3:50 PM Sunday19 - May 2024
ಬ್ರೇಕಿಂಗ್ ನ್ಯೂಸ್
ವಿಧಾನ ಪರಿಷತ್ ಚುನಾವಣೆ: ಮೇ 20ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನ ನಟಿ ಪವಿತ್ರಾ ಜಯರಾಂ ಸ್ನೇಹಿತ ಚಂದ್ರಕಾಂತ್ ಆತ್ಮಹತ್ಯೆ: ಸ್ನೇಹಿತೆ ಸಾವನ್ನಪ್ಪಿ ವಾರದೊಳಗೆ ಚಂದ್ರು… ವಿದ್ಯುತ್ ವೈರ್ ಗೆ ತಗಲಿದ ಅಲ್ಯುಮಿನಿಯಂ ಏಣಿ: ಕರೆಂಟ್ ಶಾಕ್ ನಿಂದ ಹಲಸಿನಹಣ್ಣು… ಸಿಸಿಬಿ ಪೊಲೀಸರ ಕಾರ್ಯಾಚರಣೆ: ಎಂಡಿಎಂಎ ಸಾಗಾಟ ಮಾಡುತ್ತಿದ್ದ 4 ಮಂದಿಯ ಬಂಧನ; 14.85… ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಡಾ. ಎಸ್.ಆರ್. ಹರೀಶ್ ಆಚಾರ್ಯ ನಾಮಪತ್ರ ಸಲ್ಲಿಕೆ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ: ಜೂನ್ 1ರಂದು ಮತದಾನ ಲೋಕಸಭೆ ಚುನಾವಣೆಯ ಬಳಿಕ ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಮಹಾಸ್ಫೋಟ: ಸಿಎಂ ಸಿದ್ದರಾಮಯ್ಯ ಭವಿಷ್ಯ ಜಾಗತಿಕ ತಾಪಮಾನ: ಕೆಟ್ಟರೂ ಬಾರದ ಬುದ್ದಿ; ಕಾರ್ಕಳ ಹೆದ್ದಾರಿ ಕಾಮಗಾರಿಗೆ ಸಾವಿರಾರು ಮರ ಬಲಿ;… ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೌಕರರ ಮಿಂಚಿನ ಮುಷ್ಕರ: ದೇಶದಲ್ಲಿ ಹಲವು ವಿಮಾನಗಳ ಹಾರಾಟ… ಲೈಂಗಿಕ ದೌರ್ಜನ್ಯ, ಮಹಿಳೆಯ ಅಪಹರಣ ಪ್ರಕರಣ: ಮಾಜಿ ಸಚಿವ ಎಚ್.ಡಿ. ರೇವಣ್ಣಗೆ ಮೇ…

ಇತ್ತೀಚಿನ ಸುದ್ದಿ

ಮಾತಾ ಅಮೃತಾನಂದಮಯಿ ಮಠದ ಶ್ರೀ ಬ್ರಹ್ಮಸ್ಥಾನ ಕ್ಷೇತ್ರದಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವ

19/02/2022, 22:35

ಮಂಗಳೂರು(reporterkarnataka.com):ನಗರದ ಬೋಳೂರಿನಲ್ಲಿರುವ ಮಾತಾ ಅಮೃತಾನಂದಮಯಿ ಮಠದ ಶ್ರೀ ಬ್ರಹ್ಮಸ್ಥಾನ ಕ್ಷೇತ್ರದಲ್ಲಿ 14ನೆಯ ಪ್ರತಿಷ್ಠಾ ವರ್ಧಂತ್ಯುತ್ಸವವನ್ನು ? ಶುಕ್ರವಾರ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಆ ಪ್ರಯುಕ್ತ  ಬೆಳಗ್ಗೆ 5 ಗಂಟೆಗೆ ಅಷ್ಟ ದ್ರವ್ಯ ಮಹಾಗಣಪತಿ ಹೋಮದ ಮೂಲಕ ಕಾರ್ಯಕ್ರಮ ಪ್ರಾರಂಭ ಗೊಂಡಿತು.ಅಮ್ಮನವರ ಸಂಕಲ್ಪದಂತೆ ಲೋಕ ಕಲ್ಯಾಣಾರ್ಥ ಪ್ರಾರ್ಥನೆ ಯೊಂದಿಗೆ ಉದಯಾಸ್ತಮಾನ ವಿಶೇಷ ಪೂಜೆ,   ಸಾಮೂಹಿಕ ಶ್ರೀ ಲಲಿತಾ ಸಹಸ್ರನಾಮ ಅರ್ಚನೆ ,ಬೆಳಗ್ಗೆ10.00 ಗಂಟೆಗೆ ಶ್ರೀ ಧನ್ವಂತರಿ ಹೋಮ, ಭಜನೆ ಮತ್ತು ಮಂತ್ರ ಪಠನ,ಮಧ್ಯಾಹ್ನ12.00 ಸಂಪೂಜ್ಯ ಸ್ವಾಮಿನಿ ಮಂಗಳಾಮೃತ ಪ್ರಾಣ ಇವರಿಂದನಡೆದ  ಸತ್ಸಂಗ ಕಾರ್ಯಕ್ರಮದಲ್ಲಿ ಆಶೀರ್ವಚನವಿತ್ತು ಅಮ್ಮನವರ ಬಳಿಬಂದ ಭಕ್ತರ ಸಂಕಷ್ಟಗಳ ಪರಿಹಾರಕ್ಕೆಂದೇ ವಿಶೇಷವಾಗಿ ಬ್ರಹ್ಮಸ್ಥಾನಗಳನ್ನು ನಿರ್ಮಾಣ ಮಾಡಲಾಗಿದೆ.ನಾಲ್ಕು ದ್ವಾರಗಳ ಈ ದೇವಸ್ಥಾನವು ಮಹಾತ್ಮರ ಪ್ರಾಣ ಪ್ರತಿಷ್ಠೆಯಿಂದಾಗಿ ಶ್ರೇಷ್ಠವಾದ ಕ್ಷೇತ್ರವೆನಿಸಲ್ಪಟ್ಟಿದೆ ಎಂದರು. ಕುಜ ರಾಹು  ಶನಿಗಳ ಸಂದರ್ಭದಲ್ಲಿ ದುಷ್ಪರಿಣಾಮಗಳು ಹೆಚ್ಚು ಶಕ್ತಿಯುತವಾಗಿರುತ್ತದೆ.ಅಂತಹ ಸಂದರ್ಭಗಳಲ್ಲಿ ಮನುಷ್ಯನಿಗೆ ಜೀವನ ನಡೆಸಲು ಕಷ್ಟವಾಗುವುದನ್ನು ಅಮ್ಮ ನೋಡಿದ್ದಾರೆ ಮತ್ತು ಆತನ ಯೋಚನೆ ಮಾಡುವ ಶಕ್ತಿ, ಕ್ರಿಯಾತ್ಮಕವಾದ ಬುದ್ಧಿ ಯಾವುದೂ ಪ್ರಯೋಜನಕ್ಕೆ ಬಾರದಿರುವ ಸ್ಥಿತಿಯನ್ನು ಕಂಡು ಅಮ್ಮನವರು ದೋಷನಿವಾರಣಾ ಪೂಜೆಯ ವಿಶೇಷ ಪದ್ಧತಿಗಳನ್ನು ಬ್ರಹ್ಮಸ್ಥಾನ ಕ್ಷೇತ್ರದಲ್ಲಿ ಪ್ರಾರಂಭಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ,ಗಾಂಧಿನಗರ ಇಲ್ಲಿನ ಶತಮಾನೋತ್ಸವ ಪ್ರಯುಕ್ತ ಆ ಶಾಲೆಗೆ ಅಗತ್ಯವಾದ 1 ಲಕ್ಷ ರೂ. ಮೌಲ್ಯದ ಬೆಂಚು ಮತ್ತು ಡೆಸ್ಕ್ ಗಳನ್ನು ಮಾತಾ ಅಮೃತಾನಂದಮಯಿ ಮಠದ ಕೊಡುಗೆಯಾಗಿ ನೀಡಲಾಯಿತು.

ಮಠಾಧಿಪತಿ ಸಂಪೂಜ್ಯ ಸ್ವಾಮಿನಿ ಮಂಗಳಾಮೃತ ಪ್ರಾಣ ಇವರು ಪೂಜೆ ಸಲ್ಲಿಸಿ  ಗಾಂಧಿನಗರ ಶಾಲೆಯ ಮುಖ್ಯ ಶಿಕ್ಷಕಿ ಯಶೋದಾರವರಿಗೆ ಹಸ್ತಾಂತರಿಸಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ದೀಪಕ್ ಸುವರ್ಣ, ಸೇವಾ ಸಮಿತಿಯ ಗೌರವಾಧ್ಯಕ್ಷ ಡಾ.ಜೀವರಾಜ್ ಸೊರಕೆ, ಅಧ್ಯಕ್ಷ ಡಾ.ವಸಂತ ಕುಮಾರ್ ಪೆರ್ಲ,  ಪ್ರಸಾದ್‌ ರಾಜ್ ಕಾಂಚನ್,ಪಂಕಜ್ ವಸಾನಿ, ಸುರೇಶ್ ಅಮೀನ್ ಮೊದಲಾದವರು ಉಪಸ್ಥಿತರಿದ್ದರು.

ಸಂಜೆ  ಮಹಾ ಸುದರ್ಶನ ಹೋಮ,ಕಲಶ ಪೂಜೆ,ಪಂಚಗವ್ಯ ನವಕಮ್( ಬ್ರಹ್ಮ ಕಲಶ) ಕಾರ್ಯಕ್ರಮದಲ್ಲಿ ಮಂಗಳೂರು ಉಪಮೇಯರ್ ಸುಮಂಗಲಾ ರಾವ್ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಿದ್ದರು. ದಕ್ಷಿಣ ಕನ್ನಡ, ಉಡುಪಿ,ಬೆಂಗಳೂರುಗಳಿಂದ ಆಗಮಿಸಿದ ನೂರಾರು ಭಕ್ತರು ಭಾಗವಹಿಸಿ ಕಲಶ ಸಮರ್ಪಣೆ ಮಾಡಿದರು.ಆನಂತರ ಮಹಾ ಅಭಿಷೇಕ , ಆರತಿ ಮತ್ತು ಪ್ರಸಾದ ವಿತರಣೆ ಮಾಡಲಾಯಿತು.

ಇತ್ತೀಚಿನ ಸುದ್ದಿ

ಜಾಹೀರಾತು