7:14 PM Tuesday26 - November 2024
ಬ್ರೇಕಿಂಗ್ ನ್ಯೂಸ್
ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ… ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣಗೆ ಜಯ: ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಮುಖಭಂಗ ​ ಮಹಾರಾಷ್ಟ್ರ: ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ? ಆರೆಸ್ಸೆಸ್ ಮುಖ್ಯಸ್ಥ ಡಾ. ಭಾಗವತ್ ಡಿ. 7ರಂದು ಕಲ್ಲಡ್ಕಕ್ಕೆ: ಶ್ರೀರಾಮ ವಿದ್ಯಾಕೇಂದ್ರ ಕ್ರೀಡೋತ್ಸವದಲ್ಲಿ… ಬೆಂಗಳೂರು ಮತ್ತು ಚೆನ್ನೈಗೆ ಆಸ್ಟ್ರೇಲಿಯನ್ ಡಿಜಿಟೆಕ್ ಟ್ರೇಡ್ ಮಿಷನ್ ಭೇಟಿ

ಇತ್ತೀಚಿನ ಸುದ್ದಿ

ಮಾವಿಗಿಲ್ಲ ಬೆಲೆ, ರೈತರಿಗಿಲ್ಲ ನೆಲೆ: ಶ್ರೀನಿವಾಸಪುರ ಮಾವು ಬೆಳೆಗಾರರ ಬದುಕಿಗೆ ಕೊಳ್ಳಿಯಿಟ್ಟ ಕೊರೊನಾ ಲಾಕ್ ಡೌನ್

08/06/2021, 17:41

ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

info.reporterkarnataka@gmail.com

ಮಾವಿನ ರಾಜಧಾನಿ ಎಂದು ಖ್ಯಾತವಾಗಿರುವ ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ಹಣ್ಣುಗಳು ಲಾಕ್ ಡೌನ್ ಸಂಕಷ್ಟದಿಂದ ರೈತರ ಪಾಲಿಗೆ ಕಹಿಯಾಗಿದೆ.

ಇಲ್ಲಿನ ಹಣ್ಣುಗಳಿಗೆ ಹೊರ ರಾಜ್ಯಗಳಾದ ಮಹಾರಾಷ್ಟ್ರ , ಗುಜರಾತ್ , ಉತ್ತರ ಪ್ರದೇಶ , ಮಧ್ಯಪ್ರದೇಶ , ಬಿಹಾರ್ , ವೆಸ್ಟ್ ಬೆಂಗಾಲ್ , ಪಂಜಾಬ್ , ಛತ್ತೀಸ್ ಗಢ , ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರ್  ಆಂಧ್ರಪ್ರದೇಶ , ತಮಿಳುನಾಡು ಮುಂತಾದ ರಾಜ್ಯಗಳಲ್ಲಿ ಬಹಳ ಬೇಡಿಕೆ ಇದೆ. ಆದರೆ ಲಾಕ್ ಡೌನ್ ನಿಂದ ಕಾವಿಗೆ ಯಾವುದೇ ಬೆಲೆ ಇಲ್ಲದಂತಾಗಿದೆ. ಸಂಕಷ್ಟದಲ್ಲಿರುವ ಬೆಳೆಗಾರರಿಗೆಸರ್ಕಾರ ಹೆಕ್ಟೇರ್‌ಗೆ ಘೋಷಿಸಿರುವ 10 ಸಾವಿರ ಪ್ಯಾಕೇಜ್  ‘ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ ಎಂಬಂತಾಗಿದೆ . 

ಶ್ರೀನಿವಾಸಪುರದಲ್ಲಿ ಮೇ 5 ರಿಂದಲೇ ಮಾವಿನ ಮಂಡಿಗಳಿಗೆ ಮಾರುಕಟ್ಟೆ ಆರಂಭಿಸಲಾಗಿದ್ದು , ಮೇ .16 ರ ನಂತರವೇ ಶ್ರೀನಿವಾಸಪುರದ ಕೆಲವು ತಳಿಗಳ ಮಾವು ಎಪಿಎಂಸಿ ಮತ್ತು ಮಾವಿನ ಮಂಡಿಗಳಿಗೆ ಬರಲಾರಂಭಿಸಿದೆ. ಸರ್ಕಾರ ಮಾರುಕಟ್ಟೆ ಸೌಲಭ್ಯ ನೀಡಿದ್ದರೂ , ದೂರದ ವ್ಯಾಪಾರಿಗಳು ಕೋವಿಡ್ ಭಯದಿಂದ ಇತ್ತ ಸುಳಿಯದ ಕಾರಣ ಮಾರಾಟವೂ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ. 

ರಾಜ್ಯದಲ್ಲಿ ಉತ್ಪಾದನೆ ಯಾಗುವ ಒಟ್ಟು ಮಾವಿನಲ್ಲಿ ಶೇ .60 ಕ್ಕಿಂತಲೂ ಹೆಚ್ಚು ಮಾವು ಬೆಳೆಯುವುದು ಕೋಲಾರ ಜಿಲ್ಲೆಯಲೇ, ಅದರಲ್ಲೂ ಶ್ರೀನಿವಾಸಪುರದಲ್ಲೇ ಸುಮಾರು 30 ಸಾವಿರ ಹೆಕ್ಟೇರ್ ಮಾವು ಬೆಳೆಯಲಾಗುತ್ತಿದೆ.  ಉಳಿದಂತೆ ಬಂಗಾರಪೇಟೆ 4562 , ಕೋಲಾರ -5574 ಮಾಲೂರು -1471 , ಮುಳಬಾಗಲು -16,870 ಹೆಕ್ಟೇರ್ ಪ್ರದೇಶ ಸೇರಿದಂತೆ ಒಟ್ಟು ಸುಮಾರು 60,172 ಹೆಕ್ಟೇರ್‌ನಲ್ಲಿ ಬೆಳೆಯಲಾಗುತ್ತಿದೆ. 

ಇನ್ನು ಮಾವು ಎಂದೊಡನೇ ನೆನಪಿಗೆ ಬರುವ ಶ್ರೀನಿವಾಸಪುರದ ಮಣ್ಣಿನ ಮಹಿಮೆ, ಫಲವತ್ತತೆ ಮಾವು ಬೆಳೆಗೆ ಪ್ರಕೃತಿಯೇ ಹೇಳಿ ಮಾಡಿಸಿಕೊಟ್ಟಂತಿದೆ. ಇಲ್ಲಿನ ಮರಳು ಮಿಶ್ರಿತ ಕೆಮ್ಮಣ್ಣು ವಿಶೇಷತೆ. ಯಾವುದೇ ತಳಿಯಿರಲಿ , ಈ ನೆಲದಲ್ಲಿ ಬೆಳೆದ ಮಾವು ಹುಳಿ ಕಡಿಮೆ . ಹೆಚ್ಚು ರುಚಿಕರ ಮತ್ತು ಸ್ವಾದಿಷ್ಟಕರವಾಗಿ ಎಲ್ಲರ ಬಾಯಲ್ಲಿ ನೀರೂರಿಸುವ ಸಾಮರ್ಥ್ಯ ಹೊಂದಿದೆ . 

ಜಿಲ್ಲೆಯಲ್ಲಿ ರಸಪೂರಿ , ಬಾದಾಮಿ , ಮಲ್ಲಿಕಾ , ಮಲಗೋಬಾ , ಬೇನಿಷಾ , ಖುದ್ದೂಸ್ , ರಾಜಗೀರಾ , ಕಾಲಾಪಾಡ್ ,  ಶಂಕರ್ ಬ್ರಿಡ್ಜ್ , ತೋತಾಪುರಿ , ನೀಲಂ , ಆಲೋನ್ಸಾ ,  ಅಲೈಟ್ , ತಳಿಯ ಮಾವು ಹೆಚ್ಚು ಬೆಳೆಯುಲಾಗುತ್ತಿದೆ .

ಮಾವು ಬೆಳೆ ಎರಡು ವರ್ಷಕ್ಕೊಮ್ಮೆ ಉತ್ತಮ ಇಳುವರಿ ಸಿಗುತ್ತದೆ . ಕಳೆದ ವರ್ಷ ಮತ್ತು ಈ ವರ್ಷ ಉತ್ತಮ ಬೆಳೆಯಾಗಿದ್ದರೂ ಕೋವಿಡ್ ಮಾರಿ ರೈತರನ್ನು ಕಾಡುತ್ತಿದೆ . ಒಂದು ವರ್ಷ ಉತ್ತಮ ಬೆಳೆಯಾದರೆ ಮತ್ತೊಂದು ವರ್ಷ ಕಡಿಮೆ ಫಸಲು ಸಿಗುತ್ತದೆ , ಈ ಬಾರಿ ಆಲಿಕಲ್ಲುಳೆ , ಬಿರಳಿಯ ಪ್ರತಾಪ ಇಲ್ಲದ ಕಾರಣ ಮರಗಳಲ್ಲಿ ಉತ್ತಮ ಫಸಲು ಇದೆ ಆದರೆ ಕೋವಿಡ್ ಲಾಕ್ಡೌನ್ ನಿಂದಾಗಿ ಮಾರುಕಟ್ಟೆಯಲ್ಲಿ ಬೆಲೆ ಸಿಗದೇ ರೈತ ಮತ್ತು ವ್ಯಾಪಾರಸ್ಥರಿಗೆ  ಕಂಗೆಡುವಂತಾಗಿದೆ .    
         
ಈ ಬಾರಿ ಮಾವಿನ ಕಾಯಿಗೆ ಬೆಲೆ ಸಿಗದೇ  ಮಾವು ಬೆಳೆಗಾರರ ಸಂಕಷ್ಟಕ್ಕೆ ಸಂಕಷ್ಟಕ್ಕೆ ಸಿಲುಕಿದ್ದಾರೆ.  ಕಾಯಿಗಳನ್ನು ಕೊಯ್ಲುಮಾಡಿ ತಂದು ಮಾರುಕಟ್ಟೆಯಲ್ಲಿ ರಾಶಿ ಹಾಕುತ್ತಿದ್ದಾರೆ.

‘ರಸ ತಯಾರಿಕೆಗೆ ಹೋಗುವ ತೊತಾಪುರಿ ಮಾವು ಕಾಯಿ ಟನ್‌ಗೆ ₹8 ಸಾವಿರದಂತೆ ಮಾರಾಟ ವಾಗುತ್ತಿದೆ. ಬಣ್ಣದ ತೊತಾಪುರಿ ಮಾವು ಕಾಯಿಯನ್ನು ತಿನ್ನಲು ಖರೀದಿಸಲಾಗುತ್ತದೆ. ಅಂಥ ಕಾಯಿಯ ಬೆಲೆ ಟನ್‌ಗೆ ₹ 12-15 ಸಾವಿರದಂತೆ ಖರೀದಿಯಾಗುತ್ತಿದೆ.ಉಳಿದಂತ  ಬಾದಾಮಿ ಬೆಲೆ ಟನ್‌ಗೆ ₹ 42 – 55 ಸಾವಿರ ,ಲಾಲ್ ಬಾಗ್ (ರಾಜಗೀರಾ) ಮಾವು ಟನ್ ಗೆ ₹ 10-15 ಸಾವಿರ , ಮಲ್ಲಿಕಾ ಕಾಯಿಯ ಬೆಲೆ ಟನ್‌ಗೆ ₹ 20-25 ಸಾವಿರ ,ಬೇನಿಷಾ ಕಾಯಿಯ ಬೆಲೆ ಟನ್‌ಗೆ ₹ 18-22 ಸಾವಿರ ,ಮಾಲ್ಗೋಬಾ ಕಾಯಿಯ ಬೆಲೆ ಟನ್‌ಗೆ ₹ 40-50 ಸಾವಿರ ,ಶೇಕರ್ ಬೀಜ್ ಕಾಯಿಯ ಬೆಲೆ ₹ 30-45 ಸಾವಿರ , ಕಲಾ ಪಹಡಾ ಕಾಯಿಯ ಬೆಲೆ ಟನ್‌ಗೆ ₹ 40-45 ಸಾವಿರ , ರಾಸ್ ಪುರಿ ಕಾಯಿಯ ಬೆಲೆ ಟನ್‌ಗೆ ₹ 10  ಸಾವಿರ, ಇಮಾಮ್ ಪಸಂದ್ ಕಾಯಿಯ ಬೆಲೆ ಟನ್‌ಗೆ ₹ 50 – 65 ಸಾವಿರ, ನಾಟಿ ₹ 4 ಸಾವಿರಕ್ಕೆ ಮಾರಾಟವಾಗುತ್ತಿದೆ.

ಇತ್ತೀಚಿನ ಸುದ್ದಿ

ಜಾಹೀರಾತು