7:19 PM Thursday16 - January 2025
ಬ್ರೇಕಿಂಗ್ ನ್ಯೂಸ್
ಕುರ್ಚಿಗಾಗಿ ಕಾದಾಟದಲ್ಲೇ ಎಲ್ಲರೂ ಮಗ್ನ, ಜನರ ಪಾಲಿಗೆ ಸರ್ಕಾರದ ನೆರವು ಮರೀಚಿಕೆ: ಪ್ರತಿಪಕ್ಷ… ಕೆಎಎಸ್‌ ಪೂರ್ವಭಾವಿ ಮರುಪರೀಕ್ಷೆಯ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್… ಬಾಲಿವುಡ್ ನಟ ಸೈಫ್ ಅಲಿಖಾನ್ ಗೆ 6 ಬಾರಿ ಚಾಕು ಇರಿತ: ಮುಂಜಾನೆ… ಗರೋಡಿ ಜಾತ್ರೆಗೂ ಊರವರಿಗೆ ನೀರಿಲ್ಲ!: 5 ದಿನಗಳಿಂದ ನೋ ವಾಟರ್!!; ಮೇಯರ್ ಅವರೇ… ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ಸಚಿವ ಜಮೀರ್‌ ಭಾವಚಿತ್ರಕ್ಕೆ ಸಗಣಿ ಬಳಿದು ಬಿಜೆಪಿ… ಕೆಚ್ಚಲು ಕೊಯ್ದ ಪ್ರಕರಣ: ದನದ ಮಾಲೀಕನ ತಾಯಿಗೆ 3 ಹಸು ಕೊಡಿಸಿದ ಸಚಿವ… 5 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರ: ಆರೋಪಿಯ ತಕ್ಷಣ ಬಂಧಿಸಲು ಆಗ್ರಹಿಸಿ ಎಐಎಂಎಸ್ಎಸ್… ಕಾಡಾನೆಯ ಚಿತ್ರೀಕರಣ ಮಾಡಲು ಹೋದ ಯೂಟ್ಯೂಬರ್ ಮೇಲೆ ಸಲಗ ದಾಳಿ: ಕೂದಲೆಳೆ ಅಂತರದಲ್ಲಿ… ವಿಕಲಚೇತನ ಉದ್ಯೋಗಿಗಳ ಜತೆ ಸಂಕ್ರಾಂತಿ ಹಬ್ಬ ಆಚರಿಸಿಕೊಂಡ ಕೇಂದ್ರ ಸಚಿವ ಕುಮಾರಸ್ವಾಮಿ ಶಬರಿಮಲೆ: ಆಕಾಶದತ್ತ ಮುಖ ಮಾಡಿ ಕಾಯುತ್ತಿದ್ದ ಭಕ್ತರಿಗೆ ಮಕರ ಜ್ಯೋತಿ ದರ್ಶನ: ಪುನೀತರಾದ…

ಇತ್ತೀಚಿನ ಸುದ್ದಿ

ಆಲಂಕಾರು: ಹೆಡ್‌ಲೈಟ್ ಇಲ್ಲದೇ ಕೆಎಸ್ಸಾರ್ಟಿಸಿ  ಬಸ್ ಓಡಿಸಿದ ಚಾಲಕ!: ಪ್ರಯಾಣಿಕರ ಪ್ರಾಣ ಜತೆ ಚೆಲ್ಲಾಟ!!

12/04/2022, 22:43

ಕಡಬ(reporterkarnataka.com): ಬಸ್ ಹೆಡ್‌ಲೈಟ್ ಇಲ್ಲದೇ 10 ಕಿ.ಮೀ. ಗೂ ಅಧಿಕ ದೂರದವರೆಗೆ ಬಸ್ ಚಲಾಯಿಸಿದ ಕೆಎಸ್‌ಆರ್‌ಟಿಸಿ ಚಾಲಕ ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡಿದ ಘಟನೆ ಸೋಮವಾರ ರಾತ್ರಿ ಆಲಂಕಾರಿನಲ್ಲಿ ನಡೆದಿದೆ.

ಉಪ್ಪಿನಂಗಡಿಯಿಂದ ರಾತ್ರಿ 7.15ಕ್ಕೆ ಕಡಬ ಕಡೆಗೆ ಹೊರಟ ಕಾರವಾರ – ಕುಕ್ಕೆ ಸುಬ್ರಹ್ಮಣ್ಯ ಎಕ್ಸ್‌ಪ್ರೆಸ್ ಬಸ್‌ನಲ್ಲಿ ಮುಂಭಾಗದ ನಾಲ್ಕು ಲೈಟ್‌ಗಳೂ ಕೂಡಾ ಕೆಟ್ಟುಹೋಗಿತ್ತು.

ಆದರೂ ಬಸ್ಸಿನ ಚಾಲಕ ತನ್ನ ಬೇಜವಾಬ್ದಾರಿಯಿಂದಾಗಿ ಉಪ್ಪಿನಂಗಡಿಯಿಂದ ಹೊರಟಿದ್ದಾನೆ. ಕತ್ತಲೆಯಲ್ಲೇ ಬಸ್ಸನ್ನು ಚಲಾಯಿಸಿದ ಚಾಲಕ ಆಲಂಕಾರುವರೆಗೆ ಬಸ್ಸು ಚಲಾಯಿಸಿದ್ದಾನೆ. ಬಸ್ಸಿನಲ್ಲಿ ಸುಮಾರು ಐವತ್ತರಷ್ಟು ಪ್ರಯಾಣಿಕರಿದ್ದರು. ಈ ನಡುವೆ ಬಸ್ಸಿನ ಒಳಗಿನಿಂದ ಪ್ರಯಾಣಿಕರೋರ್ವರು ವೀಡಿಯೋ ಮಾಡುವುದನ್ನು ಗಮನಿಸಿದ ಚಾಲಕ ಹಾಗೂ ನಿರ್ವಾಹಕ ಆಲಂಕಾರು ತಲುಪುತ್ತಿದ್ದಂತೆ ಒಂದು ಲೈಟನ್ನು ಸರಿಪಡಿಸಿ ಬಸ್ಸನ್ನು ಚಲಾಯಿಸಿದ್ದಾರೆ.

ಬಸ್ಸಿನಲ್ಲಿ ಪ್ರಯಾಣಿಕರನ್ನು ಕಳುಹಿಸುವ ಬದಲು ಚಾಲಕ ಮಾಡಿರುವ ದುಸ್ಸಾಹಸಕ್ಕೆ ಬಸ್ಸಿನಲ್ಲಿದ್ದ ಪ್ರಯಾಣಿಕರು ಸಿಟ್ಟಾಗಿದ್ದರು.

ಒಟ್ಟಿನಲ್ಲಿ ಸಾರಿಗೆ ಅಧಿಕಾರಿಗಳ ಬೇಜಾವಾಬ್ದಾರಿತನದಿಂದ ಪ್ರಯಾಣಿಕರು ಜೀವಭಯದಿಂದ ಸಂಚರಿಸುವಂತಾಗಿದೆ. ಇವರ ನಿರ್ಲಕ್ಷ್ಯತನದ ಬಗ್ಗೆ ಗಮನ ಹರಿಸಿ ಸರ್ಕಾರ ಎಚ್ಚೆತ್ತುಕೊಳ್ಳಬೇಕಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು