ಇತ್ತೀಚಿನ ಸುದ್ದಿ
ಮೈಸೂರು: ಅನಿಲ ಸೋರಿಕೆಯಿಂದ 20 ಮಂದಿ ಅಸ್ವಸ್ಥ; ರಸ್ತೆ ಬಂದ್, ಸಾರ್ವಜನಿಕರ ಪ್ರವೇಶ ನಿಷೇಧ
08/03/2022, 23:54
ಮೈಸೂರು(reporterkarnataka.com): ಮೈಸೂರು ಸಮೀಪದ ವಾಣಿ ವಿಲಾಸ ನೀರು ಸರಬರಾಜು ಕ್ಲೋರಿನ್ ಘಟಕದಲ್ಲಿ ನಡೆದ ಅನಿಲ ಸೋರಿಕೆಯಿಂದಾಗಿ ಕನಿಷ್ಠ 20 ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಂಗಳವಾರ ಸಂಜೆ ಸುಮಾರು 4 ಗಂಟೆಗೆ ಈ ದುರಂತ ನಡೆದಿದ್ದು, ಇದರಿಂದಾಗಿ 20ಕ್ಕೂ ಮಿಕ್ಕಿದವರು ಅಸ್ವಸ್ಥರಾದ ಹಿನ್ನೆಲೆಯಲ್ಲಿ ಅವರನ್ನು ರೈಲ್ವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದುರ್ಘಟನೆಯ ಬಳಿಕ ಎಚ್ಚತ್ತ ಅಧಿಕಾರಿಗಳು ಜೆ.ಎಲ್.ಪಿ ರಸ್ತೆ – ವೆಂಕಟೇಶ್ವರ ದೇವಸ್ಥಾನದ ರಸ್ತೆಯನ್ನು ಬಂದ್ ಮಾಡಿ, ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಿದ್ದಾರೆ.
ರೈಲ್ವೇ ಇಲಾಖೆಗೆ ಸೇರಿದ ಸ್ಥಳದಲ್ಲಿ ಅನಿಲ ಸೋರಿಕೆಯಾಗಿದ್ದು, ಅಲ್ಲಿದ್ದ 20ಕ್ಕೂ ಮಿಕ್ಕಿದ ಕಾರ್ಮಿಕರು, ಸ್ಥಳೀಯ ನಿವಾಸಿಗಳಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಅಸ್ವಸ್ಥಗೊಂಡವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.