖಾಸಗಿ ಬಸ್ಸುಗಳು ಮುಖಾಮುಖಿ ಡಿಕ್ಕಿ: 28… Chikkaballapura | ರಾಜ್ಯ ಸಚಿವ ಸಂಪುಟ ಸಭೆ: ಮುಖ್ಯಮಂತ್ರಿ ಘೋಷಿಸಿದ ಯೋಜನೆ, ತೀರ್ಮಾನಗಳೇನು? JDS Protest | ರಾಜ್ಯದಲ್ಲಿ ಆರ್ಥಿಕ ಅರಾಜಕತೆ: ಬೆಂಗಳೂರು ಪ್ರತಿಭಟನೆಯಲ್ಲಿ ಜೆಡಿಎಸ್ ಆರೋಪ Dharwad | ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ: ಕಾರ್ಮಿಕ… ಬೆಂಗಳೂರು ಕಾಲ್ತುಳಿತದ ಪ್ರಕರಣ; ಸಿಎಟಿ ಆದೇಶ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ: ಮುಖ್ಯಮಂತ್ರಿ Karnataka CM | ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು: ಮುಖ್ಯಮಂತ್ರಿ… Kodagu | ಕುಶಾಲನಗರದ ಕೂಡಿಗೆಯಲ್ಲಿ ಚಿನ್ನದಂಗಡಿ ಮಾಲೀಕನ ಮನೆಗೆ ಕನ್ನ: 14 ಲಕ್ಷ…

ಇತ್ತೀಚಿನ ಸುದ್ದಿ

ಭೀಕರ ಚಂಡಮಾರುತಕ್ಕೆ ಫಿಲಿಪೈನ್ಸ್‌ ತತ್ತರ; ಮಳೆ, ಭೂ ಕುಸಿತಕ್ಕೆ 58ಕ್ಕೂ ಹೆಚ್ಚು ಮಂದಿ ಸಾವು

14/04/2022, 00:39

ಮನಿಲಾ(reporterkarnataka.com):
ಭೀಕರ ಪ್ರಾಕೃತಿಕ ವಿಕೋಪದಿಂದ ಫಿಲಿಪೈನ್ಸ್‌ ದ್ವೀಪಸಮೂಹವು ತತ್ತರಿಸಿ ಹೋಗುತ್ತಿದೆ. ಮಳೆ- ಭೂಕುಸಿತ ಮತ್ತು ಪ್ರವಾಹದಿಂದಾಗಿ ಈ ವರೆಗೆ 58ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

ಫಿಲಿಪೈನ್ಸ್‌ಗೆ ಅಪ್ಪಳಿಸಿರುವ ಉಷ್ಣವಲಯದ ಚಂಡಮಾರುತವಾದ ಮೇಗಿಯು ಭಯಾನಕ ಅವಘಡಗಳನ್ನು ಸೃಷ್ಟಿ ಮಾಡುತ್ತಿದೆ. 85 ಕಿಮೀ ವೇಗದಲ್ಲಿ ಬೀಸುತ್ತಿರುವ ಚಂಡಮಾರುತದ ಪ್ರಭಾವದಿಂದಾಗಿ ಭಾರೀ ಮಳೆಯೊಂದಿಗೆ ತೀವ್ರಗತಿಯಲ್ಲಿ ಭೂಕುಸಿತ ಸಂಭವಿಸುತ್ತಿದ್ದು, ಅದು ಪ್ರವಾಹ ರೂಪದಲ್ಲಿ ಮುಂದುವರೆದು ಹಳ್ಳಿಹಳ್ಳಿಗಳು ಮಣ್ಣಿನಡಿ ಮುಚ್ಚಿಹೋಗುತ್ತಿವೆ. ರಕ್ಷಣಾ ಪಡೆಗಳು ಜನರ ರಕ್ಷಣಾ ಕಾರ್ಯದಲ್ಲಿ ನಿರಂತರವಾಗಿ ತೊಡಗಿವೆ. ದೊಡ್ಡದೊಡ್ಡ ಬೆಟ್ಟ ಗುಡ್ಡಗಳು ಕುಸಿಯುವ ಜೊತೆಗೆ ಚಂಡಮಾರುತದ ರಭಸಕ್ಕೆ ಮಣ್ಣು-ಕಲ್ಲುಗಳು ತೂರಿಬಂದು ಎಲ್ಲೆಡೆ ಅಪ್ಪಳಿಸುತ್ತಿವೆ.

ಬೇಬೇ ಸಿಟಿಯೊಂದರಲ್ಲೇ ಕುಸಿದ ಮಣ್ಣಿನಡಿ ಸಿಲುಕಿ 47 ಜನರು ಸಾವನ್ನಪ್ಪಿದ್ದಾರೆ ಮತ್ತು 27 ಮಂದಿ ಕಾಣೆಯಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಜೊತೆಗೆ 100 ಜನರು ಗಾಯಗೊಂಡಿದ್ದಾರೆ.

ಲೇಯ್ಟ್‌ನಲ್ಲಿರುವ ಪಿಲಾರ್ ಗ್ರಾಮದಲ್ಲಿ ಭೂಕುಸಿತವು ಹೆಚ್ಚಿನ ಹಾನಿ ಮಾಡಿದ್ದು, ಹಲವು ಮನೆಗಳು ಮನೆಗಳನ್ನು ಸಮುದ್ರಕ್ಕೆ ಕೊಚ್ಚಿ ಹೋಗಿವೆ. ಅಲ್ಲಿನ ಕರಾವಳಿ ಪ್ರದೇಶದಿಂದ ಸುಮಾರು 400 ಜನರನ್ನು ರಕ್ಷಣಾ ಪಡೆಗಳು ದೋಣಿ ಮೂಲಕ ರಕ್ಷಿಸುವ ಕಾರ್ಯದಲ್ಲಿ ತೊಡಗಿವೆ. ಇನ್ನೂ ಹಲವಾರು ನಗರಗಳಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದೆ.

ಇತ್ತೀಚಿನ ಸುದ್ದಿ

ಜಾಹೀರಾತು