6:53 PM Saturday13 - December 2025
ಬ್ರೇಕಿಂಗ್ ನ್ಯೂಸ್
ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ: ವಿಧಾನ ಸಭೆಯಲ್ಲಿ ಸಚಿವ ಬಿ.ಎಸ್.ಸುರೇಶ್ ದ್ವೇಷ ಭಾಷಣಕ್ಕೆ 10 ವರ್ಷ ಜೈಲು ಶಾಸನ ಕಾಂಗ್ರೆಸ್ ನ ಕ್ರೂರ ಸಂಪ್ರದಾಯದ… ಚಿಕ್ಕಮಗಳೂರಿನಲ್ಲಿ ಪಿಪಿಪಿ ಮಾದರಿಯಲ್ಲಿ ಸ್ಪೈಸ್ ಪಾರ್ಕ್ ಅಭಿವೃದ್ಧಿ: ವಿಧಾನ ಪರಿಷತ್ ನಲ್ಲಿ ಸರಕಾರ… ಕೆಪಿಟಿಸಿಎಲ್: 448 ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್‌ಮ್ಯಾನ್‌ಗಳ ನೇಮಕ ಭಾರತದಲ್ಲಿ ಎಫ್ ಡಿಐ ಹೆಚ್ಚಳ: ಪ್ರಧಾನಿ ಮೋದಿಗೆ ಸಂಸದ ಬಸವರಾಜ ಬೊಮ್ಮಾಯಿ ಅಭಿನಂದನೆ ಮೈಸೂರು ಅರಮನೆ ಮುಖ್ಯ ದ್ವಾರದ ಮೇಲ್ಚಾವಣಿ ಕುಸಿತ: ವರಾಹ ಗೇಟ್ ಬಳಿ ಬ್ಯಾರಿಕೇಡ್… ಶಾಲೆಗಳ ಮೂಲಸೌಕರ್ಯಕ್ಕೆ ಕ್ರಮ; ಮಕ್ಕಳ ಶೂ-ಸಾಕ್ಸ್ ಅನುದಾನ ಪೂರ್ಣ ಬಿಡುಗಡೆ: ಸಚಿವ ಮಧು… ಹಂತ ಹಂತವಾಗಿ ಖಾಲಿ ಹುದ್ದೆಗಳ ಭರ್ತಿ: ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿ ಭರವಸೆ

ಇತ್ತೀಚಿನ ಸುದ್ದಿ

ಮುಚ್ಚೇ ಬಿಟ್ಟಿತು ಭಾರತ್ ಮಾಲ್ ನ ಬಿಗ್ ಬಜಾರ್: ನೂರಾರು ಸ್ಥಳೀಯ ಸಿಬ್ಬಂದಿಗಳು ಬೀದಿಪಾಲು

11/03/2022, 21:52

ಅಶೋಕ್ ಕಲ್ಲಡ್ಕ ಮಂಗಳೂರು

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ಮಂಗಳೂರಿನ ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಸಮೀಪದ ಭಾರತ್ ಮಾಲ್ ನಲ್ಲಿರುವ ಬಿಗ್ ಬಜಾರ್ ಬಂದ್ ಆಗಿದೆ. ಫ್ಯೂಚರ್ ಗ್ರೂಪ್ ಗೆ ಸೇರಿದ ಬಿಗ್ ಬಜಾರ್  ಯಾವುದೇ ಸೂಚನೆ ಇಲ್ಲದೆ ಏಕಾಏಕಿಯಾಗಿ ಶೆಟರ್ ಎಳೆದಿರುವುದರಿಂದ ದಿನಾ ನೂರಾರು ಮಂದಿ ಗ್ರಾಹಕರು ಬಂದು ಅರೆ ಕ್ಷಣ ಆಘಾತಕ್ಕೊಳಗಾಗಿ ವಾಪಸ್ ಹೋಗುತ್ತಿದ್ದಾರೆ.

ಭಾರತ್ ಮಾಲ್ ಆರಂಭವಾಗಿ ಹೆಚ್ಚು ಕಡಿಮೆ ಒಂದೂವರೆ ದಶಕ ಕಳೆಯಿತು. ಕಡಲನಗರಿಗೆ ಮಾಲ್ ಸಂಸ್ಕೃತಿಯನ್ನು ಪರಿಚಯಿಸಿದ್ದೇ ಈ ಭಾರತ್ ಮಾಲ್. ಆದ್ದರಿಂದ ಆರಂಭದಲ್ಲಿ ಭಾರತ್ ಮಾಲ್ ಗೆ ಜಾತ್ರೆ ತರಹ ಜನ ಸೇರುತ್ತಿದ್ದರು. ಖರೀದಿಗಾಗಿ ಬರುವವರು ಸ್ವಲ್ಪ ಕಡಿಮೆ ಇದ್ದರೂ ಶೋಕಿಗಾಗಿ, ತಿನ್ನುವುದಕ್ಕಾಗಿ ಇಲ್ಲಿಗೆ ಸಾಕಷ್ಟು ಸಂಖ್ಯೆಯಲ್ಲಿ ಜನರು ಬರುತ್ತಿದ್ದರು.

ಯುವಕ- ಯುವತಿಯರಿಗೆ ಇದೊಂದು ಟೈಮ್ ಪಾಸ್ ಸೆಂಟರ್ ಆಗಿತ್ತು. ಲವರ್ಸ್ ಗೆ ಫಿಕ್ನಿಕ್ ಸ್ಪಾಟ್ ಆಗಿತ್ತು. ಹೈಸ್ಕೂಲ್ ಮಕ್ಕಳು ಕೂಡ ಕ್ಲಾಸ್ ಮುಗಿದ ತಕ್ಷಣ ಐಸ್ ಕ್ರೀಮ್ ಮೆಲ್ಲಲು, ಜ್ಯೂಸ್ ಕುಡಿಯಲು ದೌಡಾಯಿಸುತ್ತಿದ್ದರು. ಇಷ್ಟೇ ಯಾಕೆ ಬೇಸಿಗೆಯ ಬಿಸಿಲಿನಲ್ಲಿ ಮೈ ಸುಟ್ಟುಕೊಂಡವರು ಒಮ್ಮೆ ಮೈ ತಂಪು ಮಾಡಲೆಂದು ಸಂಪೂರ್ಣ ಎಸಿ ವ್ಯವಸ್ಥೆ ಹೊಂದಿರುವ ಭಾರತ್ ಮಾಲನ್ನು ಆಶ್ರಯಿಸುತ್ತಿದ್ದರು.

ಭಾರತ್ ಮಾಲ್ ಮೂಲಕ ಮಾಲ್ ಕಲ್ಚರ್ ಕಡಲ ನಗರಿಯಲ್ಲಿ ಇಂಟ್ರೊಡ್ಯೂಸ್ ಆಗುತ್ತಿದ್ದಂತೆ ಕೆ. ಎಸ್. ರಾವ್ ರೋಡ್ ನಲ್ಲಿ ಸಿಟಿ ಸೆಂಟರ್ ಮಾಲ್ ಹಾಗೂ ಪಾಂಡೇಶ್ವರದಲ್ಲಿ ಫೋರಂ ಫಿಜ್ಹಾ ಮಾಲ್ ತೆರೆದುಕೊಂಡಿತು. ಅಲ್ಲಿಂದ ಶುರುವಾಯಿತು ಭಾರತ್ ಮಾಲ್ ಗೆ ಗ್ರಹಚಾರ.ದಿನ ಕಳೆಯುತ್ತಿದ್ದಂತೆ ಭಾರತ್ ಮಾಲ್ ಗೆ ಬರುವವರ ಸಂಖ್ಯೆ ಕ್ಷೀಣಿಸಲಾರಂಭಿಸಿತು. ಮಂಗಳೂರು 2-3 ಮಾಲ್ ಗಳನ್ನು ಸಹಿಸುವಷ್ಟು ಬೆಳೆದಿಲ್ಲ ಎನ್ನುವುದು ಇದರಿಂದ ಸಾಬೀತಾಯಿತು.
ಅಳಿದುಳಿದ ಗಿರಾಕಿಗಳಲ್ಲಿ ಹೆಚ್ಚಿನವರು ಭಾರತ್ ಮಾಲ್ ನ ಬಿಗ್ ಬಜಾರ್ ಹಾಗೂ ಫುಡ್ ಬಜಾರ್ ಗೆ ಬರುವವರು ಆಗಿದ್ದರು.

ಅದು ಬಿಟ್ಟರೆ ಫಿಜಾ ಹಟ್ ಮತ್ತು ಪಬ್ಬಾಸ್ ಐಡಿಯಲ್ ಕೆಫೆಗೆ ಮಾತ್ರ. ಆದರೆ ಇದೀಗ ಬಿಗ್ ಬಜಾರ್ ಮುಚ್ಚಿದೆ. ಇಲ್ಲಿ ಕೆಲಸ ಮಾಡುತ್ತಿದ್ದ ನೂರಾರು ಮಂದಿ ಸಿಬ್ಬಂದಿಗಳು ಅತಂತ್ರ ಸ್ಥಿತಿಗೆ ತಲುಪಿದ್ದಾರೆ.

ಫ್ಯೂಚರ್ ಗ್ರೂಪ್ ಗೆ ಸೇರಿದ ಬಿಗ್ ಬಜಾರ್ ರಿಲಯನ್ಸ್ ಗ್ರೂಪಿಗೆ ಮಾರಾಟವಾದ ಬಗ್ಗೆ ಮಾಹಿತಿ ಇದೆ. ನಷ್ಟದಲ್ಲಿರುವ ಬಿಗ್ ಬಜಾರನ್ನು ರಿಲಯನ್ಸ್ ಗ್ರೂಪ್ ಖರೀದಿಸಿದೆ. ಇನ್ನು 2-3 ತಿಂಗಳಲ್ಲಿ ಹೊಸ ಅವತಾರದೊಂದಿಗೆ ರಿಲಯನ್ಸ್ ಹೆಸರಿನಲ್ಲಿ ತೆರೆದುಕೊಳ್ಳಲಿದೆ ಎನ್ನಲಾಗಿದೆ. ಬಿಗ್ ಬಜಾರ್ ನಲ್ಲಿ ದುಡಿಯುತ್ತಿದ್ದ ನೂರಾರು ಮಂದಿ ಸ್ಥಳೀಯ ಸಿಬ್ಬಂದಿಗಳನ್ನು ರಿಲಯನ್ಸ್ ಗ್ರೂಪ್ ಮುಂದುವರಿಸುತ್ತದೆಯೇ ಎನ್ನುವ ಬಗ್ಗೆ ಯಾವುದೇ ಸ್ಪಷ್ಟ ಉತ್ತರ ಇನ್ನೂ ಸಿಕ್ಕಿಲ್ಲ.

ಇತ್ತೀಚಿನ ಸುದ್ದಿ

ಜಾಹೀರಾತು