ಇತ್ತೀಚಿನ ಸುದ್ದಿ
ಕೂಡ್ಲಿಗಿ: ಸಾರ್ವಜನಿಕ ಆಸ್ಪತ್ರೆಯಲ್ಲಿ ಸಾಮೂಹಿಕ ಸೀಮಂತ ಕಾರ್ಯಕ್ರಮ
09/03/2022, 18:54
ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ
info.reporterkarnataka@gmail.com
ಜಿಲ್ಲೆಯ ಕೂಡ್ಲಿಗಿ ತಾಲೂಕು ಸಾವ೯ಜನಿಕ ಆಸ್ಪತ್ರೆ ಯಲ್ಲಿ ಪ್ರದಾನ ಮಂತ್ರಿ ಮಾತೃ ವಂದನಾ ದಿನಾಚರಣೆ ಪ್ರಯುಕ್ತ ತಾಲೂಕು ಸಾವ೯ಜನಿಕ ಆಸ್ಪತ್ರೆಯ ವತಿಯಿಂದ ಗಭಿ೯ಣಿ ಸ್ತ್ರೀಯರಿಗೆ ಹೆಚ್.ಐ.ವಿ ಹಾಗೂ ಏಡ್ಸ್ ವಿಚಾರಗಳ ಕುರಿತು ಜಾಗೃತಿ ಮೂಡಿಸುವ ಹಿನ್ನಲೆಯಲ್ಲಿ ತಾಯಿಯಿಂದ ಮಗುವಿಗೆ ಹೆಚ್.ಐ.ವಿ ಸೋಂಕು ಹರಡುವಿಕೆ ನಿಮೂ೯ಲನಾ ಆಂದೋಲನ ಕಾರ್ಯಕ್ರಮ ಹಿನ್ನೆಲೆಯಲ್ಲಿ ಸಾಮೂಹಿಕ ಸೀಮಂತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶಾರದಾ ಬಾಯಿ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಸರಸ್ವತಿ ರಾಘವೇಂದ್ರ, ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ಷಣ್ಮುಖ ನಾಯ್ಕ, ಕಿವಿ ಮೂಗು ಗಂಟಲು ತಜ್ಞರಾದ ಡಾ ಮನ್ಸುರ್ ಆಲಿ, ಆಸ್ಪತ್ರೆಯ ಸಹಾಯಕ ಆಡಳಿತ ಅಧಿಕಾರಿಗಳಾದ ವೀರಣ್ಣ, ಆಸ್ಪತ್ರೆಯ ಅಧೀಕ್ಷಕರಾದ ಕೆ.ಬಿ.ಎಂ ವೀರಭದ್ರಯ್ಯ, ಹಿರಿಯ ಆರೋಗ್ಯ ಮೇಲ್ವಿಚಾರಕರಾದ ಚಿದಾನಂದಪ್ಪ ವೇದಿಕೆಯಲ್ಲಿದ್ದರು.
ಎನ್.ಸಿ.ಡಿ. ಆಪ್ತ ಸಮಾಲೋಚಕರಾದ ನಾಗರತ್ನ, ಗಂಗಮ್ಮ, ವೇದಾವತಿ, ವಿನಾಯಕ, ಬೋರಣ್ಣ, ಆರ್.ಕೆ.ಎಸ್.ಕೆ. ಆಪ್ತ ಸಮಾಲೋಚಕರಾದ ಓಬಣ್ಣ,ಕೆ. ಪ್ರಶಾಂತ ಕುಮಾರ್, ಆಶಾ ಕಾರ್ಯಕರ್ತೆಯರಾದ ಕಿರಿಯರು, ಆರೋಗ್ಯ ಸಹಾಯಕರಾದ ಸುನೀತಾ,
ಸಾವಿತ್ರಿ, ಉಮಾ, ಶುಶ್ರೂಷಾಧಿಕಾರಿಗಳಾದ ರೇಣುಕಾ, ಶಶಿಕಲಾ, ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆಯ 40 ಜನ ಗಭಿ೯ಣಿ ಮಹಿಳೆಯರಿಗೆ ಈ ಸಂದರ್ಭದಲ್ಲಿ ಸೀಮಂತ ಸೇವೆ ಜರುಗಿಸಲಾಯಿತು.