2:29 PM Monday6 - October 2025
ಬ್ರೇಕಿಂಗ್ ನ್ಯೂಸ್
ಕುಶಾಲನಗರ: ಸಂಬಂಧಿಕರ ಸಾವಿಗೆ ತೆರಳಿದ್ದ ಯುವಕ ಹಾರಂಗಿ ಮುಖ್ಯ ನಾಲೆಯಲ್ಲಿ ಈಜಲು ಹೋಗಿ… ಮೈಸೂರು ದಸರಾ ಜಂಬೂ ಸವಾರಿ: ಚಿತ್ರದುರ್ಗದ ಸ್ತಬ್ದಚಿತ್ರಕ್ಕೆ ಪ್ರಥಮ ಸ್ಥಾನ ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಗರ ಆತಂಕಗೊಳಿಸಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ Kodagu | ಡಿವೈಎಸ್ಪಿ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ ಅ. 16 ರವರೆಗೆ… ಹೆತ್ತಬ್ಬೆಯನ್ನೇ ಕೊಂದ ಪಾಪಿ ಪುತ್ರ: ಅಡುಗೆ ಮಾಡಿಲ್ಲ ಎಂಬ ಕಾರಣಕ್ಕೆ ಹತ್ಯೆ; ಆರೋಪಿಯ… Kodagu | ಮಂಜಿನ ನಗರಿ ಮಡಿಕೇರಿಯಲ್ಲಿ ಜನೋತ್ಸವಕ್ಕೆ ಜನಜoಗುಳಿ: ದಶ ಮಂಟಪಗಳಿಂದ ಶೋಭಾ… Bangaluru | ವೈದ್ಯ ದಂಪತಿಯಿಂದ ಮನೆಯಲ್ಲೇ ನವದುರ್ಗೆಯರ ಆರಾಧನೆ: ಸಾಲು ಸಾಲು ದಸರಾ… ಮಡಿಕೇರಿ ದಸರಾ ಶೋಭಯಾತ್ರೆಗೆ ತೆರೆ: ದಶಮoಟಪಗಳ ತೀರ್ಪುಗಾರರ ವಿರುದ್ದ ಆಕ್ರೋಶ; ಪ್ರತಿಭಟನೆ ಮುಂದಿನ ವರ್ಷವೂ ನಾನೇ ದಸರಾ ಪುಷ್ಪಾರ್ಚನೆ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ ಭರವಸೆಯ ನುಡಿ ಮೈಸೂರು ದಸರಾ: ಅರಮನೆ ಆವರಣದಲ್ಲಿ ಯದುವೀರ್ ಒಡೆಯರ್ ರಿಂದ ಶಮಿ ಪೂಜೆ

ಇತ್ತೀಚಿನ ಸುದ್ದಿ

ಕೊಡ್ಮಣ್: ಕೆನರಾ ಕಾಲೇಜಿನ ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರ

21/02/2022, 16:12

ಮಂಗಳೂರು(reporterkarnataka.com): ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರವು ವಿದ್ಯಾರ್ಥಿಗಳಿಗೆ ಹಳ್ಳಿ ಬದುಕಿನ ಪರಿಚಯವನ್ನು ಮಾಡಿಸುವುದರ ಜೊತೆಗೆ ಅವರ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿ ಎಂದು ಕೆನರಾ ಹೈಸ್ಕೂಲ್ ಅಸೋಸಿಯೇಶನ್ ನ ಪರ್ಯಾಯ ಖಜಾಂಚಿಗಳಾದ ಬಸ್ತಿ ಪುರುಷೋತ್ತಮ ಶೆಣೈ ಹೇಳಿದರು.

ಅವರು ಕೆನರಾ ಕಾಲೇಜಿನ ಎನ್ ಎಸ್ ಎಸ್ ಘಟಕವು “ವಿಜ್ಞಾನ ಮತ್ತು ವೈಜ್ಞಾನಿಕ ಮನೋಧರ್ಮಕ್ಕಾಗಿ ಯುವಜನತೆ” ಎಂಬ ಧ್ಯೇಯವಾಕ್ಯದಡಿಯಲ್ಲಿ ಕೊಡ್ಮಣ್ ನ ದ.ಕ.ಜಿ.ಪ.ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಏಳು ದಿನಗಳ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೊಡ್ಮಣ್ ಕಾಂತಪ್ಪ ಶೆಟ್ಟಿಯವರು ಮಾತನಾಡುತ್ತಾ ಮೂವತ್ನಾಲ್ಕು ವರ್ಷಗಳ ತಮ್ಮ ಹಾಗೂ ಕೆನರಾ ಕಾಲೇಜಿನ ಅವಿನಾಭಾವ ಸಂಬಂಧವನ್ನು ನೆನಪಿಸಿಕೊಳ್ಳುತ್ತಾ,ಕುಗ್ರಾಮವಾಗಿದ್ದ ಕೊಡ್ಮಣ್ ಗ್ರಾಮದ ಅಭಿವೃದ್ಧಿಯಲ್ಲಿ ಕೆನರಾ ಕಾಲೇಜಿನ ವಿದ್ಯಾರ್ಥಿಗಳ ಕೊಡುಗೆ ಅನನ್ಯ ಎಂದು ಶ್ಲಾಘಿಸಿದರು.

ಮೇರಮಜಲು ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾದ  ಪದ್ಮನಾಭ ಶೆಟ್ಟಿ ಕೊಟ್ಟಿಂಜ, ಕೊಡ್ಮಣ್ ಸರಕಾರಿ ಪೌಢಶಾಲೆಯ ಮುಖ್ಯೋಪಾಧ್ಯಾಯರಾದ  ರಾಮಚಂದ್ರ ರಾವ್, ಲಕ್ಷ್ಮೀಕಾಂತ ನಾಯಕ್ ಕೊಡ್ಮಣ್, ಗ್ರಾಮಪಂಚಾಯತ್ ಸದಸ್ಯರಾದ ಶ್ರೀಮತಿ ಹರಿಣಾಕ್ಷಿ ರಮೇಶ್ ಬಂಗೇರ,ಮಾತೃಮಂಡಳಿ ಸದಸ್ಯರಾದ ವೀಣಾ ಕೊಡ್ಮಣ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೆನರಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರೇಮಲತಾ ವಿ.ಅಧ್ಯಕ್ಷತೆ ವಹಿಸಿದ್ದರು.

ಕಾಲೇಜಿನ ರಾಸೆಯೋ ಯೋಜನಾಧಿಕಾರಿಗಳಾದ ಸೀಮಾ ಪ್ರಭು ಸ್ವಾಗತಿಸಿ,ವಾಣಿ ಯು.ಎಸ್.ವಂದಿಸಿದರು.ಸ್ವಯಂ ಸೇವಕಿ ಅನುಶ್ರೀ ನಿರೂಪಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು