ಇತ್ತೀಚಿನ ಸುದ್ದಿ
ಮಾರ್ಚ್ 4: ರಾಜ್ಯಾದ್ಯಂತ ಅನುದಾನಿತ ಶಾಲಾ-ಕಾಲೇಜುಗಳು ಬಂದ್; ಏನಿವರ ಬೇಡಿಕೆ?
28/02/2022, 18:27
ಬೆಂಗಳೂರು:(reporterkarnataka.com): ರಾಜ್ಯದಾದ್ಯಂತ ಇರುವ ಅನುದಾನಿತ ಶಾಲಾ-ಕಾಲೇಜುಗಳ ನೌಕರರಿಗೂ ಪಿಂಚಣಿ ಸೌಲಭ್ಯವನ್ನು
ಒದಗಿಸುವಂತೆ ಒತ್ತಾಯಿಸಿ ಮಾರ್ಚ್ 4ರಂದು ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು.
ಅನುದಾನಿತ ಶಾಲಾ-ಕಾಲೇಜುಗಳ ನೌಕರರ ಸಂಘದ ರಾಜ್ಯಾಧ್ಯಕ್ಷ ಡಿ.ಸಿ ಗೋಪಿನಾಥ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ.
2006ರ ನಂತರ ನೇಮಕವಾದ ನೌಕರರಿಗೆ ನೂತನ ಪಿಂಚಣಿ ಯೋಜನೆ ಜಾರಿಗೊಳಿಸಲಾಗಿದೆ.
ಆದರೆ 2006ಕ್ಕೂ ಮೊದಲು ಹಳೆ ಪಿಂಚಣಿ ವ್ಯವಸ್ಥೆಯೇ ಜಾರಿಯಲ್ಲಿತ್ತು. ನೂತನ ಪಿಂಚಣಿ ಯೋಜನೆ ರದ್ದುಪಡಿಸುವಂತೆ ಕೋರಿದರೂ ಸರ್ಕಾರ ಇದುವರೆಗೆ ಕ್ರಮ ಕೈಗೊಂಡಿಲ್ಲ ಎಂದರು.
ಅನುದಾನಿತ ಶಾಲಾ-ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವಂತ ನೌಕರರಿಗೆ ಪಿಂಚಣಿ ಯೋಜನೆ ಸೌಲಭ್ಯವಿಲ್ಲ. ಜ್ಯೋತಿ ಸಂಜೀವಿನಿ ಯೋಜನೆಯನ್ನು ಜಾರಿಗೆ ತರಬೇಕು. ಅಲ್ಲದೇ ಸರ್ಕಾರಿ ಶಾಲಾ ಮಕ್ಕಳಿಗೆ ನೀಡುತ್ತಿರುವಂತ ಸೌಲಭ್ಯವನ್ನು ಅನುದಾನಿತ ಶಾಲೆಗಳಿಗೂ ನೀಡುವಂತೆ ಒತ್ತಾಯಿಸಿ ಮಾರ್ಚ್ 4ರಂದು ರಾಜ್ಯಾಧ್ಯಂತ ಶಾಲಾ-ಕಾಲೇಜು ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.