7:45 PM Sunday20 - April 2025
ಬ್ರೇಕಿಂಗ್ ನ್ಯೂಸ್
DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ…

ಇತ್ತೀಚಿನ ಸುದ್ದಿ

ಅಂತರಗಂಗೆ ಆರಾಧ್ಯ ದೈವ ದುರ್ಗಾದೇವಿ ಜಾತ್ರಾ ಮಹೋತ್ಸವ: ಸಂಭ್ರಮದ ಸಮಾಪನ

11/06/2021, 07:18

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ

info.reporterkarnataka@gmail.com

ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಅಂತರಗಂಗೆ ಗ್ರಾಮದಲ್ಲಿ  ಆರಾಧ್ಯ ದೈವ ದುರ್ಗಾದೇವಿ ಜಾತ್ರಾ ಮಹೋತ್ಸವ ಅತಿ ಸರಳ ಹಾಗೂ ವಿಜ್ರಂಭಣೆಯಿಂದ ಜರುಗಿತು.

ಕೋವಿಡ್ 19 ಅಲೆ ಇರುವುದರಿಂದ ಸರಕಾರದ ಆದೇಶದ ಪ್ರಕಾರ ಸಾಮಾಜಿಕ ಅಂತರ ಕಾಪಾಡುವುದರ ಜೊತೆಗೆ ಕಡಿಮೆ ಜನರ ಮಧ್ಯೆ ಸಡಗರ ಸಂಭ್ರಮದಿಂದ ಜಾತ್ರೆ ಮಾಡಲಾಯಿತು. ಈ ಭಾಗದ ಆರಾಧ್ಯ ದೈವ ದುರ್ಗಾದೇವಿ ಜಾತ್ರೆ ವಿಶೇಷವಾಗಿ ಐದು ವರ್ಷಕ್ಕೊಮ್ಮೆ ಆಗುತ್ತದೆ. 

ಪ್ರತಿವರ್ಷ ಬೇರೆ ಬೇರೆ ಜಿಲ್ಲೆಗಳಿಂದ ಬೇರೆ ಬೇರೆ ತಾಲೂಕುಗಳಿಂದ ಭಕ್ತರು ಆಗಮಿಸುತ್ತಿದ್ದರು. ಆದರೆ ಲಾಕ್ ಡೌನ್ ಇರುವುದರಿಂದ ಭಕ್ತಾದಿಗಳಿಗೆ ದೂರದಿಂದ ಬರುವವರಿಗೆ ಮನಸ್ಸಿನಲ್ಲಿ ದೇವರನ್ನು ಪ್ರಾರ್ಥಿಸಿ ಮನೆಯಲ್ಲಿ ಜಾತ್ರೆ ಮಾಡಿ ಎಂದು ಸ್ವಾಮೀಜಿ  ತಿಳಿಸಿದ್ದರು. ಈ ಜಾತ್ರೆಯು 7 ಗ್ರಾಮಗಳ ಗೌಡರ ಬಂದಮೇಲೆ ಜಾತ್ರೆಯಂತೆ. ಬೈಲಗುಡ್ಡ, ಮೆದಿಕಲ್, ಮ್ಯಾದರಾಳ, ಅಂತರಗಂಗೆ ತಾಂಡ, ಅಂತರಗಂಗೆ, ನಾಗರಬೆಂಚಿ ಸುತ್ತಮುತ್ತಲ ಭಕ್ತಾದಿಗಳು ದುರ್ಗಾದೇವಿ ಕೃಪೆಗೆ ಪಾತ್ರರಾಗಿ ತಮ್ಮ ಹರಕೆಗಳನ್ನು ತೀರಿಸಿಕೊಳ್ಳುತ್ತಾರೆ.

ಅದ್ದೂರಿ ಸರಳ ರೀತಿಯ ಇಂದು ಜಾತ್ರೆ ನೆರವೇರಿತು. ಈ ಜಾತ್ರೆ ಬಳ್ಳಾರಿ ದುರ್ಗಮ್ಮ ಬಂದು ಇಲ್ಲಿ ನಡೆಸಿದ್ದಾಳೆ ಎಂದು ಮೂಲ ಇತಿಹಾಸದಲ್ಲಿ ಇದೆ. ಈ ಗುಡಿಯ ಮುಂದೆ ಬೇವಿನ ಗಿಡ 120 ವರ್ಷ ಹಳೆಯದಾಗಿದೆ.ಅಪರೂಪದ ಆ ಗಿಡವನ್ನು ದೇವಿ ಕಾಪಾಡಿಕೊಂಡು ಬಂದಿದ್ದಾಳೆಂದು ಹಿರಿಯರು ಹೇಳುತ್ತಾರೆ. ಬಳ್ಳಾರಿ ದುರ್ಗಮ್ಮ ಲಿಂಗಸುಗೂರು ಕೋರ್ಟಿನಲ್ಲಿ ಒಂದು ಕುರ್ಚಿ ದುರ್ಗಾ ಮಳೆಗಾಗಿ ಖಾಲಿ ಇದೆ ಎಂದು ಇತಿಹಾಸದಲ್ಲಿದೆ 


ಅಂತರಗಂಗೆ ಅಮರಪ್ಪ ಸಾಹುಕಾರ್ ರಾಯಚೂರಿನ ವಾಸವಾಗಿರು ಅವರು ಈಗ ನೇತಾಜಿ ಪಟೇಲ್ ಬಜಾರ್ ಬಂಗಾರದ ಅಂಗಡಿ ನಡೆಸುತ್ತಾ ಇದ್ದಾರೆ. ಅವರ ತಂದೆ ಅಮರಪ್ಪ ಸೌಕಾರ್ ದುರ್ಗಾದೇವಿ ಕನಸಿನಲ್ಲಿ ಬಂದು ನನಗೆ ಇರಲು ಗುಡಿ ಕಟ್ಟಿಸಿ ಕೊಡು ಎಂದು ಹೇಳಿ ಅದೃಶ್ಯಳಾದಳು. ದೇವಿ ಹೇಳಿದ ಪ್ರಕಾರ ಅವರು ಗುಡಿ ಕಟ್ಟಿ ಕೊಟ್ಟರು.

ಕ್ರಮೇಣ ಒಂದು ಸಮಯದಲ್ಲಿ ಅವರಿಗೆ ಆಕ್ಸಿಡೆಂಟ್ ಆದಾಗ ಸ್ಥಳದಲ್ಲಿ ಯಾರು ಇರಲಿಲ್ಲ. ಆ ವೇಳೆ ಈ ದುರ್ಗಮ್ಮ ಕರೆದುಕೊಂಡು ಆಸ್ಪತ್ರೆ ಚಿಕಿತ್ಸೆ ಬಂದು ಆರಾಮ್ ಆಗುತ್ತೆ ಏನು ಆಗುವುದಿಲ್ಲ ಎಂದು ಅದೃಶ್ಯಳಾದಳು ಎಂಬ ಐತಿಹ್ಯವಿದೆ.

ಇತ್ತೀಚಿನ ಸುದ್ದಿ

ಜಾಹೀರಾತು