7:27 AM Friday4 - July 2025
ಬ್ರೇಕಿಂಗ್ ನ್ಯೂಸ್
ಕಡೂರು: 6 ದಿನಗಳ ಹುಡುಕಾಟದ ನಂತರವೂ ಸಿಗದ ಫಾರೆಸ್ಟ್ ಗಾರ್ಡ್ ಶರತ್‌ ಸುಳಿವು ಸೋರುತ್ತಿದೆ ಸೂರು; ಕೊಠಡಿ ತುಂಬಾ ನೀರು: ರಾಷ್ಟ್ರಕವಿ ಕುವೆಂಪು ಓದಿದೆ ಶಾಲೆಯ ಕೇಳುವವರೇ… ಮಲೆನಾಡಲ್ಲಿ ಮುಂದುವರಿದ ಮಳೆ: ಶೃಂಗೇರಿಯ ಗಾಂಧಿ ಮೈದಾನದ ರಸ್ತೆಗೆ ನುಗ್ಗಿ ನೆರೆ ನೀರು;… ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಪೈಪೋಟಿಯಿಲ್ಲ: ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ Accident | ಸುರತ್ಕಲ್ ಬಳಿ ಎರಡು ಖಾಸಗಿ ಬಸ್ಸುಗಳು ಮುಖಾಮುಖಿ ಡಿಕ್ಕಿ: 28… Chikkaballapura | ರಾಜ್ಯ ಸಚಿವ ಸಂಪುಟ ಸಭೆ: ಮುಖ್ಯಮಂತ್ರಿ ಘೋಷಿಸಿದ ಯೋಜನೆ, ತೀರ್ಮಾನಗಳೇನು? JDS Protest | ರಾಜ್ಯದಲ್ಲಿ ಆರ್ಥಿಕ ಅರಾಜಕತೆ: ಬೆಂಗಳೂರು ಪ್ರತಿಭಟನೆಯಲ್ಲಿ ಜೆಡಿಎಸ್ ಆರೋಪ Dharwad | ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ: ಕಾರ್ಮಿಕ… ಬೆಂಗಳೂರು ಕಾಲ್ತುಳಿತದ ಪ್ರಕರಣ; ಸಿಎಟಿ ಆದೇಶ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ: ಮುಖ್ಯಮಂತ್ರಿ Karnataka CM | ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು: ಮುಖ್ಯಮಂತ್ರಿ…

ಇತ್ತೀಚಿನ ಸುದ್ದಿ

ಕಾಶ್ಮೀರದಲ್ಲಿ ಸಿದ್ದರಾಮಯ್ಯರಿಗೂ ಬದುಕಲು ಸಾಧ್ಯವಾಗುತ್ತಿರಲಿಲ್ಲ: ಸಿ.ಟಿ. ರವಿ

21/03/2022, 17:07

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka.com

ಕಾಶ್ಮೀರದಲ್ಲಿ ಮಾಜಿ ಮುಖ್ಯಮಂತ್ರಿಸಿದ್ದರಾಮಯ್ಯ ಮತ್ತು ಅವರ ಮಕ್ಕಳು, ಮೊಮ್ಮೊಕ್ಕಳು ಉಳಿಯುತ್ತಿರಲಿಲ್ಲ. ಅಲ್ಲಿ ಅವರು ಉಳಿಯಬೇಕಾದರೆ ಸಿದ್ರಾಮುಲ್ಲಾ ಖಾನ್ ಆಗಿದ್ರೆ ಮಾತ್ರ ಉಳಿದುಕೊಳ್ಳೋರು ಎಂದು ಚಿಕ್ಕಮಗಳೂರಿನಲ್ಲಿ ಸಿದ್ದು ವಿರುದ್ಧ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಸಿ.ಟಿ.ರವಿ ವ್ಯಂಗ್ಯವಾಡಿದರು ಕಾಶ್ಮೀರಿ ಫೈಲ್ಸ್ ವಾಸ್ತವಿಕ ಸತ್ಯದ ಘಟನೆಗಳ ಚಿತ್ರ. 

ಸಿದ್ದರಾಮಯ್ಯ ಅವರು ವಕೀಲರಿದ್ದಾರೆ, ಬುದ್ಧಿವಂತರಿದ್ದಾರೆ ಆಯಾ ಕಾಲಘಟ್ಟದ ಸರ್ಕಾರಿ ದಾಖಲೆಗಳಿವೆ. ಸಿದ್ದರಾಮಯ್ಯನವರಿಗೆ ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ ಎಂದರು.

ಬಾಮಿಯಾನ್‍ನಲ್ಲಿ ಬುದ್ದ ನಗುತ್ತಾ ನಿಂತಿದ್ದ, ಅವನನ್ನ ತಾಲಿಬಾನ್‍ಗಳು ಫಿರಂಗಿ ಇಟ್ಟು ಉಡಾಯಿಸಿದರು. ಬುದ್ಧನಿಗಿಂತ ಶಾಂತಿ ಸಂದೇಶ ಸಾರಿದ ಮತ್ತೋಬ್ಬ ವ್ಯಕ್ತಿ ಬೇಕಾ? ಅದೇ ಜನ ಕಾಶ್ಮೀರಿ ಪಂಡಿತರು, ಹಿಂದೂಗಳ ಕಾಶ್ಮೀರ ಕಣಿವೆ ತೊರೆಯಬೇಕೆಂದು ಮೈಕ್‍ನಲ್ಲಿ ಕೂಗಿದರು.

ಅದೇ ಜನರು ಭಯ ಹುಟ್ಟಿಸಲು ಕೊಂದರು, ಗರಗಸದಲ್ಲಿ ಕೊಯ್ದರು. ಸಾಕ್ಷಿ ಬೇಕು ಅಂದ್ರೆ ಸಾವಿರ ಸಾಕ್ಷಿಗಳು ಸಿಗುತ್ತವೆ ಎಂದು ಅವರು ನುಡಿದರು.

ಆ ಕಾಶ್ಮೀರಿ ಪಂಡಿತರ ಕುಟುಂಬದವರು ಇನ್ನೂ ಬದುಕಿದ್ದಾರೆ, ನಿರಾಶ್ರಿತರಾಗಿದ್ದಾರೆ. ಎಲ್ಲದರಲ್ಲೂ ರಾಜಕೀಯ ಹುಡುಕುವ ಪೂರ್ವಾಗ್ರಹ ಮನಸ್ಥಿತಿಗೆ ಅರ್ಥವಾಗಲ್ಲ. ಅರ್ಥ ಮಾಡಿಕೊಳ್ಳುವ ಮನಸ್ಥಿತಿ ಇದ್ದರೆ ನೋಡಿ ಸತ್ಯದ ವಿವೇಚನೆಗೆ ಒಳಗಾಗೋರು 

ಅವರಿಗೆ ಸತ್ಯವನ್ನೋ ನೋಡಿ ಒಪ್ಪಿಕೊಳ್ಳುವ ಮನಸ್ಸು-ಮನಸ್ಥಿತಿ ಇಲ್ಲ ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು