3:35 PM Sunday5 - July 2026
ಬ್ರೇಕಿಂಗ್ ನ್ಯೂಸ್
ತೀರ್ಥಹಳ್ಳಿ | ಅರಳಾಪುರದ ಕೊಪ್ಪಲು ಗ್ರಾಮದಲ್ಲಿ ಗಾಳಿ ಮಳೆಗೆ ಬಿದ್ದ ಬೃಹತ್ ಮರ:… Raichuru | ಮಸ್ಕಿ: ಅತಿಥಿ ಶಿಕ್ಷಕರ ಭದ್ರತೆ ಸೇರಿದಂತೆ ವಿವಿಧ ಬೇಡಿಕೆ ಆಗ್ರಹಿಸಿ… ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಜೂಜಾಟ: 28 ಜನರ ಬಂಧನ;… ಮತ ಪರಿಷ್ಕರಣೆ ವಿಚಾರದಲ್ಲಿ ಅಧಿಕಾರಿಗಳ ಕಳ್ಳಾಟ..!?: ಮನೆ ಮನೆಗೆ ಹೋಗುವ ಬದಲಾಗಿ ಜನರನ್ನೇ… ಮುಂದಿನ ಪೀಳಿಗೆಗೆ ಹಿಂಸೆ, ದ್ವೇಷ, ಸುಳ್ಳಿನ ಭಾರತವನ್ನು ಕೊಡಬಾರದು: ಕೆಪಿಸಿಸಿ ಅಧ್ಯಕ್ಷ ಬಿ.ಕೆ.… ಕಾಸು ಬೇಕಾದ್ರೆ ನನ್ನ ಹತ್ರ ಕೇಳೋ: ಲಂಚಕೋರ ಅಧಿಕಾರಿಗೆ ಕುಣಿಗಲ್ ಶಾಸಕ ಡಾ.… Bangalore | ವೇಶ್ಯಾವಾಟಿಕೆ:12 ಮಂದಿ ಬಾಂಗ್ಲಾದೇಶಿ ಪ್ರಜೆಗಳು ಸಿಸಿಬಿ ಪೊಲೀಸರ ವಶಕ್ಕೆ ಶಾಸಕ ಪ್ರದೀಪ್ ಈಶ್ವರ್ ಮೇಲೆ ಹಲ್ಲೆ ಯತ್ನ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ… ಬೆಂಗಳೂರು | ನಕಲಿ ಪೊಲೀಸ್ ಅಸಲಿ ಆಟ: ಯೂನಿಫಾರ್ಮ್ ಧರಿಸಿ ಬೈಕ್ ಸವಾರರಿಂದ… Belagavi | ವಿವಾಹಿತೆಯೊಂದಿಗೆ ಪರಾರಿ: ಯುವಕನ ಮನೆ ಧ್ವಂಸ; ಕುರಿಗಳನ್ನೂ ಹೊತ್ತೊಯ್ದು ಭರ್ಜರಿ…

ಇತ್ತೀಚಿನ ಸುದ್ದಿ

ನೆಲ್ಯಾಡಿಯ ವಿಶ್ವವಿದ್ಯಾನಿಲಯ ಘಟಕ ಕಾಲೇಜಿನಲ್ಲಿ ಸ್ವ ಉತ್ಪನ್ನ ವ್ಯಾಪಾರ ಮೇಳ: ಪ್ರಜ್ಞಾ ಮತ್ತು ತಂಡ ಪ್ರಥಮ

10/03/2022, 08:59

ಉಪ್ಪಿನಂಗಡಿ(reporterkarnataka.com):

ನೆಲ್ಯಾಡಿಯ ವಿಶ್ವವಿದ್ಯಾನಿಲಯ ಘಟಕ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಿಂದ ಸ್ವ ಉತ್ಪನ್ನ ವ್ಯಾಪಾರ ಮೇಳ ನಡೆಯಿತು. 

ಈ ವ್ಯಾಪಾರ ಮೇಳದಲ್ಲಿ ವಾಣಿಜ್ಯ ವಿಭಾಗದ ಎಲ್ಲಾ ವಿದ್ಯಾಥಿ೯ಗಳು  ಅನೇಕ ಬಗೆಯ ಕರಕುಶಲ ವಸ್ತುಗಳನ್ನು ಹಾಗೂ ವಿವಿಧ ಬಗೆಯ ಆಹಾರ ಪದಾಥ೯ಗಳ ಉತ್ಪನ್ನಗಳನ್ನು, ಸ್ಥಳೀಯ ಪರಿಸರದಲ್ಲಿ ಸಿಗುವ ಹಣ್ಣುಹಂಪಲುಗಳನ್ನು, ವಿವಿಧ ಬಗೆಯ ಹಣ್ಣುಗಳ ಪಾನೀಯಗಳನ್ನು ಸಿದ್ದಪಡಿಸಿಕೊಂಡು ಮೇಳದಲ್ಲಿ ಪಾಲ್ಗೊಂಡರು.

ಕಾಲೇಜಿನ ವಾಣಿಜ್ಯ ಮತ್ತು ಕಲಾ ವಿಭಾಗದ ವಿದ್ಯಾಥಿ೯ಗಳಿಗೆ ಹಾಗೂ ಎಲ್ಲಾ ಉಪನ್ಯಾಸಕ ವೃಂದದವರಿಗೂ ತಮ್ಮ ಉತ್ಪನ್ನಗಳ ಬಗ್ಗೆ ವಿವರಿಸಿ ವಿಕ್ರಯ ಮಾಡಿದರು. ಅನೇಕ ಬಗೆಯ ಸ್ವ ಉತ್ಪನ್ನಗಳ ಬಗ್ಗೆ ಗ್ರಾಹಕರಿಗೆ ಬಳಕೆಯಾಗುವ ರೀತಿ ಅವುಗಳ ಗುಣಮಟ್ಟದ ಬಗ್ಗೆ ಸೃಜನಶೀಲತೆಯಿಂದ ಪ್ರಸ್ತುತಪಡಿಸಿದ ರೀತಿಯು ಆಕಷ೯ಣೀಯವಾಗಿತ್ತು. 

ಅತೀ ಹೆಚ್ಚು ವಸ್ತುಗಳನ್ನು ವ್ಯಾಪಾರ ಮಾಡುವುದರ ಮೂಲಕ ಪ್ರಜ್ಞಾ ಮತ್ತು ಅವರ ತಂಡ ಪ್ರಥಮ ಸ್ಥಾನವನ್ನು , ಅನುಷಾ ಮತ್ತು ಅವರ ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು. ವಾಣಿಜ್ಯ ಸಂಘದ ಸಂಚಾಲಕರಾದ ದಿವ್ಯ.ಕೆ  ಅವರು ಸ್ವ ಉತ್ಪನ್ನ ವ್ಯಾಪಾರ ಮೇಳದ ಕುರಿತು ಮಾಗ೯ದಶ೯ನವನ್ನು ನೀಡಿದರು. ಉಪನ್ಯಾಸಕರಾದ ವೆರೋನಿಕ ಪ್ರಭ , ಡಾ.ನೂರೋಂದಪ್ಪ, ಶೃತಿ ಯವರು ವಿದ್ಯಾಥಿ೯ಗಳಿಗೆ ಸ್ವ ಉತ್ಪನ್ನ ವ್ಯಾಪಾರ ಸಂದಭ೯ದಲ್ಲಿ ಗ್ರಾಹಕರೊಂದಿಗಿನ ಮಾತುಕತೆ,ಭಾಷೆ,ಓಡನಾಟ ಕುರಿತು ಅರಿವು ಮೂಡಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು