5:14 AM Sunday5 - October 2025
ಬ್ರೇಕಿಂಗ್ ನ್ಯೂಸ್
ಕುಶಾಲನಗರ: ಸಂಬಂಧಿಕರ ಸಾವಿಗೆ ತೆರಳಿದ್ದ ಯುವಕ ಹಾರಂಗಿ ಮುಖ್ಯ ನಾಲೆಯಲ್ಲಿ ಈಜಲು ಹೋಗಿ… ಮೈಸೂರು ದಸರಾ ಜಂಬೂ ಸವಾರಿ: ಚಿತ್ರದುರ್ಗದ ಸ್ತಬ್ದಚಿತ್ರಕ್ಕೆ ಪ್ರಥಮ ಸ್ಥಾನ ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಗರ ಆತಂಕಗೊಳಿಸಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ Kodagu | ಡಿವೈಎಸ್ಪಿ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ ಅ. 16 ರವರೆಗೆ… ಹೆತ್ತಬ್ಬೆಯನ್ನೇ ಕೊಂದ ಪಾಪಿ ಪುತ್ರ: ಅಡುಗೆ ಮಾಡಿಲ್ಲ ಎಂಬ ಕಾರಣಕ್ಕೆ ಹತ್ಯೆ; ಆರೋಪಿಯ… Kodagu | ಮಂಜಿನ ನಗರಿ ಮಡಿಕೇರಿಯಲ್ಲಿ ಜನೋತ್ಸವಕ್ಕೆ ಜನಜoಗುಳಿ: ದಶ ಮಂಟಪಗಳಿಂದ ಶೋಭಾ… Bangaluru | ವೈದ್ಯ ದಂಪತಿಯಿಂದ ಮನೆಯಲ್ಲೇ ನವದುರ್ಗೆಯರ ಆರಾಧನೆ: ಸಾಲು ಸಾಲು ದಸರಾ… ಮಡಿಕೇರಿ ದಸರಾ ಶೋಭಯಾತ್ರೆಗೆ ತೆರೆ: ದಶಮoಟಪಗಳ ತೀರ್ಪುಗಾರರ ವಿರುದ್ದ ಆಕ್ರೋಶ; ಪ್ರತಿಭಟನೆ ಮುಂದಿನ ವರ್ಷವೂ ನಾನೇ ದಸರಾ ಪುಷ್ಪಾರ್ಚನೆ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ ಭರವಸೆಯ ನುಡಿ ಮೈಸೂರು ದಸರಾ: ಅರಮನೆ ಆವರಣದಲ್ಲಿ ಯದುವೀರ್ ಒಡೆಯರ್ ರಿಂದ ಶಮಿ ಪೂಜೆ

ಇತ್ತೀಚಿನ ಸುದ್ದಿ

ಬಿಸಿಲಿಗೆ ಮನುಷ್ಯ ದೇಹದಲ್ಲಿ ನಿರ್ಜಲೀಕರಣ: ಇದು ಹೇಗೆ ಉಂಟಾಗುತ್ತದೆ? ಇದನ್ನು ತಡೆಯುವುದು ಹೇಗೆ?

19/02/2022, 10:05

ಬೇಸಿಗೆಯ ಸುಡುವ ಬಿಸಿಲು ಹಾಗು ಶುಷ್ಕ ತಾಪಮಾನದಿಂದಾಗಿ ನಮ್ಮ ದೇಹದ ಮೇಲೆ ಅನೇಕ ಪರಿಣಾಮ ಬೀರಿ ಕೆಲವೊಂದು ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ.

ಇದಕ್ಕಾಗಿ ನಾವು ನಮ್ಮ ದೇಹದ ತಾಪಮಾನವನ್ನು ನಿಭಾಯಿಸಲು ಆಹಾರದಲ್ಲಿ ಕೆಲವು ಬದಲಾವಣೆಯನ್ನು ಮಾಡಬೇಕಾಗುತ್ತದೆ.

ನಿರ್ಜಲೀಕರಣ, ವಿಟಮಿನ್ಗಳ ಕೊರತೆ, ಅಜೀರ್ಣದಂತಹ ಸಮಸ್ಯೆ ಹೆಚ್ಚಾಗಿ ಉಂಟಾಗುತ್ತದೆ.

ಅಲ್ಲದೇ ಬೇಸಿಗೆಯಲ್ಲಿ ಟೈಫಾಯ್ಡ್, ಡೈಏರಿಯಾ, ಫುಡ್ ಪಾಯಿಸನಿಂಗ್ ನಂತಹ ಸಮಸ್ಯೆಗಳು ಸುಲಭವಾಗಿ ಹರಡುವ ಸಾಧ್ಯತೆ ಇರುವುದರಿಂದ  ಶುಚಿಯಾದ, ದೇಹವನ್ನು ತಂಪಾಗಿರಿಸುವ, ಸುಲಭವಾಗಿ ಜೀರ್ಣವಾಗುವ ಲಘು ಆಹಾರವನ್ನು ಸೇವಿಸುವುದು  ಒಳಿತು.

ಪ್ರಾಕೃತಿಕವಾಗಿ ಬೇಸಿಗೆ ಕಾಲದಲ್ಲಿ ದೊರೆಯುವ ಹಣ್ಣು ತರಕಾರಿಗಳನ್ನು ತಿನ್ನುವುದರಿಂದ ದೇಹಕ್ಕೆ ಬೇಕಾದ ಪೋಷಕಾಂಶ ದೊರೆಯುವುದಲ್ಲದೆ ನಿರ್ಜಲೀಕರಣ ಉಂಟಾಗದಂತೆ ತಡೆಯುತ್ತದೆ.

ತುಂಬಾ ಕೋಲ್ಡ್ ಇರುವ ಪಾನೀಯ, ಸಾಫ್ಟ್ ಡ್ರಿಂಕ್ಸ್, ಕೇಫಿನ್, ಆಲ್ಕೋಹೋಲ್, ಸಕ್ಕರೆ ಹೊಂದಿರುವ ಪಾನಿಯಗಳಲ್ಲಿ ಅತಿಯಾದ ಆಮ್ಲೆಯತೆ ಇರುವುದರಿಂದ ದೇಹದಿಂದ ನೀರಿನಾಂಶ ಮೂತ್ರದ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಹೊರಹೋಗಿ ನಿರ್ಜಲೀಕರಣ ಉಂಟಾಗುತ್ತದೆ.ಆದ್ದರಿಂದ ಇಂತಹ ಪಾನೀಯಗಳನ್ನು ಸೇವಿಸದೇ ಇರುವುದು ಒಳಿತು.

ಬೆವರುವಿಕೆಯಿಂದಾಗಿ ದೇಹದಲ್ಲಿನ ಎಲೆಕ್ಟ್ರೋಲೈಟ್ ಅಸಮತೋಲನ ಆಗುತ್ತದೆ ಅದಕ್ಕಾಗಿ ಹೆಚ್ಚಿನ ಪ್ರಮಾಣದಲ್ಲಿ ನಿಂಬೆ ಜ್ಯೂಸ್, ಎಳೆನೀರು,ಮೊಸರು, ನೀರು, ಹಣ್ಣುಗಳ ಸೇವನೆಮಾಡಬೇಕು.

ಕಲ್ಲಂಗಡಿ ಹಣ್ಣು:

ಶೇಕಡಾ  92%ನಷ್ಟು ನೀರಿನಾಂಶ  ಹೊಂದಿದೆ.ಇದರಲ್ಲಿ ಇರುವ ಲೈಕೋಪಿನ್ ಎನ್ನುವ ಅಂಶ ನಮ್ಮ ಚರ್ಮವನ್ನು ಸೂರ್ಯನ  ಕಿರಣಗಳಿಂದ ರಕ್ಷಿಸುತ್ತದೆ.ಮಾತ್ರವಲ್ಲದೆ ತೂಕ ಕಡಿಮೆಯಾಗಲು ಸಹಾಯಕ.

ಮೊಸರು/ಮಜ್ಜಿಗೆ :

ಇದರಲ್ಲಿ ಇರುವ ಪ್ರೊಬೈಯೋಟಿಕ್ ಇರುವುದರಿಂದ ದೇಹಕ್ಕೆ ಬೇಕಾದ ಒಳ್ಳೆಯ ಬ್ಯಾಕ್ತ್ಟೇರಿಯಾ ಬೆಳವಣಿಗೆಗೆ ಸಹಾಯಕವಾಗಿ ಜೀರ್ಣಕ್ರೀಯನ್ನು ವೃದ್ಧಿಸುತ್ತದೆ.ಮೊಸರಿಗೆ ಪುದೀನ ಎಲೆಗಳನ್ನು, ಶುಂಠಿ, ಜೀರಿಗೆ ಸೇರಿಸಿ ಕುಡಿಯುವುದು ಉತ್ತಮ.

ಮುಳ್ಳುಸೌತೆ :

ಇದರಲ್ಲಿ ಫೈಬರ್, ನೀರು ಹೆಚ್ಚಿನ ಪ್ರಮಾಣದಲ್ಲಿ ಇದೆ. ಇದಕ್ಕೆ ಉಪ್ಪು, ನಿಂಬೆ ರಸ ಸೇರಿಸಿ ಸಲಾಡ್ ರೂಪದಲ್ಲಿ ಸೇವಿಸುವುದು ಉತ್ತಮ.

ಸೋಂಪು ಕಾಳು :

ನಾರು, ಪೊಟ್ಯಾಶಿಯಂ, ವಿಟಮಿನ್ C ಹೆಚ್ಚಿರುವುದರಿಂದ ಜೀರ್ಣಕ್ರಿಯೆಗೆ ಒಳಿತು.

ಮಾವಿನ ಹಣ್ಣು :

ಮಲಬದ್ಧತೆ, IBS  ತೊಂದರೆ ನಿವಾರಿಸುತ್ತದೆ.

ಎಳೆ ನೀರು :

ಇದು ನಿರ್ಜಲೀಕರಣ ತಡೆಯುವ ಅತ್ಯುತ್ತಮವಾದ  ನೈಸರ್ಗಿಕ ಪಾನೀಯ. ಇದರಲ್ಲಿ  ಎಲೆಕ್ಟ್ರಿರೊಲೈ ಟ್ ಖಾನಿಜಾಂಶವಿದೆ.

ಇದು ದಣಿವನ್ನಾರಿಸುದಲ್ಲದೆ ಕಿಡ್ನಿ, ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.

ನಿಂಬೆ ಪಾನಕ :

ನಿಂಬೆ ಪಾನಕಕ್ಕೆ ಪುದೀನ ಸೇರಿಸಿ ಕುಡಿಯುದರಿಂದ ನಿರ್ಜಲೀಕಾರಣವಾಗದಂತೆ ತಡೆಯುತ್ತದೆ. ಇದರೊಂದಿಗೆ ಟೊಮೇಟೊ, ಬಸಳೆ, ನುಗ್ಗೆ ಸೊಪ್ಪು, ಕೊತ್ತಂಬರಿ ಸೊಪ್ಪಿನಂತಹ ಹಸಿರು ತರಕಾರಿಗಳನ್ನು ಸೇವನೆ ಮಾಡುವುದರಿಂದ ದೇಹದ ಉಷ್ಣಾಂಶವನ್ನುನಿಯಂತ್ರಿಸುವುದಲ್ಲದೆ, ಬೊಜ್ಜು, ಅಜೀರ್ಣದಂತಹ ಸಮಸ್ಯೆಗಳಿಂದ ಪಾರಾಗಬಹುದು.

ಡಾ. ಭವ್ಯ ಶೆಟ್ಟಿ

ಹೋಮಿಯೋಪತಿ ವೈದ್ಯರು

ಶ್ರೀ ಗುರು ಹೋಮಿಯೋಪತಿ ಕ್ಲೀನಿಕ್ ಬೆಳುವಾಯಿ 

📞8904316163

ಇತ್ತೀಚಿನ ಸುದ್ದಿ

ಜಾಹೀರಾತು