ಇತ್ತೀಚಿನ ಸುದ್ದಿ
ಭಾರಿ ಗಾಳಿ ಮಳೆ: ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದಲ್ಲಿ ಲಕ್ಷಾಂತರ ಮೌಲ್ಯದ ಜೋಳ ಕಾಳು ಹಾನಿ
11/04/2022, 07:55
ಬೆಳಗಾವಿ(reporterkarnataka.com):
ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದಲ್ಲಿ ಅಕಾಲಿಕ ಗಾಳಿ ಮಳೆಗೆ ಅಪಾರ ಹಾನಿಯುಂಟಾಗಿದೆ.
ಕೋಹಳ್ಳಿ ಗ್ರಾಮದ ಐಗಳಿ ರಸ್ತೆಯಲ್ಲಿ ಇರುವ ಮನೆ ರುದ್ರಪ್ಪ ಮುಧೋಳ ಅವರ ಮನೆಯಲ್ಲಿರಿಸಿದ್ದ ಲಕ್ಷಾಂತರ ರೂ. ಮೌಲ್ಯದ ಜೋಳ ಕಾಳು ನಾಶವಾಗಿದೆ. ಜೋಳಕ್ಕೆ ಹಾನಿಯುಂಟಾಗಿರುವುದರಿಂದ ಅವರು ತೀವ್ರ ನಷ್ಟಕ್ಕೆ ಒಳಗಾಗಿದ್ದಾರೆ. ಪರಿಹಾರಕ್ಕಾಗಿ ಅವರು ಸರಕಾರದಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.ರುದ್ರಪ್ಪ ಮುಧೋಳ್ ಅವರು ಈ ಕುರಿತು ಮೇಲಾಧಿಕಾರಿಗಳಿಗೆ ಹೇಳಿದರೂ ಅವರು ಭೇಟಿ ನೀಡಿಲ್ಲ. ಆದ್ದರಿಂದ ಅವರು ತಮ್ಮ ಅಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ರುದ್ರಪ್ಪ ಅವರಿಗೆ ನೆರೆಹೊರೆಯ
ಮನೆಯಲ್ಲಿರುವ ವ್ಯಕ್ತಿಯೊಬ್ಬರು ಸಹಾಯ ಮಾಡಿದ್ದಾರೆ. ಕೊಡ್ಲಪ್ಪ ಚಿಕ್ಕಟ್ಟಿ ಅವರಿಗೆ ಆಸರೆ ನೀಡಿದರು.