7:17 PM Thursday16 - January 2025
ಬ್ರೇಕಿಂಗ್ ನ್ಯೂಸ್
ಕುರ್ಚಿಗಾಗಿ ಕಾದಾಟದಲ್ಲೇ ಎಲ್ಲರೂ ಮಗ್ನ, ಜನರ ಪಾಲಿಗೆ ಸರ್ಕಾರದ ನೆರವು ಮರೀಚಿಕೆ: ಪ್ರತಿಪಕ್ಷ… ಕೆಎಎಸ್‌ ಪೂರ್ವಭಾವಿ ಮರುಪರೀಕ್ಷೆಯ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್… ಬಾಲಿವುಡ್ ನಟ ಸೈಫ್ ಅಲಿಖಾನ್ ಗೆ 6 ಬಾರಿ ಚಾಕು ಇರಿತ: ಮುಂಜಾನೆ… ಗರೋಡಿ ಜಾತ್ರೆಗೂ ಊರವರಿಗೆ ನೀರಿಲ್ಲ!: 5 ದಿನಗಳಿಂದ ನೋ ವಾಟರ್!!; ಮೇಯರ್ ಅವರೇ… ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ಸಚಿವ ಜಮೀರ್‌ ಭಾವಚಿತ್ರಕ್ಕೆ ಸಗಣಿ ಬಳಿದು ಬಿಜೆಪಿ… ಕೆಚ್ಚಲು ಕೊಯ್ದ ಪ್ರಕರಣ: ದನದ ಮಾಲೀಕನ ತಾಯಿಗೆ 3 ಹಸು ಕೊಡಿಸಿದ ಸಚಿವ… 5 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರ: ಆರೋಪಿಯ ತಕ್ಷಣ ಬಂಧಿಸಲು ಆಗ್ರಹಿಸಿ ಎಐಎಂಎಸ್ಎಸ್… ಕಾಡಾನೆಯ ಚಿತ್ರೀಕರಣ ಮಾಡಲು ಹೋದ ಯೂಟ್ಯೂಬರ್ ಮೇಲೆ ಸಲಗ ದಾಳಿ: ಕೂದಲೆಳೆ ಅಂತರದಲ್ಲಿ… ವಿಕಲಚೇತನ ಉದ್ಯೋಗಿಗಳ ಜತೆ ಸಂಕ್ರಾಂತಿ ಹಬ್ಬ ಆಚರಿಸಿಕೊಂಡ ಕೇಂದ್ರ ಸಚಿವ ಕುಮಾರಸ್ವಾಮಿ ಶಬರಿಮಲೆ: ಆಕಾಶದತ್ತ ಮುಖ ಮಾಡಿ ಕಾಯುತ್ತಿದ್ದ ಭಕ್ತರಿಗೆ ಮಕರ ಜ್ಯೋತಿ ದರ್ಶನ: ಪುನೀತರಾದ…

ಇತ್ತೀಚಿನ ಸುದ್ದಿ

ಕೋವಿಡ್​ನ​ ಹೊಸ ತಳಿ XE ಎಂಟ್ರಿ: ಗಾಬರಿ ಬೇಡ ಎಂದ ಎನ್‌ಟಿಎಜಿಐ ಮುಖ್ಯಸ್ಥ ಎನ್​.ಕೆ.ಆರೋರಾ

12/04/2022, 11:19

ಹೊಸದಿಲ್ಲಿ(reporterkarnataka.com): ದೇಶದಲ್ಲಿ ಕೋವಿಡ್​ನ​ ಹೊಸ ತಳಿ ಎಕ್ಸ್​​ಇ ಪತ್ತೆಯಾದ ಬೆನ್ನಲ್ಲೆ ಜನರಲ್ಲಿ ಮತ್ತೆ ಆತಂಕ ಮನೆಮಾಡಿದ್ದು, ಈ ಬಗ್ಗೆ ಭಯಪಡುವ ಅವಶ್ಯಕತೆ ಇಲ್ಲ ಎಂದು ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ (ಎನ್‌ಟಿಎಜಿಐ) ಮುಖ್ಯಸ್ಥ ಎನ್​.ಕೆ.ಆರೋರಾ ತಿಳಿಸಿದ್ದಾರೆ.

ಮಹಾರಾಷ್ಟ್ರ ಮತ್ತು ಗುಜರಾತ್​ನಲ್ಲಿ ಕೋವಿಡ್​ನ​ ಹೊಸ ತಳಿ ಎಕ್ಸ್​​ಇ ಪತ್ತೆಯಾದ ಬೆನ್ನಲ್ಲೆ ಪ್ರತಿಕ್ರಿಯಿಸಿದ ಅವರು, ಒಮಿಕ್ರಾನ್​ನ ಹೊಸ ತಳಿ ಬರುತ್ತಲೇ ಇರುತ್ತವೆ. ಇತ್ತೀಚೆಗೆ ಪತ್ತೆಯಾದ ಎಕ್ಸ್​​ಇ ಎಕ್ಸ್​​ ಸರಣಿಯ ರೂಪಾಂತರಿಯಾಗಿದೆ. ಇಂತಹ ತಳಿಗಳು ಹುಟ್ಟುತ್ತಿರುತ್ತವೆ. ಜನರು ಆತಂಕಪಡುವ ಅಗತ್ಯ ಇಲ್ಲ ಎಂದರು.

ಭಾರತದಲ್ಲಿ ಇದುವರೆಗೆ ದಾಖಲಾದ ಮಾಹಿತಿ ಪ್ರಕಾರ, ಈ ತಳಿ ಅಷ್ಟೊಂದು ವೇಗವಾಗಿ ಹರಡದು. ಎಕ್ಸ್​​ಇ ತಳಿಯು ಮೊದಲ ಹಂತದ ಪರೀಕ್ಷೆಯ ಭಾಗವಾಗಿದೆ. ಒಂದೇ ಪರೀಕ್ಷೆಯಿಂದ ಹೊಸ ತಳಿ ಬರುತ್ತದೆ ಎಂದು ಹೇಳುವುದು ಕಷ್ಟಸಾಧ್ಯ ಎಂದರು.

ಕಳೆದ ತಿಂಗಳು ಮುಂಬೈನಿಂದ ಗುಜರಾತ್​​ನ ವಡೋದರಾಗೆ ಪ್ರಯಾಣಿಸಿದ್ದ 67 ವರ್ಷದ ವ್ಯಕ್ತಿಯಲ್ಲಿ ಇತ್ತೀಚೆಗೆ ಎಕ್ಸ್​​ಇ ಸೋಂಕು ಪತ್ತೆಯಾಗಿತ್ತು.

ಇತ್ತೀಚಿನ ಸುದ್ದಿ

ಜಾಹೀರಾತು