ಇತ್ತೀಚಿನ ಸುದ್ದಿ
ಹೋಳಿ ಹುಣ್ಣಿಮೆ: 700 ಕಿಮೀ. ದೂರದ ಶ್ರೀಶೈಲಗಿರಿಗೆ ಪಾದಯಾತ್ರೆ ಹೊರಟ ಭಕ್ತರ ದಂಡು
19/03/2022, 22:34
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಹೋಳಿ ಹುಣ್ಣಿಮೆಯ ದಿನ ಕಾಮನಿಗೆ ಬೆಂಕಿ ಹಚ್ಚಿ ಪಾದಯಾತ್ರೆಯನ್ನು ಮಾಡುವ ಪರಂಪರೆ ಇದೆ. ಆದರಂತೆ ಅಥಣಿ ತಾಲ್ಲೂಕಿನ ಹಲ್ಯಾಳ ಗ್ರಾಮದ ಭಕ್ತರು ಪ್ರತಿ ವರ್ಷದಂತೆ ಈ ವರ್ಷವೂ ಪಾದಯಾತ್ರೆ ಆರಂಭಿಸಿದರು.
ಹಲ್ಯಾಳ ಗ್ರಾಮದಿಂದ ಶ್ರೀಶೈಲಗಿರಿಯು ಸುಮಾರು 700 ಕಿಲೋಮೀಟರ್ ಇದೆ. ಭಕ್ತಿಯಿಂದ ಪಾದಯಾತ್ರೆ ಮಾಡುವ ಭಕ್ತರಿಗೆ ಏನನ್ನು ನೋವು ಆಗಲಾರಂತೆ ದೇವರು ತನ್ನ ಮಕ್ಕಳಂತೆ ನೋಡಿಕೊಳ್ಳುತ್ತಾನೆ ಎಂಬ ನಂಬಿಕೆ ಇದೆ.
ಪಾದ ಯಾತ್ರೆ ಮಾಡುವ ಭಕ್ತರಿಗೆ ಅಲ್ಲಲ್ಲಿ ಅಲ್ಪೊಪ ಆಹಾರ ಭಕ್ತರು ಏರ್ಪಡಿಸಿರುತ್ತಾರೆ.
ಒಟ್ಟಿನಲ್ಲಿ ಪಾದಯಾತ್ರೆಯನ್ನು ಭಕ್ತರು ನೋವುಗಳನ್ನು ಮರಿಯಲು ದೇವರ ನಾಮಸ್ಮರಣೆ ಮಾಡುತ್ತ ಹೋಗುತ್ತಾರೆ. ಅವರಿಗೆ ಸಕಲ ಬುದ್ದಿಪ್ರಾಪ್ತಿಯಾಗುಗುತ್ತದೆ ಎಂಬುವುದು ನಂಬಿಕೆ