ಇತ್ತೀಚಿನ ಸುದ್ದಿ
ಮಾಳಿ- ಮಾಲಗಾರ ಸಮಾಜದ ಅಭಿವೃದ್ಧಿಗೆ ಅನುದಾನ ಘೋಷಣೆ: ಸಿಎಂಗೆ ಮುರಿಗೆಪ್ಪ ಮಾಲಗಾರ ಅಭಿನಂದನೆ
09/03/2022, 09:11
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಮಾಳಿ- ಮಾಲಗಾರ ಸಮಾಜ ಸೇರಿ 9 ಹಿಂದುಳಿದ ಸಮುದಾಯದ ಅಭಿವೃದ್ಧಿಗೆ 400 ಕೋಟಿ ಅನುದಾನವನ್ನು ಘೋಷಣೆ ಮಾಡಿದ ಬಡವರ ಬಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಹಾಗೂ ಮಾಲಗಾರ ಸಮಾಜದ ಬೇಡಿಕೆ ಈಡೇರಿಸಲಿಕ್ಕೆ ಮೊದಲು ಸಹಕರಿಸಿದ ಕೆ ಎಮ್ ಅಧ್ಯಕ್ಷ ಹಾಗೂ ಅರಬಾಂವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರಿಗೆ ಮಾಳಿ / ಮಾಲಗಾರ ಸಮಾಜ ಹಾಗೂ ಹಳ್ಳೂರ ಗ್ರಾಮದ ಯುವ ಮುಖಂಡ ಸಮಾಜ ಸೇವಕ ಮುರಿಗೆಪ್ಪ ಮಾಲಗಾರ ಅವರು ಅಭಿನಂದನೆಗಳು ಸಲ್ಲಿಸಿದ್ದಾರೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷಾಚರಣೆ ಸಂದರ್ಭದಲ್ಲಿ 2022-23ನೇ ಸಾಲಿನ ಆಯವ್ಯಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದಲ್ಲಿರುವ 25ರಿಂದ 30 ಲಕ್ಷ ಜನಸಂಖ್ಯೆ ಹೊಂದಿರುವ ರಾಜಕೀಯ, ಸಾಮಾಜಿಕವಾಗಿ ಹಿಂದುಳಿದ ಮಾಲಗಾರ -ಮಾಳಿ ಸಮಾಜದ ಬಹುದಿನಗಳ ಬೇಡಿಕೆಯಾದ ನೀಲೂರು ನಿಂಬೆಕ್ಕಾದೇವಿ ಜನ್ಮ ಸ್ಥಳ ಅಭಿವೃದ್ಧಿ ಪಡಿಸುವುದು, ದೇಶದ ಮೊದಲ ಶಿಕ್ಷಕಿ ಸಾವಿತ್ರಿ ಬಾಯಿ ಪುಲೆಯವರ ಹೆಸರಿನಲ್ಲಿ ವಾರ್ಷಿಕ ರಾಜ್ಯ ಪ್ರಶಸ್ತಿ ನೀಡುವುದು ಹಾಗೂ ಮಾಳಿ- ಮಾಲಗಾರ ಸಮಾಜ ಸೇರಿ 9 ಹಿಂದುಳಿದ ಸಮುದಾಯದ ಅಭಿವೃದ್ಧಿಗೆ 400 ಕೋಟಿ ಅನುದಾನವನ್ನು ಘೋಷಣೆ ಮಾಡಿದ್ದಾರೆ.
ಮುಖ್ಯಮಂತ್ರಿಯವರಿಗೆ ಮೊದಲು ಬೇಡಿಕೆ ಈಡೇರಿಸಲು ಪತ್ರ ಕಳುಹಿಸಿದ ಕುಡಚಿ ಶಾಸಕ ಪಿ ರಾಜೀವ ಸೇರಿದಂತೆ ಸಮಾಜದ ಬೇಡಿಕೆ ಈಡೇರಿಸಲಿಕ್ಕೆ ಸರಕಾರಕ್ಕೆ ಸಲಹೆ ನೀಡಿದ ಶಾಸಕರು, ಸಚಿವರು, ವಿಧಾನ ಪರಿಷತ್ ಸದಸ್ಯರು, ಸಮಾಜದ ಮುಖಂಡರಿಗೆ ಮಾಳಿ / ಮಾಲಗಾರ ಸಮಾಜ ಹಾಗೂ ಹಳ್ಳೂರ ಗ್ರಾಮದ ಯುವ ಮುಖಂಡ ಸಮಾಜ ಸೇವಕ ಮುರಿಗೆಪ್ಪ ಮಾಲಗಾರ ಅವರು ಅಭಿನಂದನೆಗಳು ಸಲ್ಲಿಸಿದ್ದಾರೆ.