ಇತ್ತೀಚಿನ ಸುದ್ದಿ
ಸಚಿವ ಈಶ್ವರಪ್ಪ 40% ಕಮಿಷನ್ ಕೇಳಿದರೇ?: ದೂರು ಪ್ರಧಾನಿ ಕಾರ್ಯಾಲಯ ತಲುಪಿರುವುದರಿಂದ ಪಿಎಂ ಮಧ್ಯಪ್ರವೇಶಿಸುವರೇ?
28/03/2022, 15:26
ಬೆಂಗಳೂರು(reporterkarnataka.com): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರ ಕಮಿಷನ್ ವ್ಯವಹಾರದಲ್ಲಿ ನಿರತವಾಗಿದೆಯೇ? ಸರಕಾರದ ಹಿರಿಯ ಸಚಿವ, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಮಂತ್ರಿ ಕೆ. ಎಸ್. ಈಶ್ವರಪ್ಪ ಅವರು ಕಮಿಷನ್ ಬೇಡಿಕೆ ಮುಂದಿಟ್ಟರೇ?
ಯಾರಲ್ಲಿ ಅವರು ಕಮಿಷನ್ ಕೇಳಿದ್ರು? ಆರೋಪ ಮಾಡಿದವರು ಯಾರು?
ಈಶ್ವರಪ್ಪ ಅವರು ಕಮಿಷನ್ ಕೇಳಿದ ಬಗ್ಗೆ ಈಗಾಗಲೇ ಪ್ರಧಾನಿ ಕಚೇರಿಗೆ ದೂರು ಹೋಗಿದೆ.ಅವರ ವಿರುದ್ಧ ಹಿಂದು ವಾಹಿನಿಯ ರಾಷ್ಟ್ರೀಯ ಕಾರ್ಯದರ್ಶಿ ಸಂತೋಷ್ ಕೆ. ಪಾಟೀಲ್ ಅವರು ಪ್ರಧಾನ ಮಂತ್ರಿಗಳ ಕಾರ್ಯಾಲಯಕ್ಕೆ ದೂರು ನೀಡಿದ್ದಾರೆ. ರಾಜ್ಯ ಬಿಜೆಪಿ ಸರಕಾರ 40% ಕಮಿಷನ್ ಕೇಳುತ್ತಿದೆ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಆರೋಪ ಮಾಡಿದ್ದರು. ಇದೀಗ ಹಿಂದೂ ಸಂಘಟನೆಯ ಮುಖಂಡರೇ ಆಗಿರುವ ಸಂತೋಷ್ ಅವರು ಪ್ರಧಾನ ಮಂತ್ರಿ ಕಚೇರಿಗೆ ದೂರು ನೀಡಿದ್ದಾರೆ.
ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಅವರು 40% ಕಮಿಷನ್ ಕೇಳುತ್ತಿದ್ದಾರೆ ಎಂದು ನೇರವಾಗಿ ಆರೋಪ ಮಾಡಿದ್ದಾರೆ.
ಈ ನಡುವೆ ಈಶ್ವರಪ್ಪ ಅವರ ರಾಜೀನಾಮೆಗೆ ಒತ್ತಡ ಹೆಚ್ಚುತ್ತಿದೆ. ವಿಧಾನ ಪರಿಷತ್ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಅವರು ಈಶ್ವರಪ್ಪ ಅವರ ರಾಜೀನಾಮೆಗೆ ಒತ್ರಾಯಿಸಿದ್ದಾರೆ.
ಈಗಾಗಲೇ ಗುತ್ತಿಗೆದಾರ ಸಂಘದ ಅಧ್ಯಕ್ಷರು ರಾಜ್ಯ ಬಿಜೆಪಿ ಸರ್ಕಾರ 40% ಕಮಿಷನ್ ಕೇಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಈಗ ಸ್ವತಃ ಬಿಜೆಪಿ ಕಾರ್ಯಕರ್ತ ಹಾಗೂ ಹಿಂದೂ ಸಂಘಟನೆ ಪ್ರಮುಖ ನಾಯಕ ಸಚಿವರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ’ ಎಂದು ಹೇಳಿದರು.
‘ಗ್ರಾಮೀಣಾಭಿವೃದ್ಧಿ ಸಚಿವ 40% ಕಮಿಷನ್ ಕೇಳುತ್ತಿದ್ದಾರೆ ಎಂದು ನೇರವಾಗಿ ಆರೋಪ ಮಾಡಿದ್ದಾರೆ. ಈಗಾಗಲೇ 40 % ಸರ್ಕಾರದ ಬಗ್ಗೆ ಪರಿಷತ್ ನಲ್ಲಿ ಚರ್ಚೆಗೆ ಅವಕಾಶ ಕೇಳಿದ್ದೇವೆ. ದಿನದಿಂದ ದಿನಕ್ಕೆ ಕಮಿಷನ್ ಆರೋಪ ಹೆಚ್ಚಾಗುತ್ತಿದ್ದು, ಸರ್ಕಾರದ ಈ ವಿಷಯವನ್ನ ಗಂಭೀರ ವಾಗಿ ತೆಗೆದುಕೊಂಡಿಲ್ಲ. ಇದೀಗ ಅವರ ಪಕ್ಷದಿಂದಲೇ ಕೇಳಿ ಬಂದಿರುವ ಆರೋಪವಾಗಿದ್ದು, ಈಶ್ವರಪ್ಪ ಅವರು ಸಚಿವ ಸ್ಥಾನಕ್ಕೆ ತಕ್ಷಣ ರಾಜೀನಾಮೆ ಕೊಟ್ಟು, ಆರೋಪದಿಂದ ಮುಕ್ತರಾಗುವವರೆಗೂ ಮಂತ್ರಿ ಮಂಡಲದಲ್ಲಿ ಇರಬಾರದು’ ಎಂದು ಒತ್ತಾಯ ಮಾಡ್ತೇನೆ ಎಂದು ಹರಿಪ್ರಸಾದ್ ಅವರು ತಿಳಿಸಿದರು.
.