ಇತ್ತೀಚಿನ ಸುದ್ದಿ
ಪಿಯುಸಿ ಪರೀಕ್ಷೆ ರದ್ದು: ಶಿರಸಿ ಸಮೀಪ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ
13/06/2021, 08:02
ಶಿರಸಿ(reporterkarnataka news) : ದ್ವಿತೀಯ ಪಿಯುಸಿ ಪರೀಕ್ಷೆ ರದ್ದಾಗಿರುವುದರಿಂದ ನೊಂದು ವಿದ್ಯಾರ್ಥಿಯೊಬ್ಬಳು ನೇಣು ಬಿಗಿದು
ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ತಾಲೂಕಿನ ಸಹಸ್ರಳ್ಳಿಯಲ್ಲಿ ನಡೆದಿದೆ.
ಯಡಳ್ಳಿ ಸಮೀಪದ ಸಹಸ್ರಳ್ಳಿಯ ಧನ್ಯಾ ಆಚಾರಿ (18) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಮನೆಯ ಜಂತಿಗೆ ಸೀರೆಯಿಂದ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾಳೆ.
ಶಿರಸಿ ಮಾರಿಕಾಂಬಾ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಷಯ ಓದುತ್ತಿದ್ದವಳು. ಕಾಲೇಜಿಗೆ ಪ್ರಥಮ ರ್ಯಾಂಕ್ ಬರಬೇಕು ಎಂಬ ಆಶಯ ಹೊಂದಿದ್ದಳು. ಆದರೆ ಕೊರೊನಾದಿಂದ ಪರೀಕ್ಷೆ ರದ್ದಾಗಿರುವುದರಿಂದ ನೊಂದಿದ್ದಳು.
ಶಿರಸಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.